ಶೀಘ್ರದಲ್ಲೇ ಮಂಗಳನ ಅಂಗಳದಲ್ಲಿ ತ್ರಿಗ್ರಹಿ ಯೋಗ ನಿರ್ಮಾಣ, ಧನ ಕುಬೇರ ಕೃಪೆಯಿಂದ ಈ ಜನರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ಹೆಚ್ಚಳ!
Surya-Mangal-Budh Yuti In Scorpio 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಂಗಳನ ಅಧಿಪತ್ಯದ ರಾಶಿಯಾಗಿರುವ ವೃಶ್ಚಿಕ ರಾಶಿಯಲ್ಲಿ ತ್ರಿಗ್ರಹಿಯೋಗ ರೂಪುಗೊಳ್ಳಲಿದೆ. ಇದರಿಂದ ಧನ ಕುಬೇರನ ಕೃಪೆಯಿಂದ ಮೂರು ರಾಶಿಗಳ ಜನರ ಬ್ಯಾಂಕ್ ಬ್ಯಾಲೆನ್ಸ್ ಅಪಾರ ಹೆಚ್ಚಾಗಲಿದೆ.
ತುಲಾ ರಾಶಿ: ನಿಮ್ಮ ಜಾತಕದ ಧನ ಭಾವದಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಅಪಾರ ಸುಧಾರಿಸಲಿದೆ. ನಿಮಗೆ ಅಪಾರ ಧನಪ್ರಾಪ್ತಿಯಾಗಲಿದ್ದು ನಿಮ್ಮ ಜೀವನದಲ್ಲಿ ಮಹತ್ವಪೂರ್ಣ ಪರಿವರ್ತನೆ ಸಂಭವಿರುವ ಸಾಧ್ಯತೆ ಇದೆ. ಒಂದು ವೇಳೆ ನಿಮಗೆ ಬರಬೇಕಾದ ಹಣ ಎಲ್ಲಾದರು ಸಿಲುಕಿಕೊಂಡಿದ್ದರೆ, ಅದು ನಿಮ್ಮ ಕೈಸೇರಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದ್ದು, ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ಮಾರ್ಕೆಟಿಂಗ್, ಮಾಧ್ಯಮ, ಶಿಕ್ಷಣ, ಸಂವಹನ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಯೋಗ ಅದ್ಭುತ ಸಾಬೀತಾಗಲಿದೆ.
ಸಿಂಹ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವಾಹನ-ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗಲಿದೆ. ನಿಮ್ಮ ಆಸೆಗಳು ಈಡೇರಲಿವೆ. ರಿಯಲ್ ಎಸ್ಟೇಟ್, ಆಸ್ತಿಪಾಸ್ತಿ, ಭೂಮಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಯೋಗ ಉತ್ತಮವಾಗಿರಲಿದೆ. ತ್ರಿಗ್ರಹಿ ಯೋಗದ ದೃಷ್ಟಿ ನಿಮ್ಮ ಕರ್ಮ ಭಾವದ ಮೇಲೆ ಬೀಳುತ್ತಿರುವ ಕಾರಣ ನೌಕರ ವರ್ಗದ ಜನರಿಗೆ ಬಡ್ತಿ ಭಾಗ್ಯ ಹಾಗೂ ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶಗಳು ಒದಗಿಬರಲಿವೆ.
ಮಕರ ರಾಶಿ: ಈ ಯೋಗ ನಿಮ್ಮ ಜಾತಕದ ಆದಾಯ ಹಾಗೂ ಲಾಭ ಸ್ಥಾನದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಲಿವೆ. ಆದಾಯದ ಹೊಸ ಹೊಸ ಸಾಧನಗಳು ನಿರ್ಮಾಣಗೊಳ್ಳಲಿವೆ ಮತ್ತು ಅದರಿಂದ ನಿಮಗೆ ಅಪಾರ ಆರ್ಥಿಕ ಲಾಭ ಸಂಭವಿಸುವ ಸಾಧ್ಯತೆ ಇದೆ. ಆಮದು ಮತ್ತು ರಫ್ತು ವ್ಯವಹಾರದಲ್ಲಿ ತೊಡಗಿರುವವರಿಗೆ ಸಮಯ ಸಾಕಷ್ಟು ಅನುಕೂಲಕರವಾಗಿದೆ . ಹೂಡಿಕೆಗಾಗಿ ಯೋಚಿಸುತ್ತಿದ್ದ, ನೀವು ಮಾಡುವ ಹೂಡಿಕೆಗೆ ಉತ್ತಮ ಲಾಭವನ್ನು ನೀವು ಪಡೆಯಬಹುದು.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)