Vivo Y200i: 12GB RAM, 6000mAh ಬ್ಯಾಟರಿಯ ವಿವೋ Y200i ಸ್ಮಾರ್ಟ್‌ಫೋನ್ ಬಿಡುಗಡೆ
ವಿವೋ Y200i ಸ್ಮಾರ್ಟ್‌ಫೋನ್ 6.72 ಇಂಚಿನ (2408×1080 ಪಿಕ್ಸೆಲ್ ) FULL D+ LCD ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಬೆಂಬಲ ಮತ್ತು 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 100% DCI-P3 ಮತ್ತು 107% NTSC ಕಲರ್ ಗ್ಯಾಮಟ್ ಹೊಂದಿದೆ.
ವಿವೋ Y200i ಸ್ಮಾರ್ಟ್‌ಫೋನ್ Octa core Snapdragon 4 gen 2 4nm ಪ್ರೊಸೆಸರ್ ಬಲ ಪಡೆದಿದ್ದು, (2.2 GHz x 2 A78-ಆಧಾರಿತ +2GHz x 6 A55-ಆಧಾರಿತ Kryo CPUಗಳು) ಇದರೊಂದಿಗೆ ಅಡ್ರಿನೋ 613 JPಯು ಬಲ ಹೊಂದಿದೆ. ಇದರ ಜೊತೆಗೆ 8GB/12GB LPDDR4x RAM, 256GB/512GB (UFS 2.2) ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ.
ವಿವೋ Y200i ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಹೊಂದಿದ್ದು, f/2.05 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಸೆನ್ಸರ್ LED ಪ್ಲ್ಯಾಶ್ ಆಯ್ಕೆಯೊಂದಿಗೆ ಆಕರ್ಷಕ ಫೀಚರ್ಸ್ ಹೊಂದಿದೆ.
ವಿವೋ Y200i ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಧೂಳು ಮತ್ತು ನೀರು ನಿರೋಧಕ (IP64), 3.5MM ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್, 5G SA/NSA, ಡ್ಯುಯಲ್ 4G VoLTE, WiFi 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, GPS/GLONASS/Beidou, USB ಟೈಪ್-ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿದೆ.
ವಿವೋ Y200i ಸ್ಮಾರ್ಟ್‌ಫೋನ್ ಬ್ಲೂ, ಗ್ಲೇಸಿಯರ್ ವೈಟ್ ಮತ್ತು ಮಿಡ್‌ನೈಟ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಇದನ್ನು ಈಗ ಚೀನಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರ 8GB + 256GB ಮಾದರಿಗೆ 1,599 ಯುವಾನ್(18,800 ರೂ.), 12GB + 256GBಗೆ 1,799 ಯುವಾನ್(21,155 ರೂ.) ಮತ್ತು 12GB+512GBಗೆ 1,999 ಯುವಾನ್(23,500 ರೂ.) ಇದೆ.