25ರ ಹರೆಯದಲ್ಲಿ 52 ವರ್ಷದ ವ್ಯಕ್ತಿ ಜೊತೆ ಮದುವೆ - ಡಿವೋರ್ಸ್‌, ಬಾಯ್ಸ್‌ ಜೊತೆ ಡೇಟಿಂಗ್‌..! ಸಧ್ಯ ಸಿಂಗಲ್‌ ಆದ್ರೂ 1 ಒಂದು ಮಗುವಿದೆ

Kalki Koechlin : ನೀವು ಅನೇಕ ಬಾಲಿವುಡ್ ನಟಿಯರ ಪ್ರೇಮ ಪ್ರಕರಣಗಳನ್ನು ಡಿವೋರ್ಸ್‌ ವಿಚಾರಗಳನ್ನು ದಿನವೂ ಕೇಳ್ತೀರಾ.. ಯಾರೋ ಒಬ್ಬ ಲವ್‌ ಮಾಡಿ ಮದುವೆಯಾಗುತ್ತಿದ್ದರೆ, ಮತ್ತೇ ಯಾರೊಬ್ಬರ ಪ್ರೇಮಕಥೆಯು ಅಪೂರ್ಣವಾಗಿ ಬ್ರೇಕಪ್‌ಗೆ ಬಂದು ನಿಂತಿರುತ್ತದೆ.. ಅಂತಹ ಒಂದು ಕಥೆ ಭಾರತೀಯ ನಟಿಯಾಗಿರುವ ಫ್ರೆಂಚ್ ಸುಂದರಿಯದ್ದು.. 

1 /10

ಕಲ್ಕಿ ಕೆಕ್ಲಾನ್ ಅವರು ಫ್ರೆಂಚ್ ನಟಿಯಾಗಿದ್ದರೂ, ಅವರು ಅನೇಕ ಸೂಪರ್‌ ಹಿಟ್‌ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲ್ಕಿ ಸಿನಿ ಜರ್ನಿಯಂತೆ ಅವರ ಲವ್‌ ಸ್ಟೋರಿಗಳು ತುಂಬಾ ಇಂಟ್ರಸ್ಟಿಂಗ್‌ ಆಗಿವೆ.   

2 /10

ಈಕೆ 'ಗ್ಯಾಂಗ್ ಆಫ್ ವಾಸೇಪುರ್' ಚಿತ್ರಗಳ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಮಾಜಿ ಪತ್ನಿಯೂ ಹೌದು.  

3 /10

ಕಲ್ಕಿ 10 ಜನವರಿ 1984 ರಂದು ಪುದುಚೇರಿಯಲ್ಲಿ ಜನಿಸಿದರು. ಅವರ ಪೋಷಕರು ಫ್ರೆಂಚ್. ಫ್ರಾನ್ಸ್ನಿಂದ ಭಾರತಕ್ಕೆ ಬಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು.   

4 /10

ಈಕೆ ಸ್ಟ್ರಕ್ಚರಲ್ ಇಂಜಿನಿಯರ್ ಮೌರಿಸ್ ಕೆಕ್ಲಾನ್ ಅವರ ಮೊಮ್ಮಗಳು. ಅದೇ ಮೋರಿಸ್ ಐಫೆಲ್ ಟವರ್ ಮತ್ತು ಲಿಬರ್ಟಿ ಪ್ರತಿಮೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.  

5 /10

ಕಲ್ಕಿ ಊಟಿಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದರು. ಅನಂತರ ನಟನೆ ಮೇಲಿನ ಆಸಕ್ತಿಯಿಂದ 18ನೇ ವಯಸ್ಸಿನಲ್ಲಿ ಲಂಡನ್‌ಗೆ ತೆರಳಿ, ಅಲ್ಲಿ ರಂಗಭೂಮಿ ಮತ್ತು ನಾಟಕವನ್ನು ಅಧ್ಯಯನ ಮಾಡಿದರು. ಓದು ಮುಗಿಸಿ ಮತ್ತೆ ಭಾರತಕ್ಕೆ ಬಂದು ಚಿತ್ರರಂಗದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಿದಳು.  

6 /10

ಕಲ್ಕಿ ಕೆಕ್ಲಾನ್ ಅನುರಾಗ್ ಕಶ್ಯಪ್ ಅವರ ದೇವ್ ಡಿ ಚಿತ್ರಕ್ಕಾಗಿ ಆಡಿಷನ್ ನಡೆಸಿ ಆಯ್ಕೆಯಾದರು. ಇಲ್ಲಿ ಕಲ್ಕಿ ಕೆಕ್ಲಾನ್ ಅನುರಾಗ್ ಅವರನ್ನು ಭೇಟಿಯಾದರು. ಇಬ್ಬರ ಸ್ನೇಹ ಮದುವೆಗೆ ಕಾರಣವಾಯಿತು. ಇಬ್ಬರ ನಡುವೆ 14 ವರ್ಷದ ವ್ಯತ್ಯಾಸವಿತ್ತು.  

7 /10

ಕಲ್ಕಿ ಕೆಕ್ಲಾನ್ 2011 ರಲ್ಲಿ ಊಟಿಯಲ್ಲಿ ಅನುರಾಗ್ ಕಶ್ಯಪ್ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಎರಡು ವರ್ಷಗಳ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಅಂತಿಮವಾಗಿ 2015 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.  

8 /10

ಸಂದರ್ಶನವೊಂದರಲ್ಲಿ ಕಲ್ಕಿ ಕೆಕ್ಲಾನ್ ಅವರು ಮದುವೆಗೂ ಮುನ್ನ ಅನೇಕ ಸಂಬಂಧಗಳನ್ನು ಹೊಂದಿದ್ದರು ಎಂದು ಒಪ್ಪಿಕೊಂಡಿದ್ದಾರೆ.    

9 /10

ಕಲ್ಕಿ ಕೇಕ್ಲಾ ಸೆಪ್ಟೆಂಬರ್ 30, 2019 ರಂದು ಗೆಳೆಯ ಗೈ ಹರ್ಷ್‌ಬರ್ಗ್ ಅವರೊಂದಿಗೆ ಗರ್ಭಧಾರಣೆಯನ್ನು ಘೋಷಿಸಿದರು. ಅವರಿಗೆ 7 ಫೆಬ್ರವರಿ 2020 ರಂದು ಜನಿಸಿದ ಮಗಳಿದ್ದಾಳೆ.   

10 /10

ಆ ಸಮಯದಲ್ಲಿ ಕಲ್ಕಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ನಂತರ ಸಂದರ್ಶನವೊಂದರಲ್ಲಿ ತಮಗೆ ಮದುವೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.