RCB ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ!?
ಕಳೆದ 17 ಋತುಗಳಿಂದ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಧ್ಯವಾಗಿಲ್ಲ.
ಎಷ್ಟೇ ನಾಯಕತ್ವ ಬದಲಾಯಿಸಿದರೂ, ಎಷ್ಟೇ ಹೊಸತನವನ್ನು ಪರಿಚಯಿಸಿದರೂ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ.
ಇನ್ನು ಮುಂಬರುವ ಸೀಸನ್’ನಲ್ಲಿ ಆರ್ ಸಿ ಬಿ ತಂಡದ ನಾಯಕತ್ವ ಬದಲಾಗುವುದು ಖಚಿತ. ಏಕೆಂದರೆ ಫಾಫ್ ಡುಪ್ಲೆಸಿಸ್’ಗೆ ಈಗ 39 ವರ್ಷ. ಹೀಗಾಗಿ ಮುಂದಿನ ಸೀಸನ್’ನಲ್ಲಿ ಆರ್ಸಿಬಿ ಪರ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ.
ಇನ್ನೊಂದೆಡೆ ಈಗಾಗಲೇ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿರಾಟ್ ನಿವೃತ್ತಿ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಮತ್ತೆ ಆರ್ ಸಿಬಿ ಕ್ಯಾಪ್ಟನ್ ಆಗಲಿ ಎಂಬುದು ಅಭಿಮಾನಿಗಳ ಬೇಡಿಕೆ.
ಐಪಿಎಲ್ 2025 ರಿಂದ ಕೊಹ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗುವ ಸಾಧ್ಯತೆ ಹೆಚ್ಚಿದೆ.
ಅಂದಹಾಗೆ ಈ ಹಿಂದೆ ಕ್ಯಾಪ್ಟನ್ ಆಗಿದ್ದ ವಿರಾಟ್, RCB ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ್ದರು, ಅದರಲ್ಲಿ 66 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು ತಂಡ. ಇದಲ್ಲದೆ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ 2016 ರಲ್ಲಿ ಫೈನಲ್ಗೆ ಪ್ರವೇಶಿಸಿದರೆ, 3 ಬಾರಿ ಪ್ಲೇ ಆಫ್ ಎಂಟ್ರಿ ಪಡೆದಿತ್ತು.