ಲಂಡನ್​ʼಗೆ ಶಿಫ್ಟ್ ಆಗುವ ವದಂತಿ ಮಧ್ಯೆ ವಿರುಷ್ಕಾ ಹೊಸ ಫೋಟೋ ವೈರಲ್! ಅಲ್ಲಿಯೇ ಸೆಟ್ಲ್​ ಆಗೋ ಸುಳಿವು ನೀಡಿದ್ರಾ ಸ್ಟಾರ್ ದಂಪತಿ?

Thu, 25 Jul 2024-4:39 pm,

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅತ್ಯಂತ ನೆಚ್ಚಿನ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಟಿ 20 ವಿಶ್ವಕಪ್ ಗೆದ್ದಾಗಿನಿಂದ, ವಿರಾಟ್ ತಮ್ಮ ಪತ್ನಿ ಅನುಷ್ಕಾ ಮತ್ತು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಕೊಹ್ಲಿ ಜೊತೆ ಲಂಡನ್‌ʼಗೆ ತೆರಳಿದ್ದಾರೆ. 

ಅಂದಿನಿಂದ ಅವರು ಲಂಡನ್‌ʼಗೆ ಶಿಫ್ಟ್ ಆಗಲಿದ್ದಾರೆ ಎಂಬ ಊಹಾಪೋಹ ಇತ್ತು.   

ಆದರೆ, ಈ ವಿಚಾರದಲ್ಲಿ ಅವರು ಇಲ್ಲಿಯವರೆಗೆ ಮೌನ ವಹಿಸಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ತಮ್ಮ ಮಗನೊಂದಿಗೆ ಲಂಡನ್ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು.  'ಲೇಡಿ ಲವ್' ಅನುಷ್ಕಾ ಜೊತೆಗಿನ ಫೋಟೋವೊಂದು ಹೊರಬಿದ್ದಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.  

ಲಂಡನ್‌ʼಗೆ ಶಿಫ್ಟ್ ಆಗುವ ವದಂತಿಗಳ ಮಧ್ಯೆ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಲೇಟೆಸ್ಟ್‌ ಫೋಟೋ ಹೊರಬಂದಿವೆ. ವೈರಲ್ ಚಿತ್ರಗಳಲ್ಲಿ, ಕಿಂಗ್ ಕೊಹ್ಲಿ ತನ್ನ ಲೇಡಿ ಲವ್ ಅನುಷ್ಕಾಳನ್ನು ತೋಳುಗಳಿಂದ ಅಪ್ಪಿಹಿಡಿದು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.   

ಅನುಷ್ಕಾ ಮತ್ತು ವಿರಾಟ್ ಲಂಡನ್‌ʼನಲ್ಲಿದ್ದಾರೆ. ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಕೊಹ್ಲಿಗೆ ಖಾಸಗಿ ಬದುಕು ನೀಡಬೇಕು ಎಂಬ ಕಾರಣಕ್ಕೆ ಅಲ್ಲಿಯೇ ಸೆಟಲ್‌ ಆಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.   

ಈ ಎಲ್ಲಾ ಚರ್ಚೆಗಳ ಮಧ್ಯೆ, ಅನುಷ್ಕಾ ಮತ್ತು ವಿರಾಟ್ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link