ಶೀಘ್ರದಲ್ಲೇ ಗೃಹಲಕ್ಷ್ಮಿ ರಾಜಯೋಗ ನಿರ್ಮಾಣ, ವಿಷ್ಣುಪ್ರಿಯೆ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ರಾಜವೈಭವ ಪ್ರಾಪ್ತಿ!

Tue, 26 Sep 2023-5:32 pm,

ಏನಿದು ಗೃಹಲಕ್ಷ್ಮಿ ಯೋಗ?- ಸಾಮಾನ್ಯವಾಗಿ ಶುಕ್ರ, ಬುಧ ಹಾಗೂ ಮಂಗಳ ಗ್ರಹಗಳು ತಮ್ಮ ತಮ್ಮ ಉನ್ನತ ಸ್ಥಾನದಲ್ಲಿರುವಾಗ ಗೃಹಲಕ್ಷ್ಮಿ ರಾಜಯೋಗ ನಿರ್ಮಾಣಗೊಳ್ಳುತ್ತದೆ. ಇನ್ನೊಂದೆಡೆ ಜಾತಕದಲ್ಲಿ ಒಂಬತ್ತನೇ ಮನೆಯ ಅಧಿಪತಿ ಕೇಂದ್ರಸ್ಥಾನದಲ್ಲಿದ್ದಾಗಲೂ ಕೂಡ ಈ ಯೋಗ ನಿರ್ಮಾಣಗೊಳ್ಳುತ್ತದೆ.   

ಯಾವಾಗ ನಿರ್ಮಾಣಗೊಳ್ಳುತ್ತಿದೆ ಗೃಹಲಕ್ಷ್ಮಿ ರಾಜಯೋಗ? : ನವೆಂಬರ್ 3, 2023 ರಂದು ಐಶ್ವರ್ಯ ಫಲದಾತ ಶುಕ್ರ ಕನ್ಯಾ ರಾಶಿಯ ಪ್ರಥಮ ಭಾವಕ್ಕೆ ಪ್ರವೇಶಿಸಲಿದ್ದಾನೆ. ಆತ ಈ ರಾಶಿಯ ನವಮ ಭಾವಕ್ಕೆ ಅಧಿಪತಿ ಅಂದರೆ ನವಾಮಾಂಶನಾಗಿದ್ದಾನೆ. ಇನ್ನೊಂದೆಡೆ ದೇವಗುರು ಬೃಹಸ್ಪತಿ ಕೂಡ ಮೇಷ ರಾಶಿಯಲ್ಲಿ ಉಚ್ಚಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಗೃಹಲಕ್ಷ್ಮಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ರಾಜವೈಭವ ಪ್ರಾಪ್ತಿಯಾಗಲಿದೆ.   

ವೃಷಭ ರಾಶಿ: ಗೃಹಲಕ್ಷ್ಮಿ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದೆ. ಇದರಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ದೀರ್ಘವಧಿಯಿಂದ ನೆನೆಗುದಿಗೆ ಬಿದ್ದ ನಿಮ್ಮ ಇಂಪಾರ್ಟೆಂಟ್ ಕೆಲಸಗಳು ಪೂರ್ಣಗೊಲ್ಲಳಿವೆ. ಉನ್ನತ ಸ್ಥಾನದಲ್ಲಿ ನೌಕರಿ ಮಾಡುವವರಿಗೆ ಭಾರಿ ಸಂತಸದ ಸುದ್ದಿ ಸಿಗಲಿದೆ. ಕುಟುಂಬ-ಮಿತ್ರರ ಸಹಕಾರದಿಂದ ಬಿಸ್ನೆಸ್ ನಲ್ಲಿ ಅತ್ಯುತ್ತಮ ಲಾಭ ನಿಮ್ಮದಾಗಲಿದ್ದು, ಇದರಿಂದ ನೀವು ಭಾರಿ ಧನಲಾಭ ಪಡೆಯುವಿರಿ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಪಿತ್ರಾರ್ಜಿತ ಸಂಪತ್ತಿನಿಂದ ನಿಮಗೆ ಸಾಕಷ್ಟು ಲಾಭ ಸಿಗುಯ ಸಾಧ್ಯತೆ ಕೂಡ ಇದೆ. ಹೊಸ ನೌಕರಿಯ ಹುಡುಕಾಟದಲ್ಲಿ ನಿರತರಾದವರಿಗೂ ಕೂಡ ಅಪಾರ ಯಶಸ್ಸು ಸಿಗಲಿದೆ.   

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರಿಗೂ ಕೂಡ ಗೃಹಲಕ್ಷ್ಮಿ ರಾಜಯೋಗ ಅಪಾರ ಧನಲಾಭವನ್ನು ತಂದು ಕೊಡಲಿದೆ. ಈ ಅವಧಿಯಲ್ಲಿ ಬಿಸ್ನೆಸ್ ನಲ್ಲಿನ ಹೂಡಿಕೆ ಅಪಾರ ಲಾಭದಾಯದ ಸಿದ್ಧ ಸಾಬೀತಾಗಲಿದೆ. ಇದಲ್ಲದೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ಸಾಲಬಾಧೆಯಿಂದ ನಿಮಗೆ ಮುಕ್ತಿ ಸಿಗಲಿದ್ದು, ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಕೌಟುಂಬಿಕ ಸಮಸ್ಯೆಗಳಿಗೆ ತೆರೆಬೀಳುವ ಸಮಯವಿದು, ಗ್ರಹ ಕ್ಲೇಶಗಳಿಗೆ ಅಂತ್ಯವನ್ನು ಹಾಡುವಲ್ಲಿ ಯಶಸ್ವಿಯಾಗುವಿರಿ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದ್ದು, ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರಲಿದೆ.   

ಕುಂಭ ರಾಶಿ: ಕುಂಭ ರಾಶಿಯ ಜಾತಕದವರಿಗೆ ಈ ಶುಭಯೋಗ ಸ್ಥಾನಮಾನ, ಘನತೆ-ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಲಿದೆ. ಕಾನೂನಿನ ವಿಷಯದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ವಾಹನ-ಸಂಪತ್ತು ಖರೀದಿಸುವುದು ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ನೀವು ಯಶಸ್ಸನ್ನು ಸಾಧಿಸುವಿರಿ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ಸಾಲದಿಂದ ಮುಕ್ತಿ ಸಿಗಲಿದ್ದು, ಆದಾಯದ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link