ಇಂದಿನಿಂದಲೇ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಬೀರುವನು ಶನಿ ಮಹಾತ್ಮ !ಕಷ್ಟಗಳಿಗೆ ಬೀಳುವುದು ತೆರೆ !ಛಾಯಾ ಪುತ್ರನಿಂದಲೇ ಹರಿದು ಬರುವುದು ಅಷ್ಟೈಶ್ವರ್ಯ
ಜ್ಯೋತಿಷ್ಯದಲ್ಲಿ ಇಂದು ನಡೆಯಲಿರುವ ಘಟನೆ ಬಲು ಅಪರೂಪ. ಅದುವೇ ಶನಿ ಮತ್ತು ಶುಕ್ರರದೃಷ್ಟಿ ಗೋಚರ. ಈ ದೈವಿಕ ಯೋಗದ ಮೂಲಕ ತನ್ನ ದೃಷ್ಟಿ ಹರಿಸಿಯೇ ಶನಿ ಮಹಾತ್ಮ ಈ ರಾಶಿಯವರ ಜೀವನ ಬೆಳಗಲು ಕಾರಣರಾಗುತ್ತಾರೆ.
ವೃಷಭ ರಾಶಿ :ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಿಗುವುದು. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರುವಿರಿ. ಉದ್ಯೋಗಿಗಳು ಬಡ್ತಿ ಪಡೆಯುವಿರಿ. ಆಸ್ತಿಗೆ ಸಂಬಂಧಿಸಿದಂತೆ ಲಾಭವಾಗುವುದು. ಮಾನಸಿಕ ನೆಮ್ಮದಿ ಹೆಚ್ಚುವುದು.
ಸಿಂಹ ರಾಶಿ : ಶನಿ ಮತ್ತು ಶುಕ್ರನ ಈ ಯೋಗವು ಸಿಂಹ ರಾಶಿಯವರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.ಖ್ಯಾತಿ ಮತ್ತು ಮನ್ನಣೆ ಹೆಚ್ಚಾಗುತ್ತದೆ.ಹೊಸ ವರ್ಷದಲ್ಲಿ ವಿದೇಶ ಪ್ರವಾಸ ಯೋಗವಿದೆ. ಹಣಕಾಸಿನ ಸಮಸ್ಯೆ ಸರಿದೂಗುವುದು.
ತುಲಾ ರಾಶಿ : ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ. ನಿಮ್ಮೆಲ್ಲಾ ಕಷ್ಟಗಳು ಪರಿಹಾರವಾಗುವುದು. ಸ್ವಂತ ಮನೆ ಕನಸು ಈ ಬಾರಿ ನನಸಾಗುವುದು. ಹಣಕಾಸಿನ ಕೊರತೆ ಎದುರಾದರೂ ತಕ್ಷಣ ಪರಿಹಾರವೂ ಸಿಗುವುದು. ಹೊಸ ವರ್ಷದಲ್ಲಿ ಉತ್ತಮ ಯಶಸ್ಸನ್ನು ನಿರೀಕ್ಷಿಸಬಹುದು.
ಮಕರ ರಾಶಿ: ಮಕರ ರಾಶಿಯವರು ಈ ವರ್ಷ ಶನಿದೆಸೆಯಿಂದ ಮುಕ್ತಿ ಪಡೆಯಲಿದ್ದಾರೆ. ಹಾಗಾಗಿ ಇಲ್ಲಿವತೆಗಿನ ಕಷ್ಟಗಳಿಗೆ ಸಂಪೂರ್ಣ ತೆರೆ ಬೀಳಲಿದೆ. ಉದ್ಯೋಗದಲ್ಲಿ ಬಡ್ತಿ ಅವಕಾಶಗಳು ದೊರೆಯಲಿವೆ. ಇಲ್ಲಿವರೆಗೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಕೂಡಾ ನಿವಾರಣೆಯಾಗುವುದು.
ಮೀನ ರಾಶಿ: ಆದಾಯದ ಹೊಸ ಮೂಲ ತೆರೆದುಕೊಳ್ಳುವುದು. ಉದ್ಯೋಗಿಗಳಿಗೆ ಅನಿರೀಕ್ಷಿತ ಲಾಭ ದೊರೆಯಬಹುದು. ನಿಮ್ಮ ಪ್ರಯತ್ನಕ್ಕೆ ಸಮಾಜದಲ್ಲಿ ಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.