ಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್‌ ಖಾನ್‌ ಮುಂದೆ ಪತ್ನಿಯ ಸೀಕ್ರೆಟ್‌ ಬಿಚ್ಚಿಟ್ಟ ವಿರಾಟ್‌ ಕೊಹ್ಲಿ

Mon, 19 Aug 2024-3:29 pm,

ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಲೋಕದ ಪವರ್‌ ಕಪಲ್‌ ಎಂದೇ ಖ್ಯಾತಿ ಪಡೆದಿದ್ದಾರೆ.

 

ಇನ್ನು ಈ ಜೋಡಿಯಂತೇ ನಾವು ಬದುಕಬೇಕೆನ್ನುವುದು ಅನೇಕರ ಆಸೆಯೂ ಹೌದು. ಆದರೆ ಈ ಎಲ್ಲದರ ಮಧ್ಯೆ ನಟ ಅಮೀರ್‌ ಖಾನ್‌ ಮುಂದೆ ತನ್ನ ಪತ್ನಿಯಲ್ಲಿ ಇಷ್ಟವಾಗದ ಒಂದು ವಿಷಯದ ಬಗ್ಗೆ ವಿರಾಟ್‌ ಕೊಹ್ಲಿ ಮಾತನಾಡಿದ್ದಾರೆ.

 

ಒಂದೊಮ್ಮೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅಮೀರ್ ಖಾನ್ ಚಾಟ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅನುಷ್ಕಾ ಬಗ್ಗೆ ಪ್ರಶ್ನೆ ಕೇಳಲಾಗಿದೆ.

 

ಅನುಷ್ಕಾ ಬಗ್ಗೆ ಇಷ್ಟಪಡದ ವಿಷಯ ಯಾವುದು ಎಂದು ಪ್ರಶ್ನೆ ಕೇಳಿದಾಗ, ಅದಕ್ಕೆ ಉತ್ತರಿಸಿದ ವಿರಾಟ್‌ ಆಕೆಯಲ್ಲಿ ದ್ವೇಷ ಮಾಡುವಂತಹ ಯಾವ ವಿಷಯವೂ ಇಲ್ಲ. ಆದರೆ ಆಕೆ ತುಂಬಾ ತಡ ಮಾಡುತ್ತಾರೆ. 5-6 ನಿಮಿಷ ಲೇಟ್‌ ಮಾಡೋದು ನನಗೆ ಇಷ್ಟವಾಗಲ್ಲ" ಎಂದಿದ್ದಾರೆ.

 

ಇನ್ನು "ಅನುಷ್ಕಾ ತುಂಬಾ ಪ್ರಾಮಾಣಿಕಳು ಮತ್ತು ಆಕೆ ತೋರುವ ಕಾಳಜಿಯ ಸ್ವಭಾವವನ್ನು ನಾನು ಪ್ರೀತಿಸುತ್ತೇನೆ" ಎಂದಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link