ಮಾಂಸಾಹಾರವೇ ಬೇಕಿಲ್ಲ ಈ ವಸ್ತುಗಳ ಸೇವನೆಯಿಂದಲೂ ನೀಗುತ್ತದೆ B12 ಕೊರತೆ
ಹಸಿರು ತರಕಾರಿಗಳಲ್ಲಿ ಬ್ರೊಕೊಲಿಯನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ದೇಹಕ್ಕೆ ಅಗತ್ಯವಿರುವ ವಿಟಮಿನ್ ಬಿ12 ಅನ್ನು ಪೂರೈಸುವುದಲ್ಲದೇ, ರಕ್ತದಲ್ಲಿನ ಹಿಮೋಗ್ಲೋಬಿನ್ ಕೊರತೆಯನ್ನು ಸಹ ನೀಗಿಸುತ್ತದೆ.
ಅನೇಕ ಜನರು ಬೆಳಗಿನ ಉಪಾಹಾರದಲ್ಲಿ ಓಟ್ಸ್ ತಿನ್ನಲು ಇಷ್ಟಪಡುತ್ತಾರೆ. ಇದು ತೂಕ ನಷ್ಟ ಮಾಡಿಕೊಳ್ಳುವುದಕ್ಕೆ ಕೂಡಾ ಸಹಾಯ ಮಾಡುತ್ತದೆ. ಅಲ್ಲದೆ ಇದು ವಿಟಮಿನ್ ಬಿ 12 ಪೋಷಕಾಂಶವನ್ನು ದೇಹಕ್ಕೆ ನೀಡುತ್ತದೆ.
ಹಾಲು ಮತ್ತು ಅದರ ಉತ್ಪನ್ನಗಳಲ್ಲಿ ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಜೊತೆಗೆ ಇದು ವಿಟಮಿನ್ ಬಿ 12 ಅನ್ನು ಕೂಡಾ ಪೂರೈಸುತ್ತದೆ.
ಮಶ್ರೂಮ್ ದುಬಾರಿ ಆಹಾರವಾಗಬಹುದು. ಆದರೆ ಇದು ಆರೋಗ್ಯಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ವಿಟಮಿನ್ ಬಿ12 ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಅಂಶ ಕೂಡಾ ಇದರಲ್ಲಿ ಹೇರಳವಾಗಿದೆ.
ಪ್ರೋಟೀನ್ ಅವಶ್ಯಕತೆಗಳನ್ನು ಸಾಮಾನ್ಯವಾಗಿ ಸೋಯಾಬೀನ್ ಮೂಲಕ ಪೂರೈಸಲಾಗುತ್ತದೆ. ಇದು ದೇಹಕ್ಕೆ ವಿಟಮಿನ್ ಬಿ 12 ಅನ್ನು ಸಹಾ ನೀಡುತ್ತದೆ. ಇದರ ಜೊತೆಗೆ ಸೋಯಾ ಹಾಲು ಮತ್ತು ಸೋಯಾ ಪನೀರ್ ಕೂಡಾ ಸೇವಿಸಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)