Vijay Devarakonda: ಮಿಸ್ಟರಿ ಗರ್ಲ್ ಜೊತೆ ಬೆಡ್ ರೂಂನಲ್ಲಿ ರೌಡಿ ಬಾಯ್ ವಿಜಯ್ ದೇವರಕೊಂಡ.. ಪ್ರೈವೇಟ್ ಪೋಟೋಸ್ ವೈರಲ್!!
ರೌಡಿ ಬಾಯ್ ವಿಜಯ್ ದೇವರಕೊಂಡ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಾರೀ ಚರ್ಚೆಗೆ ಗ್ರಾಸವಾಗುತ್ತಿವೆ..
ನಟ ವಿಜಯ್ ದೇವರಕೊಂಡ ಒಬ್ಬನೇ ರೂಮಿನಲ್ಲಿ ಫಾರೀನ್ ಹುಡುಗಿಯ ಜೊತೆ ಇರುವ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ..
ಈ ಫೋಟೋಗಳಲ್ಲಿ ವಿದೇಶಿ ಹುಡುಗಿಗೆ ವಿಜಯ್ ದೇವರಕೊಂಡ ಮುತ್ತಿಡುವುದು ಕಂಡುಬಂದಿದೆ. ಈ ಪೋಟೋಗಳು ಸದ್ಯ ವಿಭಿನ್ನ ಚರ್ಚೆಗೆ ಗ್ರಾಸವಾಗಿವೆ..
ಆದರೆ ಇದು ವಿಜಯ್ ದೇವರಕೊಂಡ ಅವರ ಹಳೆಯ ಮತ್ತು ಈ ಹಿಂದೆ ಸಿನಿಮಾವೊಂದರ ಶೂಟಿಂಗ್ ವೇಳೆ ತೆಗೆದ ಫೋಟೋಗಳು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ... ಸದ್ಯ ವಿಜಯ್ ದೇವರಕೊಂಡ ಅವರ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.. ಆದರೆ ಈ ಬಗ್ಗೆ ನಟ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಜಯ್ ದೇವರಕೊಂಡ ಅವರ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೇ, ಅವರ ಚಿತ್ರ ಫ್ಯಾಮಿಲಿ ಸ್ಟಾರ್ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಯಶಸ್ಸು ಕಾಣಲಿಲ್ಲ.. ಪ್ರಭಾಸ್ ಕಲ್ಕಿಯಲ್ಲಿ ಕೆಲಕಾಲ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದರು.
ಸದ್ಯ ಅವರು ಜೆರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ದೀಪಾವಳಿಗೆ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಈ ಚಿತ್ರದ ಚಿತ್ರೀಕರಣ ಶ್ರೀಲಂಕಾದಲ್ಲಿ ನಡೆಯುತ್ತಿದೆ.