Vastu Tips For Wealth: ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಯಾರಿಂದಲೂ ಉಚಿತವಾಗಿ ಪಡೆಯಬೇಡಿ

Mon, 23 Oct 2023-6:32 am,

ವಾಸ್ತು ಶಾಸ್ತ್ರದಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಜೀವನದಲ್ಲಿ ಆರ್ಥಿಕ ಪ್ರಗತಿಗಾಗಿ, ಸುಖ ಸಂತೋಷದ ಜೀವನಕ್ಕಾಗಿ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. 

ವಾಸ್ತು ಶಾಸ್ತ್ರದಲ್ಲಿ ಹಲವು ಪ್ರಮುಖ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ಜೀವಂದಲ್ಲಿ ಪ್ರಗತಿಯನ್ನು ಕಾಣಬಬಹುದು ಎಂದು ನಂಬಲಾಗಿದೆ. 

ಅದೇ ರೀತಿ ವಾಸ್ತುವಿನ ಕೆಲವು ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಜೀವನವು ತೊಂದರೆಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಯಾರಿಂದಲೂ ಉಚಿತವಾಗಿ ತೆಗೆದುಕೊಳ್ಳಬಾರದು. ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಯಾರಿಂದಲೂ ಉಚಿತವಾಗಿ ಪಡೆದಿದ್ದೇ ಆದರೆ, ದರಿದ್ರ ಎಂಬುದು ಬೆಂಬಿಡದೆ ಕಾಡುತ್ತದೆ ಎನ್ನಲಾಗುತ್ತದೆ ಹಾಗಿದ್ದರೆ, ಯಾವ ವಸ್ತುಗಳನ್ನು ಬೇರೆಯವರಿಂದ ಉಚಿತವಾಗಿ ಪಡೆಯಬಾರದು ಎಂದು ನೋಡುವುದಾದರೆ... 

ನಿಮಗೆಲ್ಲರಿಗೂ ತಿಳಿದಿರುವುವಂತೆ ಉಪ್ಪು ಶನಿ ದೇವನಿಗೆ ಸಂಬಂಧ್ಸೀದ ಪದಾರ್ಥ. ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪನ್ನು ಎಂದಿಗೂ ಉಚಿತವಾಗಿ ತೆಗೆದುಕೊಳ್ಳಬಾರದು. ಇದರಿಂದ ವ್ಯಕ್ತಿ ಸಾಲಬಾಧೆಯಲ್ಲಿ ಮುಳುಗುತ್ತಾನೆ ಎಂದು ಹೇಳಲಾಗುತ್ತದೆ. 

ಎಂದಿಗೂ ಕೂಡ ಕರವಸ್ತ್ರವನ್ನು ಬೇರೆಯವರಿಂದ ಉಚಿತವಾಗಿ ತೆಗೆದುಕೊಳ್ಳಬಾರದು. ಒಂದೊಮ್ಮೆ ಯಾರಿಂದಲಾದರೂ ಕರವಸ್ತ್ರವನ್ನು ಪಡೆದಿದ್ದೇ ಆದರೆ, ಅದನ್ನು ಬಳಸಬಾರದು. ಕುಟುಂಬದ ಸದಸ್ಯರಲ್ಲಿ ವೈಷಮ್ಯ ಹೆಚ್ಚುತ್ತದೆ.  ಇದು ನಿಮ್ಮ ನಡುವಿನ ಸಂಬಂಧವನ್ನು ಹಾಳುಮಾಡಬಹುದು ಎನ್ನಲಾಗುತ್ತದೆ. 

ಕಬ್ಬಿಣ ಸಹ ಶನಿ ಗ್ರಹಕ್ಕೆ ಸಂಬಂಧಿಸಿದ ವಸ್ತು. ಹಾಗಾಗಿ, ಕಬ್ಬಿಣ ಅಥವಾ ಕಬ್ಬಿಣದಿಂದ ತಯಾರಿಸಿದ ವಸ್ತುಗಳನ್ನು ಯಾರಿಂದಲೂ ಉಚಿತವಾಗಿ ತೆಗೆದುಕೊಳ್ಳುವುದಋದ್ನ ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ. ಪ್ರಗತಿಗೆ ಕುಂಠಿತವಾಗುತ್ತದೆ ಎಂದು ಹೇಳಲಾಗುತ್ತದೆ.   

ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ರೀತಿಯ ನುಣುಪಾದ ವಸ್ತುಗಳನ್ನು ಬೇರೆಯವರಿಂದ ಪಡೆಯಬಾರದು. ಅದರಲ್ಲೂ, ಯಾರಿಂದಲೂ ಸೂಜಿಯನ್ನು ಉಚಿತವಾಗಿ ತೆಗೆದುಕೊಳ್ಳಬಾರದು. ಇದು ವೈವಾಹಿಕ ಜೀವನ ಮತ್ತು ಪ್ರೇಮ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆರ್ಥಿಕ ನಷ್ಟವನ್ನು ಸಹ ಅನುಭವಿಸಬೇಕಾಗಬಹುದು ಎನ್ನಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಶನಿ ದೇವರಿಗೆ ನೇರವಾಗಿ ಸಂಬಂಧಿಸಿದ ಪದಾರ್ಥವಾಗಿದೆ. ಇದನ್ನು ಬೇರೆಯವರಿಂದ ಉಚಿತವಾಗಿ ಪಡೆಯುವುದರಿಂದ ಜೀವನದಲ್ಲಿ ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು. ಅಂತಹ ಮನೆಯಲ್ಲಿ ಬಡತನ ಎಂಬುದು ಬೆಂಬಿಡದೆ ಕಾಡುತ್ತದೆ ಎನ್ನಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link