Voice Connection With Romance: ಸಂಗಾತಿಯ ಆಕರ್ಷಣೆಯಲ್ಲಿ ಧ್ವನಿಯ ಪಾತ್ರ, ಈ ರೀತಿ ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ಗುರುತಿಸಿ
1. ಧ್ವನಿ ಮತ್ತು ಸಂಬಂಧ - ಕಡಿಮೆ ಪಿಚ್‌ನಲ್ಲಿ ಮಾತನಾಡುವ ಪುರುಷರು, ತಮ್ಮ ಸಂಗಾತಿಯೊಂದಿಗೆ ಸಂಭಾಷಣೆಯಲ್ಲಿ ನಿಷ್ಪ್ರಯೋಜಕರಾಗಿದ್ದಾರೆ ಮತ್ತು ಅವರು ತಮ್ಮ ಸಂಗಾತಿಯೊಂದಿಗೆ ಕಡಿಮೆ ಬಾಂಧವ್ಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಈ ಅಧ್ಯಯನದಲ್ಲಿ ಲೇಖಕರು ವಿದ್ಯಾರ್ಥಿಗಳಿಗೆ ಪ್ರಶ್ನಾವಳಿಯನ್ನು ನೀಡಿ ಅವರ ಉತ್ತರಗಳನ್ನು ದಾಖಲಿಸಿದ್ದಾರೆ. ದೊಡ್ಡ ಧ್ವನಿ ಹೊಂದಿರುವ ಜನರು ತಮ್ಮ ಸಂಗಾತಿಯ ಜೊತೆಗೆ ಕಡಿಮೆ ಅಟ್ಯಾಚ್ಮೆಂಟ್ ಹೊಂದಿರುತ್ತಾರೆ ಎಂದು ತಂಡ ಹೇಳಿದೆ.
2. ಈ ರೀತಿಯ ಧ್ವನಿ ಇರುವವರ ವ್ಯವಹಾರ ರೂಡ್ ಆಗಿರುತ್ತದೆ - ಇದಲ್ಲದೆ ಮೆಲು ಧ್ವನಿಯಲ್ಲಿ ಮಾತನಾಡುವವರು ತಮ್ಮ ಕುಟುಂಬ ಸದಸ್ಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದೂ ಕೂಡ ಅಧ್ಯಯನದಲ್ಲಿ ಹೇಳಲಾಗಿದೆ. ಇದೇ ಕಾರಣದಿಂದ ಅವರು ತಮ್ಮ ಆಪ್ತರೊಂದಿಗೆ ಕಡಿಮೆ ಬಾಂಧವ್ಯವನ್ನು ಹೊಂದಿರುತ್ತಾರೆ. ಈ ಕುರಿತು ಹೇಳುವ ಚೀನಾದ ಚೆಂಗ್ಡುನಲ್ಲಿರುವ ಸಿಚುವಾನ್ ನಲ್ಲಿರುವ ನಾರ್ಮಲ್ ವಿಶ್ವವಿದ್ಯಾಲಯದ ತಜ್ಞರು, 'ಅಧಿಕ ಪುರುಷತ್ವದ ಅಥವಾ ಗಡಸು' ಧ್ವನಿ ಹೊಂದಿರುವ ಜನರು ಸಹ ಸಂಬಂಧದಲ್ಲಿ ಹೆಚ್ಚುಆತ್ಮೀಯತೆ ಹೊಂದಿಲ್ಲದವರು ಎಂದು ಭಾವಿಸುತ್ತಾರೆ.
3. ಧ್ವನಿ ಭಾರ ಇರುವ ಕಾರಣವೇನು? - ಪುರುಷರಲ್ಲಿನ ಭಾರವಾದ ಧ್ವನಿ ಮತ್ತು ಹೆಚ್ಚಿನ ಟೆಸ್ಟೋಸ್ಟೆರಾನ್ ಮಟ್ಟಗಳ ನಡುವೆ ಸಂಬಂಧವಿದೆ ಎಂದು ಲೇಖಕರು ಹೇಳುತ್ತಾರೆ. ಬಹುಶಃ ಇದು ಅವರ ನಡವಳಿಕೆಯಲ್ಲಿ ಅಸಭ್ಯತೆಯನ್ನು ತರುತ್ತದೆ. ಹೆಚ್ಚಿನ ಟೆಸ್ಟೋಸ್ಟೆರಾನ್ ಮಟ್ಟವು ಹಾರ್ಮೋನುಗಳ ಅಸ್ವಸ್ಥತೆಯಿಂದಾಗಿರಬಹುದು. ಆದರೆ, ಈ ಸಮಸ್ಯೆ ಮಹಿಳೆಯರಿಗೂ ಕಂಡುಬರುತ್ತದೆ. ಮಹಿಳೆಯರಲ್ಲಿ ಹಿರ್ಸುಟಿಸಮ್, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಜನ್ಮಜಾತ ಹೈಪರ್ಪ್ಲಾಸಿಯಾ ಇವು ಹೆಚ್ಚಿನ ಟೆಸ್ಟೋಸ್ಟೆರಾನ್ ಮಟ್ಟಕ್ಕೆ ಸಾಮಾನ್ಯ ಕಾರಣಗಳಾಗಿವೆ.
4. ಹೈ ಪಿಚ್ ನಲ್ಲಿ ಮಾತನಾಡುವವರು ರೊಮ್ಯಾಂಟಿಕ್ ಆಗಿರುತ್ತಾರೆ - ಭಾರವಾದ ಧ್ವನಿಹೊಂದಿದವರಿಗಿಂತ, ಹೈ ಪಿಚ್ ನಲ್ಲಿ ಮಾತನಾಡುವ ಜನರು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ. ಇಂತಹ ಪುರುಷರು ತಮ್ಮ ಸಂಗಾತಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ' ಡೈಲಿಮೇಲ್ 'ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಹೊಸ ಅಧ್ಯಯನದಲ್ಲಿ, ಪಿಚ್ ಅನ್ನು ದೈಹಿಕ ಆಕರ್ಷಣೆಗೆ ಜೋಡಿಸಲಾಗಿದೆ. ಈ ಅಧ್ಯಯನದಲ್ಲಿ 218 ವಿದ್ಯಾರ್ಥಿಗಳು, 90 ಪುರುಷರು ಮತ್ತು 128 ಮಹಿಳೆಯರು ಶಾಮೀಲಾಗಿದ್ದರು.
5. ಮಹಿಳೆಯರ ಧ್ವನಿಯಿಂದ ಏನು ತಿಳಿಯುತ್ತದೆ - 'ಜರ್ನಲ್ ಆಫ್ ಸೆಕ್ಸ್ ಅಂಡ್ ಮ್ಯಾರಿಟಲ್ ಥೆರಪಿ'ಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಭಾರವಾದ ಧ್ವನಿ ಹೊಂದಿರುವ ಜನರು ಸಹ ತಮ್ಮ ಸಂಗಾತಿಗೆ ಮೋಸ ಮಾಡಬಹುದು ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.ಆದರೆ, ಸಂಶೋಧನಾ ತಂಡದ ಪ್ರಕಾರ, ಮಹಿಳೆಯರ ಧ್ವನಿ ಅವರ ಸಂಬಂಧಗಳ ಜೊತೆಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಅಂದರೆ, ಮಹಿಳೆಯರ ಧ್ವನಿಯಿಂದ ಅವರ ನಡುವಳಿಕೆಯ ಬಗ್ಗೆ ಏನೂ ತಿಳಿಯುವುದಿಲ್ಲ,