ಅನುಷ್ಕಾಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್! ಅದ್ರಲ್ಲಿ ಒಬ್ಬಳು ಕನ್ನಡದ ಪ್ರಖ್ಯಾತ ಹೀರೋಯಿನ್!!

Tue, 25 Jun 2024-3:31 pm,

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರೇಮ ಜೀವನ ಮದುವೆಗೂ ಮುನ್ನ ಸುದ್ದಿಯಾಗಿತ್ತು. ಅನುಷ್ಕಾ ಶರ್ಮಾ ಜೊತೆ ಮದುವೆಗೆ ಮೊದಲು, ಅವರ ಕೆಲ ನಟಿಯರ ಜೊತೆ ಡೇಟಿಂಗ್ ಕೂಡ ಮಾಡಿದ್ದರು ಎಂದು ವರದಿಗಳು ಹೇಳುತ್ತವೆ.

ಈ ಪಟ್ಟಿಯಲ್ಲಿ ಬ್ರೆಜಿಲ್ ರೂಪದರ್ಶಿಯ ಹೆಸರೂ ಸೇರಿದೆ. ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಬ್ರೆಜಿಲಿಯನ್ ಮಾಡೆಲ್ ಇಸಾಬೆಲ್ ಲೇಟಿ ಒಂದೊಮ್ಮೆ ಸಂದರ್ಶನವೊಂದರಲ್ಲಿ ಕೊಹ್ಲಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಒಪ್ಪಿಕೊಂಡಿದ್ದರು.

2014 ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಸಾಬೆಲ್ ಲೇಟಿ, ತಾನು ಮತ್ತು ವಿರಾಟ್ ಸುಮಾರು 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದೇವೆ ಎಂದು ಹೇಳಿದ್ದರು. ಆದರೆ, ಆ ಸಮಯದಲ್ಲಿ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ ಎಂಬುದನ್ನು ಸಹ ತಿಳಿಸಿದ್ದಾರೆ.

ಇನ್ನು 2007ರಲ್ಲಿ ಮಿಸ್ ಇಂಡಿಯಾ ಪಟ್ಟ ಗೆದ್ದಿದ್ದ ಸಾರಾ ಜೇನ್ ಡೈಸ್ ಹೆಸರು ಕೂಡ ವಿರಾಟ್ ಕೊಹ್ಲಿ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ. ಆದರೆ ಇವರ ಪ್ರೀತಿಗೆಬಿಡುವಿಲ್ಲದ ವೇಳಾಪಟ್ಟಿಯೇ ಅಡ್ಡಿಯಾಯಿತು ಎಂದು ಕೆಲ ವರದಿಗಳು ಹೇಳುತ್ತವೆ.

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಜೊತೆ ವಿರಾಟ್ ಕೊಹ್ಲಿ ಹೆಸರು ಒಂದೊಮ್ಮೆ ಕೇಳಿಬಂದಿತ್ತು. 2012 ಕೊನೆಯಲ್ಲಿ, ಇಬ್ಬರ ನಡುವೆ ಉತ್ತಮ ಸ್ನೇಹ ಕಂಡುಬಂದಿತ್ತು. ಆದರೆ, ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿಲ್ಲ.

ಇನ್ನು  ವಿರಾಟ್ ಕೊಹ್ಲಿ ಕನ್ನಡ ಚಿತ್ರರಂಗದ ನಟಿ ಸಂಜನಾ ಜೊತೆ ಕಾಣಿಇಸಿಕೊಂಡಿದ್ದರು. 2009 ರಲ್ಲಿ ಇಬ್ಬರ ನಡುವೆ ಸಂಬಂಧವಿದೆ ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹೊರಬಂದವು. ಆದರೆ ಆ ಸಮಯದಲ್ಲಿ ಸಂಜನಾ ಕೊಹ್ಲಿಯೊಂದಿಗಿನ ಸಂಬಂಧವನ್ನು ನಿರಾಕರಿಸಿ, ಅದು ಸ್ನೇಹವಷ್ಟೇ ಹೊರತು ಬೇರೇನು ಅಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದರು..

ZEENEWS TRENDING STORIES

By continuing to use the site, you agree to the use of cookies. You can find out more by Tapping this link