ನಿಜವಾಗಿಯೂ ತಾಯಿಯಾಗಲಿದ್ದಾರಾ ಕತ್ರಿನಾ..? ಕೊನೆಗೂ ಮೌನ ಮುರಿದ ವಿಕ್ಕಿ ಕೌಶಲ್
ಬಾಲಿವುಡ್ ನಟ ವಿಕ್ಕಿ ಕೌಶಲ್ ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಚಲನಚಿತ್ರ ಬ್ಯಾಡ್ ನ್ಯೂಸ್ ಬಗ್ಗೆ ಸುದ್ದಿಯಲ್ಲಿದ್ದಾರೆ. ಮತ್ತೊಂದೆಡೆ, ಕತ್ರಿನಾ ಕೈಫ್ ಗರ್ಭಧಾರಣೆಯ ಬಗ್ಗೆ ಅನೇಕ ವದಂತಿಗಳು ಜೋರಾಗಿಯೇ ಸದ್ದು ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿಕ್ಕಿ ಕೌಶಲ್ ಕಾರ್ಯಕ್ರಮವೊಂದರಲ್ಲಿ ಈ ವದಂತಿಗಳಿಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಕತ್ರಿನಾ ಕೈಫ್ ಗರ್ಭಿಣಿ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ, ನಟಿ ಅಂಬಾನಿ ಕುಟುಂಬದ ಕಿರಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಸೀರೆ ಉಟ್ಟು ಪೋಸ್ ಕೊಟ್ಟಿದ್ದರು ನಟಿಯ ಹೊಟ್ಟೆ ಕಾಣಿಸಿದ ಕಾರಣ ಕತ್ರಿನಾ ಗರ್ಭಿಣಿ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.ಆದರೆ, ಈಗ ಈ ಬಗ್ಗೆ ವಿಕ್ಕಿ ಮೌನ ಮುರಿದಿದ್ದಾರೆ.
ನಟ ವಿಕ್ಕಿ ಕೌಶಲ್ ಇತ್ತೀಚಿನ ದಿನಗಳಲ್ಲಿ ಬ್ಯಾಡ್ ನ್ಯೂಸ್ ಚಿತ್ರದ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಪ್ರಚಾರದ ಕಾರ್ಯಕ್ರಮವೊಂದರಲ್ಲಿ, ವಿಕ್ಕಿಯನ್ನು ಈ ಕುರಿತು ಕೇಳಿದಾಗ, 'ನೀವು ಮಾತನಾಡಿದ ಹಾಗೆ ಒಳ್ಳೆಯ ಸುದ್ದಿ ಬಂದರೆ, ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ನಾವು ತುಂಬಾ ಸಂತೋಷಪಡುತ್ತೇವೆ. ಅಲ್ಲಿಯವರೆಗೆ ನೀವು ಸುಳ್ಳು ಸುದ್ದಿಗಳನ್ನು ಆನಂದಿಸಿ. ಇದರಲ್ಲಿ ಯಾವುದೇ ಸತ್ಯವಿಲ್ಲ ಮತ್ತು ಇವು ಕೇವಲ ಊಹಾಪೋಹಗಳಷ್ಟೆ ಎಂದಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ 2021 ರಲ್ಲಿ ವಿವಾಹವಾದರು , ಇಬ್ಬರೂ ತಮ್ಮ ಸಂಬಂಧವನ್ನು ಬಹಳ ದಿನಗಳಿಂದ ಗೌಪ್ಯವಾಗಿಟ್ಟಿದ್ದರು. ಈ ಮದುವೆಯಲ್ಲಿ ಅವರಿಬ್ಬರ ಕುಟುಂಬದವರು ಮತ್ತು ಆಪ್ತರು ಮಾತ್ರ ಪಾಲ್ಗೊಂಡಿದ್ದರು. ಇವರಿಬ್ಬರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದವು.
ವಿಕ್ಕಿ ಕೌಶಲ್ ಅವರ ಚಲನಚಿತ್ರ ಬ್ಯಾಡ್ ನ್ಯೂಸ್ ಜುಲೈ 19 ರಂದು ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ತೃಪ್ತಿ ದಿಮ್ರಿ ಅವರೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಹಾಗಾಗಿ ಇಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ನೋಡಲು ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ. ಚಿತ್ರಕ್ಕೆ ಅಭಿಮಾನಿಗಳಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.