Vodafone-Ideaನಿಂದ Premium VOD Service ಬಿಡುಗಡೆ, ವಿಶೇಷತೆ ಏನು?
1. 1. ಭಾರತದಲ್ಲಿ PVOD ಮಾರುಕಟ್ಟೆ ಹೇಗಿದೆ - ಭಾರತದಲ್ಲಿ PVOD ಮಾರುಕಟ್ಟೆ ಪ್ರೀಮ್ಯಾಚೂರ್ ಆಗಿದ್ದರು ಕೂಡ ಆಶಾಜನಕವಾಗಿದೆ ಎಂದು ಕಂಪನಿ ಹೇಳಿದೆ. ಈ ರೀತಿಯ ಮಾಡೆಲ್ ಗಳು ಮಹಾಮಾರಿಯ ನಂತರದ ಯುಗದಲ್ಲಿ ಬದಲಾಗುತ್ತಿವೆ. ಏಕೆಂದರೆ ಗ್ರಾಹಕರು ತಮ್ಮ ಮನೆಯಲ್ಲಿಯೇ ಆರಾಮದಾಯಕ ಜಾಗದಲ್ಲಿ ಕುಳಿತು ಮನರಂಜನೆ ಮಾಡಲು ಪರ್ಯಾಯಗಳನ್ನು ಹುಡುಕುತ್ತಿದ್ದಾರೆ ಎಂದು ಕಂಪನಿ ಹೇಳಿದೆ.
2. ಪ್ರಿಮಿಯಂ Hollywood ಚಿತ್ರಗಳನ್ನು ವಿಕ್ಷೀಸಬಹುದು - ಈ ಕುರಿತು ಹೇಳಿಕೆ ನೀಡಿರುವ Vi ಮೂವಿಸ್ ಹಾಗೂ ಟಿವಿ ಆಪ್ ನಲ್ಲಿ ಪೇ ಪರ್ ವ್ಯೂ ಮಾಡೆಲ್ ನ ಮನರಂಜನೆಯ ಪ್ರಸ್ತುತಿಯನ್ನು ವಿಸ್ತರಿಸಿದೆ ಎಂದು ಹೇಳಿದೆ. ಸದ್ಯ ಅಸ್ತಿತ್ವದಲ್ಲಿರುವ ಪ್ರಸ್ತುತಿಯ ಸಹಾಯದಿಂದ ಬಳಕೆದಾರರು ತಮ್ಮ ರಿಚಾರ್ಚ್ ಅಥವಾ ಪೋಸ್ಟ್ ಪೇಡ್ ಪ್ಲಾನ್ ಗೆ ಅನುಗುಣವಾಗಿ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಕಂಟೆಂಟ್ ಅನ್ನು ವಿಕ್ಷೀಸಬಹುದು.
3. ಉದ್ದೇಶ ಏನು? - Pay Per View ಬಿಡುಗಡೆ ಹಿಂದಿನ ಈ ಅಜೆಂಡಾ ವಿಸ್ತಾರಗೊಳ್ಳುತ್ತಿದ್ದು, ಇದರಲ್ಲಿ ಬಳಕೆದಾರರು ತಮಗಿಷ್ಟವಾದದ್ದನ್ನು ತಮ್ಮ ಭಾಷೆಯಲ್ಲಿ ವಿಕ್ಷೀಸಬಹುದು. VIL ಮತ್ತು Hungama ನಡುವಿನ ಒಪ್ಪಂದವು ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಮತ್ತು ಟೆಲಿಕಾಂ ಕಂಪನಿಗಳ ಚಂದಾದಾರರಿಗೆ ಪ್ರೀಮಿಯಂ ಹಾಲಿವುಡ್ ಚಿತ್ರಗಳಿಗೆ ಪ್ರವೇಶವನ್ನು ನೀಡುತ್ತದೆ.
4. ಯಾವ ಯಾವ ಪ್ರಿಮಿಯಂ ಚಿತ್ರಗಳನ್ನು ವಿಕ್ಷೀಸಬಹುದು - ಈ ಸೇವೆಯಡಿಯಲ್ಲಿ, VIL ಗ್ರಾಹಕರಿಗೆ ಲಭ್ಯವಾಗಲಿರುವ ಚಲನಚಿತ್ರಗಳಲ್ಲಿ Tenet, Joker, Birds of Prey, SCOOB, Aquaman ಗಳಂತಹ ಪ್ರಿಮಿಯಂ ಚಿತ್ರಗಳು ಶಾಮೀಲಾಗಿವೆ.
5. ಪಾಲುದಾರಿಕೆ ಕುರಿತು ಮಾತನಾಡಿದ ವಿಐಎಲ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅವ್ನಿಶ್ ಖೋಸ್ಲಾ, ಆರ್ಥಿಕತೆ ಮತ್ತು ಮನರಂಜನಾ ವ್ಯವಹಾರವನ್ನು ತೆರೆಯುವುದರೊಂದಿಗೆ, ಹೊಸ ಕಂಟೆಂಟ್ ಬಳಕೆ ಮಾದರಿಗಳು ಹೊರಹೊಮ್ಮುತ್ತಿವೆ ಮತ್ತು ಬಳಕೆದಾರರಿಗೆ ಕಂಟೆಂಟ್ ಅನ್ನು ನಿಗದಿತ ಬೆಲೆಗೆ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಕಂಟೆಂಟ್ ಹಣಗಳಿಕೆಗಾಗಿ ಹೆಚ್ಚಾಗಿ ಬಳಕೆಯಾಗದ ಈ ಮಾರುಕಟ್ಟೆಯಲ್ಲಿ ಟೆಲಿಕಾಂ ಮೊದಲ ವಿಧಾನವನ್ನು ಅಳವಡಿಸಿಕೊಳ್ಳಲು ಅವರ ನವೀನ ಮತ್ತು ಪಾಲುದಾರಿಕೆ ವಿಷಯ ತಂತ್ರವು ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ. ಈ ವಿಭಾಗದ ಬೆಳವಣಿಗೆಗೆ ಹಂಗಮಾ ಡಿಜಿಟಲ್‌ನಂತಹ ಪಾಲುದಾರರೊಂದಿಗೆ ಕೆಲಸ ಮಾಡಲು ವಿಐಎಲ್ ಸಿದ್ಧವಾಗಿದೆ ಎಂದು ಖೋಸ್ಲಾ ಹೇಳಿದ್ದಾರೆ.