Holi 2023 Special Recipes: ಹೋಳಿ ಹಬ್ಬದ ಮಜ ಇಮ್ಮಡಿಗೊಳಿಸಬೇಕೆ? ಈ ಲೇಖನ ಓದಿ
1. ಚಂದ್ರಕಲಾ: ಹೋಳಿ ಹಬ್ಬದ ವಿಶೇಷ ತಿನಿಸುಗಳು ವಿಷಯಕ್ಕೆ ಬಂದರೆ ಅದರಲ್ಲ ಮೊತ್ತಮೊದಲ ಹೆಸರು ಬರುವುದು ಎಂದರೆ ಅದು ಚಂದ್ರಕಲಾ ಸಿಹಿ ತಿಂಡಿ. ಉತ್ತರ ಭಾರದದಲ್ಲಿ ಈ ಸಿಹಿಯನ್ನು ಬಹುತೇಕ ಮನೆಗಳಲ್ಲಿ ತಯಾರಿಸುತ್ತಾರೆ.
2. ದಹಿವಡೆ: ಈ ಪಟ್ಟಿಯಲ್ಲಿ ಬರುವ ಎರಡನೇ ಹೆಸರು ಎಂದರೆ ಅದುವೇ ದಹಿವಡೆ. ಹಸಿರು ಚಟ್ನಿ, ಸಿಹಿ ಹುಣಸೆ ಚಟ್ನಿಯ ಜೊತೆಗೆ ದಹಿ ವಡೆ ಸೇವನೆಯ ಮಜವೇ ವಿಭಿನ್ನವಾಗಿರುತ್ತದೆ.
3. ರಾಜಕಚೌರಿ: ಹೋಳಿ ಹಬ್ಬದ ದಿನ ಮನೆಮನೆಗಳಲ್ಲಿ ಚಾಟ್ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಈ ಚಾಟ್ ಪದಾರ್ಥಗಳಲ್ಲಿ ಬರುವ ಮೊದಲ ಹೆಸರು ಎಂದರೆ ಅದುವೇ ರಾಜಕಚೌರಿ.
4. ಉದ್ದಿನ ಬೇಳೆ ಕಚೋರಿ: ಹೋಳಿ ಹಬ್ಬದ ವಿಶೇಷ ವ್ಯಂಜನಗಳಲ್ಲಿ ಉದ್ದಿನ ಬೇಳೆಯಿಂದ ತಯಾರಿಸಲಾಗುವ ಉದ್ದಿನ ಬೇಳೆ ಕಚೋರಿ ಕೂಡ ಒಂದು. ಇದನ್ನು ಕೂಡ ಹಸಿರು ಚಟ್ನಿ ಮತ್ತು ಸಿಹಿಯಾದ ಹುಣಸೆ ಚಟ್ನಿಯ ಮೂಲಕ ಸೇವಿಸಿ ಮಜಾ ಮಾಡಬಹುದು.
5. ರಬಡಿ ಖೀರ್: ಹೋಳಿಯ ಪವಿತ್ರ ಸಂದರ್ಭದಲ್ಲಿ ನೀವು ಪಾಯಸ ತಯಾರಿಸಲು ಯೋಚಿಸುತ್ತಿದ್ದರೆ, ರಬಡಿ ಖೀರ್ ಅನ್ನು ನೀವು ತಯಾರಿಸಬಹುದು. ಇದರಲ್ಲಿ ರಬಡಿ ಹಾಗೂ ಅಕ್ಕಿಯನ್ನು ಬಳಸಲಾಗುವ ಕಾರಣ ಜಬರ್ದಸ್ತ್ ಟೇಸ್ಟ್ ನೀಡುತ್ತದೆ.
6. ಭಾಂಗ್ ಪಕೋಡ: ಉತ್ತರ ಭಾರತದಲ್ಲಿ ವಿಶೇಷವಾಗಿ ಈ ವ್ಯಂಜನವನ್ನು ತಯಾರಿಸಲಾಗುತ್ತದೆ. ದಕ್ಷಿಣ ಭಾರತದ ಜನರು ವಿಶೇಷ ರೀತಿಯ ಭಜ್ಜಿ ತಯಾರಿಸಿ ಹೋಳಿ ಮಜವನ್ನು ಇಮ್ಮಡಿಗೊಳಿಸಬಹುದು.
7.ಭಾಂಗ್ ಶರಬತ್: ಇದನ್ನು ಕೂಡ ಉತ್ತರ ಭಾರತದಲ್ಲಿ ವಿಶೇಷವಾಗಿ ಹೋಳಿ ಹಬ್ಬದ ದಿನದಂದು ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಬಿಸಿಲಿನ ಬೇಗೆ ಜಾಸ್ತಿ ಇರುವುದರಿಂದ ನೀವು ವಿಶೇಷ ರೀತಿಯ ತಂಪು ಪಾನೀಯವನ್ನು ತಯಾರಿಸಿ ಅದರ ಮಜವನ್ನು ಸವಿಯಬಹುದು.
8. ಶಾಹೀ ಪನೀರ್: ಯಾವುದೇ ಪಾರ್ಟಿ ಅಥವಾ ಹಬ್ಬದ ಸಂದರ್ಭದಲ್ಲಿ ಸುಲಭವಾಗಿ ತಯಾರಿಸಬಹುದಾದ ವ್ಯಂಜನಗಳಲ್ಲಿ ಶಾಹೀಪನೀರ್ ಶಾಮೀಲಾಗಿದೆ. ಹೀಗಿರುವಾಗ ಹೋಳಿ ಹಬ್ಬದ ಮಜಾ ಇಮ್ಮಡಿಗೊಳಿಸಲು ನೀವೂ ಕೂಡ ಮಧ್ಯಾಹ್ನದ ಊಟದಲ್ಲಿ ಶಾಹೀಪನೀರ್ ಆನಂದಿಸಬಹುದು.
9. ಛೋಲಾ-ಭಟುರೆ: ಉತ್ತರ ಭಾರತದಲ್ಲಿ ಈ ವ್ಯಂಜನವನ್ನು ಹೋಳಿ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ತಯಾರಿಸಲಾಗುತ್ತದೆ. ದಕ್ಷಿಣ ಭಾರತಕ್ಕೆ ಬಂದರೆ ನೀವು ಕಡಲೆಕಾಳು ಉಸುಳಿ ಮತ್ತು ಪೂರಿ ತಯಾರಿಸಿ ಅದರ ಮಜವನ್ನು ಸವಿಯಬಹುದು.
10. ವೆಜ್ ಬಿರಿಯಾನಿ: ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತದ ವಿಶೇಷ ಖಾದ್ಯ ಪದಾರ್ಥಗಳಲ್ಲಿ ಬಿರಿಯಾನಿ ಒಂದು ಕಾಮನ್ ರೆಸಿಪಿಯಾಗಿ ಹೊರಹೊಮ್ಮಿದೆ. ಹೀಗಿರುವಾಗ ಹೋಳಿ ಹಬ್ಬದ ಪವಿತ್ರ ಸಂದರ್ಭದಲ್ಲಿ ನೀವೂ ಕೂಡ ನಿಮ್ಮ ನಿಮ್ಮ ಮನೆಗಳಲ್ಲಿ ವೆಜ್ ಬಿರಿಯಾನಿ ತಯಾರಿಸಿ ಅದರ ಮಜವನ್ನು ಸವಿಯಬಹುದು.