ಈ ತರಕಾರಿಗಳು ಆರೋಗ್ಯ ಸಂಜೀವಿನಿಯಾಗಿದ್ದರೂ ಬ್ಲಡ್ ಶುಗರ್ ಇದ್ದವರಿಗೆ ಮಾತ್ರ ಇದು ಖಂಡಿತಾ ವಿಷ !ಒಂದು ತುಂಡು ಕೂಡಾ ಸೇವಿಸಬಾರದು
ದೇಹದಲ್ಲಿ ಗ್ಲೂಕೋಸ್ ಅಥವಾ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಔಷಧಿಗಿಂತ ಮುಖ್ಯವಾಗಿ ಸೇವಿಸುವ ಆಹಾರದ ಬಗ್ಗೆ ಗಮನ ವಹಿಸಬೇಕು. ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರವನ್ನು ಸೇವಿಸಬೇಕು.
ಕೆಲವು ಆರೋಗ್ಯಕರ ತರಕಾರಿಗಳು ಅದರಲ್ಲಿಯೂ ಈ ತರಕಾರಿಗಳನ್ನು ಚಳಿಗಾಲದಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಒಂದೇ ಸಮನೆ ಏರಿಸಿ ಬಿಡಬಹುದು.
ಸ್ಪ್ರಿಂಗ್ ಆನಿಯನ್ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ, ಮಧುಮೇಹ ರೋಗಿಗಳಿಗೆ ಇದು ತುಂಬಾ ಹಾನಿಕಾರಕ. ಇದು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ತರಕಾರಿ.ಇದು ಹೆಚ್ಚು ಕಾರ್ಬೋಹೈಡ್ರೇಟ್ ಗಳನ್ನು ಕೂಡಾ ಹೊಂದಿರುತ್ತದೆ.ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತವೆ.
ಚಳಿಗಾಲದಲ್ಲಿ ಕ್ಯಾರೆಟ್ ಸಲಾದ್ ಅಥವಾ ಕ್ಯಾರೆಟ್ ಹಲ್ವಾ ತಿನ್ನುವುದು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ. ಕ್ಯಾರೆಟ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ವಿಪರೀತವಾಗಿ ಹೆಚ್ಚಾಗುತ್ತದೆ.
ಬೀಟ್ರೂಟ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ಆದರೆ ಅತಿಯಾದ ಪ್ರಮಾಣದಲ್ಲಿ ಬೀಟ್ರೂಟ್ ಅನ್ನು ಸೇವಿಸುತ್ತಿದ್ದರೆ ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ಸಿಹಿ ಗೆಣಸು ಮತ್ತು ಆಲೂಗೆಡ್ಡೆಯಂತಹ ತರಕಾರಿಗಳ ಸೇವನೆಯನ್ನು ಸಹ ಮಧುಮೇಹದಲ್ಲಿ ತಪ್ಪಿಸಬೇಕು. ಅವು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.