ವಿರಾಟ್ ಕೊಹ್ಲಿ ಈ ಆರೋಗ್ಯ ಸಮಸ್ಯೆಯೇ ನಾನ್‌ವೆಜ್ ಬಿಟ್ಟ ವೆಜಿಟೇರಿಯನ್ ಆಗಲು ಕಾರಣ !?
ವಿರಾಟ್ ಕೊಹ್ಲಿ ಮೊದಲೆಲ್ಲ ನಾನ್‌ವೆಜ್ ತಿನ್ನುತ್ತಿದ್ದರು. ಆದರೆ ಒಂದು ಬಹುಮುಖ್ಯ ಕಾರಣದಿಂದ ಮಾಂಸಾಹಾರ ಸೇವನೆಯನ್ನು ನಿಲ್ಲಿಸಿದ್ದಾರೆ. ವಿರಾಟ್ ತಮ್ಮ ಡಯೆಟ್‌ನಲ್ಲಿ ಈಗ ಸಂಪೂರ್ಣ ಸಸ್ಯಾಹಾರವನ್ನೇ ಸೇವನೆ ಮಾಡುತ್ತಾರೆ.
ವಿರಾಟ್ ಕೊಹ್ಲಿ ದೈಹಿಕ ಸಮಸ್ಯೆಗಳಿಂದಾಗಿ ಮಾಂಸಾಹಾರ ಸೇವನೆ ಸಂಪೂರ್ಣವಾಗಿ ನಿಲ್ಲಿಸಬೇಕಾಯಿತು. 2020 ರ ಲೈವ್ ಸೆಷನ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರ ಜೊತೆ ಈ ವಿಚಾರವನ್ನು ಖುದ್ದು ಕೊಹ್ಲಿ ಹೇಳಿಕೊಂಡಿದ್ದಾರೆ.
"ನಾನು ಸಸ್ಯಾಹಾರಿಯಾಗಲು ಅನೇಕರು ಬೇರೆ ಬೇರೆ ಕಾರಣಗಳ ಬಗ್ಗೆ ಯೋಚಿಸುತ್ತಾರೆ. ಆದರೆ ಕೆಲವು ದೈಹಿಕ ಸಮಸ್ಯೆಗಳಿಂದ ನಾನು ಸಸ್ಯಾಹಾರಿಯಾಗಬೇಕಾಯಿತು" ಎಂದಿದ್ದಾರೆ.
ವಿರಾಟ್ ಕೊಹ್ಲಿ ನಾನ್ ವೆಜ್ ಸೇವನೆಗೆ ಮುಖ್ಯ ಕಾರಣ ಮೂಳೆಗಳಲಿ ಉಂಟಾದ ಸಮಸ್ಯೆ. ಮೂಳೆಗಳಿಂದ ಕ್ಯಾಲ್ಸಿಯಂ ಕಡಿಮೆಯಾಗಲು ಆರಂಭವಾಯಿತು. ಇದರಿಂದಾಗಿ ವಿರಾಟ್ ಕೊಹ್ಲಿ ಬೆನ್ನು ಮೂಳೆಯ ಸಮಸ್ಯೆ ಎದರಿಸಬೇಕಾಯಿತು.
2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಬೆನ್ನೆಲುಬಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿತ್ತು. ಇದು ಆಟದ ಮೇಲೆಯೂ ಪರಿಣಾಮ ಬೀರಿತು. ಕುತ್ತಿಗೆಯಿಂದ ಬಲಗೈಯ ಕಿರುಬೆರಳಿಗೆ ಹೋಗುವ ನರವು ಒತ್ತಡ ಹೇರುತ್ತಿತ್ತು. ಇದರಿಂದ ಕೈಯಲ್ಲಿ ಜುಮ್ಮೆನಿಸುವಿಕೆ ಉಂಟಾಗುತ್ತಿತ್ತು.
ರಾತ್ರಿಯಲ್ಲಿ ಮಲಗಲು ಸಾಧ್ಯವಾಗದಷ್ಟು ಬೆನ್ನು ನೋವನ್ನು ಕೊಹ್ಲಿ ಅನುಭವಿಸುತ್ತಿದ್ದರಂತೆ. ಮೂಳೆಯ ಸಮಸ್ಯೆಯಿಂದ ಹೊರಬರಲು ವಿರಾಟ್ ಕೊಹ್ಲಿ ನಾನ್ ವೆಜ್ ಸೇವನೆ ನಿಲ್ಲಿಸಬೇಕಾಯಿತು. 2018ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಸಸ್ಯಾಹಾರಿಯಾಗಲು ಕೊಹ್ಲಿ ನಿರ್ಧರಿಸಿದರು.
ವಿರಾಟ್ ಕೊಹ್ಲಿ ದೇಹದಲ್ಲಿ ಯೂರಿಕ್ ಆಮ್ಲ ಉತ್ಪಾದನೆ ಹೆಚ್ಚಿತ್ತು. ಯೂರಿಕ್ ಆಸಿಡ್ ಸಮಸ್ಯೆಯಿಂದ ಪಾರಾಗಲು ಕೊಹ್ಲಿ ಸಂಪೂರ್ಣ ಸಸ್ಯಾಹಾರಿ ಆದರು.