ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ರಮ: 40 ಲಕ್ಷಕ್ಕೆ ಮಾರಾಟವಾಯ್ತು ಕೊಹ್ಲಿ ಜೆರ್ಸಿ..ರೋಹಿತ್‌ ಬ್ಯಾಟ್‌ 24 ಲಕ್ಷಕ್ಕೆ ಹರಾಜ್‌

Sat, 24 Aug 2024-7:20 am,

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕ್ರೇಜ್ ಅವರ ಕುರಿತು ವಿಶೇಷ ಪರಿಚಯ ಅಗತ್ಯವಿಲ್ಲ. ಕಿಂಗ್‌ ಕೊಹ್ಲಿಗೆ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.   

ಶತ್ರು ದೇಶವಾದ ಪಾಕಿಸ್ತಾನದಲ್ಲಿಯೂ ಕೂಡ ಕೊಹ್ಲಿಗೆ ಅಭಿಮಾನಿಗಳಿದ್ದಾರೆ. ಕೊಹ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿದಿದ್ದರೂ, ನಾಯಕನಾಗಿ ಒಂದೇ ಒಂದು ವಿಶ್ವಕಪ್, ಐಪಿಎಲ್ ಪ್ರಶಸ್ತಿ ಗೆಲ್ಲದಿದ್ದರೂ ಸಹ ಅರಿಗಿರುವ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ.  

ಇದಕ್ಕೆ ಉದಾಹರನೆಯಂತೆ ಅದು ಇದೀಗ ಮತ್ತೊಮ್ಮೆ ಸ್ಪಷ್ಟವಾಗಿದೆ. ಕೊಹ್ಲಿ ಬಳಸಿದ ಜೆರ್ಸಿ ರೂ. 40 ಲಕ್ಷಕ್ಕೆ ಮಾರಾಟವಾಗಿದ್ದು, ಅವರ ಕೈಗವಸುಗಳ ಬೆಲೆ ರೂ. 28 ಲಕ್ಷಕ್ಕೆ ಮಾರಾಟವಾಗಿದೆ.  

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ಆಯೋಜಿಸಿದ್ದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಕೊಹ್ಲಿಯ ವಸ್ತುಗಳು ದುಬಾರಿ ಬೆಲೆಗೆ ಮಾರಾಟವಾಗಿದೆ.  

ರಾಹುಲ್-ಅಥಿಯಾ ಶ್ರವಣ ಮತ್ತು ದೃಷ್ಟಿಹೀನ ವಿದ್ಯಾರ್ಥಿಗಳಿಗೆ 'ಕ್ರಿಕೆಟ್ ಫಾರ್ ಎ ಕಾಸ್' ಎಂಬ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ ಹಣವನ್ನು ವಿಪ್ಲಾ ಎಂಬ ಪ್ರತಿಷ್ಠಾನಕ್ಕೆ ನೀಡಲಾಗುವುದು.   

ಈ ಪ್ರತಿಷ್ಠಾನವು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಶ್ರವಣ ಮತ್ತು ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಶಾಲೆಯನ್ನು ನಡೆಸುತ್ತಿದೆ.  

ಈ ಫೌಂಡೇಶನ್‌ನೊಂದಿಗೆ ತನಗೆ ವಿಶೇಷ ಸಂಬಂದವಿದೆ ಎಂದು ಅಥಿಯಾ ಶೆಟ್ಟಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ತಾನು ಬಾಲ್ಯದಿಂದಲೂ ಈ ಪ್ರತಿಷ್ಠಾನದೊಂದಿಗೆ ಒಡನಾಟ ಹೊಂದಿದ್ದೇನೆ, ಇಲ್ಲಿನ ಮಕ್ಕಳಿಗೆ ಕಲಿಸಲು ಮತ್ತು ಅವರೊಂದಿಗೆ ಸಮಯ ಕಳೆಯಲು ನಾನು ತುಂಬಾ ಸಂತೋಷ ಪಡುತ್ತೇನೆ ಎಂದು ಅವರು ನೆನಪಿಸಿಕೊಂಡಿದ್ದಾರೆ.   

ಅಜ್ಜಿ ಆರಂಭಿಸಿರುವ ಈ ಪ್ರತಿಷ್ಠಾನವನ್ನು ಬೆಂಬಲಿಸಲು ಬಯಸುವುದಾಗಿ ತಿಳಿಸಿದರು.  

ಈ ಫೌಂಡೇಶನ್‌ಗೆ ದೇಣಿಗೆ ನೀಡಲು ರಾಹುಲ್-ಅಥಿಯಾ ಶೆಟ್ಟಿ ಭಾರತದ ಸ್ಟಾರ್ ಕ್ರಿಕೆಟಿಗರ ವಸ್ತುಗಳನ್ನು ಹರಾಜು ಹಾಕಿದ್ದಾರೆ. ಶುಕ್ರವಾರ ನಡೆದ ಈ ಹರಾಜಿನಲ್ಲಿ ಕೊಹ್ಲಿ ಅವರ ಜೆರ್ಸಿ ಮತ್ತು ಗ್ಲೌಸ್‌ಗಳು ಹೆಚ್ಚಿನ ಬೆಲೆಗೆ ಮಾರಾಟವಾದವು.   

ಕೊಹ್ಲಿ ಜೆರ್ಸಿ ರೂ. 40 ಲಕ್ಷ, ಕೈಗವಸು ರೂ. 28 ಲಕ್ಷಕ್ಕೆ ಮಾರಾಟವಾದರೆ, ರೋಹಿತ್ ಬ್ಯಾಟ್ ರೂ. 24 ಲಕ್ಷ, ಧೋನಿ ಬ್ಯಾಟ್ ರೂ. 13 ಲಕ್ಷ, ದ್ರಾವಿಡ್ ಬ್ಯಾಟ್ ರೂ. 11 ಲಕ್ಷ, ರಾಹುಲ್ ಜೆರ್ಸಿ ರೂ. 11 ಲಕ್ಷಕ್ಕೆ ಮಾರಾಟವಾಗಿದೆ.   

ಈ ಕಾರ್ಯಕ್ರಮದ ಮೂಲಕ ರಾಹುಲ್-ಅಥಿಯಾ ದಂಪತಿ ಒಟ್ಟು ರೂ. 1.93 ಕೋಟಿ ಸಂಗ್ರಹವಾಗಿದೆ. ಈ ಮೊತ್ತವನ್ನು ವಿಪ್ಲಾ ಫೌಂಡೇಶನ್‌ಗೆ ನೀಡಲಾಗಿದೆ.  

ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಾಹಲ್, ರಿಷಬ್ ಪಂತ್, ಸಂಜು ಸ್ಯಾಮ್ಸನ್ ಅವರಂತಹ ಸ್ಟಾರ್ ಕ್ರಿಕೆಟಿಗರು ರಾಹುಲ್-ಅಥಿಯಾ ಮಾಡಿದ ಈ ಮಹಾನ್ ಕಾರ್ಯಕ್ಕೆ ಸಾಥ್‌ ನೀಡಿದ್ದಾರೆ.   

ಕೇವಲ ಟೀಂ ಇಂಡಿಯಾದ ಆಟಗಾರರಷ್ಟೆ ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಕ್ವಿಂಟನ್ ಡಿ ಕಾಕ್ ಕೂಡ ಬೆಂಬಲಕ್ಕೆ ನಿಂತರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link