ಈ ಖ್ಯಾತ ಕ್ರಿಕೆಟಿಗನ ಪ್ರೀತಿ ನಂಬಿ ಮದುವೆಗೂ ಮುನ್ನ ತಾಯಿಯಾದ ಖ್ಯಾತ ನಟಿ ಈಕೆ! ಆದ್ರೆ ಕೊನೆಗೂ ಆತ ಮದುವೆ ಆಗಲೇ ಇಲ್ಲ

Tue, 18 Jun 2024-6:04 pm,

ಬಾಲಿವುಡ್ ಇಂಡಸ್ಟ್ರಿಯ ಹಿರಿಯ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಲವ್ ಸ್ಟೋರಿ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.

ನೀನಾ ಮತ್ತು ವಿವಿಯನ್ ನಡುವಿನ ಪ್ರೇಮಕಥೆಯು 1980ರಲ್ಲಿ ಪ್ರಾರಂಭವಾಯಿತು. ಆ ಸಮಯದಲ್ಲಿ ವಿವಿಯನ್ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕರಾಗಿದ್ದರು. ವೆಸ್ಟ್ ಇಂಡೀಸ್ ತಂಡ ಭಾರತದೊಂದಿಗೆ ಪಂದ್ಯ ಆಡಲು ಬಂದಿದ್ದಾಗ ಈ ಪ್ರೇಮಕಥೆ ಶುರುವಾಗಿತ್ತು.

ಮುಂಬೈನಲ್ಲಿ ನಡೆದ ಪಾರ್ಟಿಯಲ್ಲಿ ವಿವಿಯನ್ ಮತ್ತು ನೀನಾ ಮೊದಲ ಬಾರಿಗೆ ಭೇಟಿಯಾದರು. ಈ ಭೇಟಿಯ ಬಳಿಕ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು.

ನೀನಾ ಗುಪ್ತಾ ಮತ್ತು ವಿವಿಯನ್ ನಡುವಿನ ಪ್ರೀತಿಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ, ಕೆಲವು ವರ್ಷಗಳ ನಂತರ ನೀನಾ ಗರ್ಭಿಣಿ ಎಂಬ ಸುದ್ದಿ ಮುನ್ನೆಲೆಗೆ ಬಂದಿತು. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ವಿವಿಯನ್ ರಿಚರ್ಡ್ ಅವರ ಮಗುವಿಗೆ ನೀನಾ ತಾಯಿಯಾಗಲಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಡಿತ್ತು.

ನೀನಾ ಗುಪ್ತಾ ಜೊತೆ ಡೇಟಿಂಗ್ ಮಾಡುತ್ತಿದ್ದ ಸಮಯದಲ್ಲಿ, ವಿವಿಯನ್’ಗೆ ಅದಾಗಲೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು, ಈ ವಿಷಯ ತಿಳಿದ ನಂತರವೂ ನೀನಾ ವಿವಿಯನ್ ಮಗುವಿಗೆ ಜನ್ಮ ನೀಡಿದ್ದರು. ಕುಟುಂಬವನ್ನೇ ಎದುರು ಹಾಕಿಕೊಂಡು ವಿವಿಯನ್ ಜೊತೆ ಸಂಬಂಧ ಬೆಳೆಸಿದ್ದ ನೀನಾ, ಸಮಾಜದಿಂದ ಸಾಕಷ್ಟು ವಿರೋಧಗಳನ್ನು ಕೇಳಬೇಕಾಯಿತು.

1989ರಲ್ಲಿ ನೀನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ವಿವಿಯನ್ ಮತ್ತು ನೀನಾ ತಮ್ಮ ಮಗಳಿಗೆ ಮಸಾಬಾ ಎಂದು ಹೆಸರಿಟ್ಟರು. ಮದುವೆಯಾಗದೆ ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ನೀನಾ ಸಮಾಜದಿಂದ ಟೀಕೆ ಎದುರಿಸಬೇಕಾಯಿತು. ಇನ್ನು ನೀನಾ ಮತ್ತು ವಿವಿಯನ್ ಎಂದಿಗೂ ಮದುವೆಯಾಗಲಿಲ್ಲ.

ಆದರೆ ಎಷ್ಟೇ ನೋವುಂಡರೂ ಸಹ ನೀನಾ ಸಮಾಜದ ಮುಂದೆ ತಲೆ ಎತ್ತಿ ನಿಂತು ಮಸಾಬನನ್ನು ಒಬ್ಬಳೇ ಬೆಳೆಸಿದರು. ಸದ್ಯ ಮಸಾಬಾ ಗುಪ್ತಾ ಪ್ರಸಿದ್ಧ ಫ್ಯಾಷನ್ ಡಿಸೈನರ್.

ಈ ಬಗ್ಗೆ ನೀನಾ ಗುಪ್ತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದು, “ನನ್ನ ಹೆತ್ತವರು ನನ್ನ ಮತ್ತು ವಿವಿಯನ್ ಸಂಬಂಧವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ ಗರ್ಭಿಣಿ ಎಂದು ತಿಳಿದಾಗ, ಆ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದೆ” ಎಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link