ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಶಿಕ್ಷಣ ಪಡೆದಿದ್ದು ಕರ್ನಾಟಕದ ಈ ವಿದ್ಯಾಸಂಸ್ಥೆಯಲ್ಲಿ! ಆ ಕಾಲೇಜು ಬೇರಾವುದು ಅಲ್ಲ...
ಶಿಕ್ಷಣದ ವಿಷಯದಲ್ಲಿ ಬಾಲಿವುಡ್ʼನ ಹಲವು ಸೆಲೆಬ್ರಿಟಿಗಳು ಅಗ್ರಸ್ಥಾನದಲ್ಲಿದ್ದಾರೆ. ಆ ಸೆಲೆಬ್ರಿಟಿಗಳಲ್ಲಿ ಒಬ್ಬರು ಅನುಷ್ಕಾ ಶರ್ಮಾ. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಶಿಕ್ಷಣದ ವಿಷಯದಲ್ಲಿ ತುಂಬಾ ಮುಂದಿದ್ದಾರೆ.
ನಟಿ ಅನುಷ್ಕಾ ಶರ್ಮಾ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಕ್ಷೇತ್ರಕ್ಕೆ ಕಾಲಿಡುವ ಮೊದಲು ಯಾವುದೇ ಹಿನ್ನೆಲೆಯಿರಲಿಲ್ಲ. ಅಷ್ಟೇ ಅಲ್ಲದೆ, ತಾನು ನಟಿಯಾಗಬೇಕು ಎಂದೂ ಬಯಸಿರಲಿಲ್ಲವೆಂದು ಎಂದು ತನ್ನ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 1 ಮೇ 1988 ರಂದು ಅನುಷ್ಕಾ ಶರ್ಮಾ ಜನಿಸಿದರು. ಅವರ ತಂದೆ ಕುಮಾರ್ ಶರ್ಮಾ ಸೇನೆಯಲ್ಲಿ ಅಧಿಕಾರಿಯಾಗಿದ್ದು, ತಾಯಿ ಆಶಿಮಾ ಶರ್ಮಾ ಗೃಹಿಣಿಯಾಗಿದ್ದರು. ಅವರ ಸಹೋದರ ಕರ್ಣೇಶ್ ಶರ್ಮಾ ಮರ್ಚೆಂಟ್ ನೇವಿಯಲ್ಲಿದ್ದರು. ಇದೀಗ ಚಲನಚಿತ್ರ ನಿರ್ಮಾಪಕರಾಗಿದ್ದಾರೆ
ಇನ್ನು ಅನುಷ್ಕಾ ಶರ್ಮಾ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕು. ಅವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಪೂರ್ಣಗೊಳಿಸಿದರು.
ಇನ್ನು ವಿರಾಟ್ ಕೊಹ್ಲಿ ಓದಿದ್ದು 12ನೇ ತರಗತಿ. ಶಿಕ್ಷಣವನ್ನು ಕ್ರಿಕೆಟ್ʼಗಾಗಿ ತೊರೆದಿದ್ದರು. ಆದರೆ ಅನುಷ್ಕಾ ಶರ್ಮಾ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಓದಿರುವ ಅವರು, ಕಾಲೇಜಿನಲ್ಲಿಯೂ ಟಾಪರ್ ಆಗಿದ್ದೆ ಎಂದು ತನ್ನ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.
ಅನುಷ್ಕಾ ಶರ್ಮಾ ಕಾಲೇಜು ಮುಗಿದ ನಂತರ ಮಾಡೆಲಿಂಗ್ʼನತ್ತ ಗಮನ ಹರಿಸಲು ಬಯಸಿದ್ದರು. ನಟಿಯಾಗುವ ಯೋಚನೆಯೂ ಇರಲಿಲ್ಲ. ಇನ್ನು ಪದವಿ ಮುಗಿದ ನಂತರ ಅನುಷ್ಕಾ ಶರ್ಮಾ ಮುಂಬೈಗೆ ತೆರಳಿದರು. ಅಲ್ಲಿ ಮಾಡೆಲಿಂಗ್‌ನಲ್ಲಿ ವೃತ್ತಿಜೀವನವನ್ನು ಮಾಡಲು ಎಲೈಟ್ ಮಾಡೆಲ್ ಮ್ಯಾನೇಜ್‌ಮೆಂಟ್‌ಗೆ ಸೇರಿದರು.
2007 ರಲ್ಲಿ ಲ್ಯಾಕ್ಮೆ ಫ್ಯಾಶನ್ ವೀಕ್ ಮೂಲಕ ಪಾದಾರ್ಪಣೆ ಮಾಡಿದ ಅವರು ಅನೇಕ ಬ್ರ್ಯಾಂಡ್ʼಗಳಿಂದ ಆಫರ್ʼಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ನಂತರ ಸ್ವಲ್ಪ ಸಮಯದ ನಂತರ, ನಟನಾ ಶಾಲೆಗೆ ಪ್ರವೇಶ ಪಡೆದು ಜೊತೆಗೆ, ಆಡಿಷನ್ ಕೂಡ ನೀಡಲು ಪ್ರಾರಂಭಿಸಿದರು.
ಅನುಷ್ಕಾ ಶರ್ಮಾ 2008 ರಲ್ಲಿ ಶಾರುಖ್ ಖಾನ್ ಅಭಿನಯದ ಚಿತ್ರದ ಮೂಲಕ ಬಾಲಿವುಡ್ʼಗೆ ಪಾದಾರ್ಪಣೆ ಮಾಡಿದರು.