ಶೀಘ್ರದಲ್ಲಿಯೇ ಮಂಗಳನ ಅಂಗಳದಲ್ಲಿ ತ್ರಿಗ್ರಹಿ ಯೋಗ 5 ರಾಶಿಗಳ ಜನರ ಜೀವನದಲ್ಲಿ ಅಪಾರ ಧನವೃಷ್ಟಿ!
1. ಬುಧ ಗೋಚರ ಯಾವಾಗ ನೆರವೇರಲಿದೆ?: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಮಾರ್ಚ್ 31, 2023 ರಂದು ಮಧ್ಯಾಹ್ನ 3 ಗಂಟೆ 1 ನಿಮಿಷಕ್ಕೆ ಬುಧ ಮೀನರಾಶಿಯಿಂದ ಹೊರಬಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಈ ರಾಶಿಯಲ್ಲಿ ಬುಧ ಜೂನ್ 1, 2023 ರ ಸಂಜೆ 7ಗಂಟೆ 58 ನಿಮಿಷದವರೆಗೆ ಇರಲಿದ್ದಾನೆ ಮತ್ತು ಬಳಿಕ ಆತ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
2. ಮೇಷ ರಾಶಿ: ಬುಧ, ಶುಕ್ರ ಹಾಗೂ ರಾಹುವಿನ ಈ ಮೈತ್ರಿ ನಿಮ್ಮ ರಾಶಿಯಲ್ಲಿಯೇ ನೆರವೇರುತ್ತಿದೆ ಮತ್ತು ನಿಮ್ಮ ಪಾಲಿಗೆ ಇದು ಅತ್ಯಂತ ಮಂಗಳಕರ ಸಾಬೀತಾಗಲಿದೆ. ಈ ಯೋಗ ನಿಮ್ಮ ರಾಶಿಯ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಿಸಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಆರ್ಥಿಕ ವೇದಿಕೆಯಲ್ಲಿ ಲಾಭದ ಎಲ್ಲಾ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಗುರಿಯ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವ ಮೂಲಕ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.ಈ ಅವಧಿಯಲ್ಲಿ ನಿಮಗೆ ಬಾಳ ಸಂಗಾತಿಯ ಬೆಂಬಲ ಸಿಗಲಿದೆ. ಇದಲ್ಲದೆ ಈ ಅವಧಿಯಲ್ಲಿ ಅವರ ಶ್ರೇಯೋಭಿವೃದ್ಧಿ ಕೂಡ ನೀವು ನೋಡುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಇದಲ್ಲದೆ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಾಕಷ್ಟು ಬೆಂಬಲ ಕೂಡ ಸಿಗಲಿದೆ.
3. ಸಿಂಹ ರಾಶಿ: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ತ್ರಿಗ್ರಹಿ ಯೋಗ ಸಿಂಹ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಇದು ನಿಮ್ಮ ಗೋಚರ ಜಾತಕದ ಅದೃಷ್ಟ ಭಾವದಲ್ಲಿ ರೂಪುಗೊಳ್ಳಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸಿನ ಸಕಲ ಯೋಗಗಳು ನಿರ್ಮಾಣಗೊಂದು ನಿಮಗೆ ಅಪಾರ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಹೊಸ ಒಪ್ಪಂಗಗಳಿಗೆ ನೀವು ಸಹಿ ಹಾಕುವ ಸಾಧ್ಯತೆ ಇದೆ. ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದ್ದು, ಪ್ರವಾಸ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಈ ಸಮಯ ಮಂಗಳ ಫಲದಾಯಿ ಸಾಬೀತಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳಬಹುದು.
4. ಕರ್ಕ ರಾಶಿ: ಕರ್ಕ ರಾಶಿಯ ಜಾತಕದವರ ಪಾಲಿಗೆ ರಾಹು, ಬುಧ ಹಾಗೂ ಶುಕ್ರ ಗ್ರಹಗಳ ಈ ಮೈತ್ರಿ ನಿಮ್ಮ ವೃತ್ತಿ ಜೀವನ ಹಾಗೂ ವ್ಯಾಪಾರದ ದೃಷ್ಟಿಯಿಂದ ಅತ್ಯಂತ ಶುಭವಾಗಿರಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಕರ್ಮಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನೌಕರಿಗೆ ಸಂಬಂಧಿಸಿದ ಅಡೆತಡೆಗಳು ದೂರಾಗಲಿವೆ, ಕಾರ್ಯಕ್ಷೇತ್ರದಲ್ಲಿ ಎದುರಾಳಿಗಳ ತಂತ್ರ ವಿಫಲವಾಗಲಿದೆ. ಇದಲ್ಲದೆ ಮಾರ್ಚ್ ತಿಂಗಳ ಅಕ್ಕಪಕ್ಕದಲ್ಲಿ ನೌಕರಿಯಲ್ಲಿ ನಿರತ ಈ ಜಾತಕದ ಜನರಿಗೆ ಪದೋನ್ನತಿಯ ಭಾಗಿ ಸಿಗುವ ಸಾಧ್ಯತೆ ಇದೆ. ಜೊತೆಗೆ ನಿಧಾನಗತಿಯಲ್ಲಿ ವ್ಯಾಪಾರ ನಡೆಯುತ್ತಿರುವ ವ್ಯಾಪಾರಿಗಳಿಗೆ ಅಪಾರ ಧನಲಾಭ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಬೆಂಬಲ ಸಿಗಲಿದೆ. ಆದರೆ, ಪ್ರಸ್ತುತ ನಿಮ್ಮ ಮೇಲೆ ಶನಿಯ ಎರಡೂವಾರೆ ವರ್ಷಗಳ ಕಾಟ ನಡೆಯುತ್ತಿರುವ ಕಾರಣ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಇದಲ್ಲದೆ ಈ ಅವಧಿಯಲ್ಲಿ ನೀವು ಕೆಲ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ.
5. ಮಿಥುನ ರಾಶಿ: ಮಿಥುನ ರಾಶಿಯ ಜಾತಕದವರ ಪಾಲಿಗೆ ಈ ತ್ರಿಗ್ರಹಿ ಯೋಗ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಬುಧ ಗೋಚರಿಸಲಿದ್ದಾನೆ. ಇದನ್ನು ಧನಲಾಭ, ಸಹೋದರ-ಸಹೋದರಿಯರ ಸಂಬಂಧಕ್ಕೆ ಸಂಬಂಧಿಸಿದೆ. ಹೀಗಾಗಿ ಇದು ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲಿಷ್ಠಗೊಳ್ಳಲಿದೆ. ಕುಟುಂಬದಲ್ಲಿ ಸಹೋದರ-ಸಹೋದರಿಯರ, ಗೆಳೆಯರ ಜೊತೆಗಿನ ಸಂಬಂಧ ಗಟ್ಟಿಗೊಳ್ಳಲಿದೆ.
6. ಮೀನ ರಾಶಿ: ಮೀನ ರಾಶಿಯ ಜಾತಕದವರ ಪಾಲಿಗೆ ಬುದ್ಧನ ಮೇಷ ರಾಶಿ ಗೋಚರ ಹಾಗೂ ತ್ರಿಗ್ರಹಿ ಯೋಗ ನಿರ್ಮಾಣ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಪರಿಶ್ರಮದ ಸಂಪೂರ್ಣ ಲಾಭ ಪ್ರಾಪ್ತಿಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಲಿದ್ದು, ಪದೋನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವ ಸಾಧ್ಯತೆ ಇದ್ದು, ಕಂಕಣಬಲ ಕೂಡಿಬರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)