ಬಿಸಿಲ ಬೇಗೆಗೆ ತಂಪೆರೆಯರಲು ಈ ಬಾಟಲಿಗಳನ್ನು ಬಳಸಿ... ದಿನವಿಡೀ ಕೂಲ್‌ ಆಗಿರಿ!

Fri, 10 Jun 2022-4:28 pm,

ಈಗಲ್ ಪ್ರಿಮೊ ಸ್ಟೆಲ್ಲಾ ಸ್ಟೇನ್‌ಲೆಸ್ ಸ್ಟೀಲ್ ವ್ಯಾಕ್ಯೂಮ್ ವಾಟರ್ ಬಾಟಲ್: ಅಮೆಜಾನ್‌ನಲ್ಲಿ ಲಭ್ಯವಿರುವ ಈ 500 ಮಿಲಿ ವಾಟರ್ ಬಾಟಲ್, ಹಲವಾರು ಗಂಟೆಗಳ ಕಾಲ ನೀರನ್ನು ತಂಪಾಗಿರಿಸುತ್ತದೆ. ಇದನ್ನು ಹಲವು ಬಣ್ಣಗಳಲ್ಲಿ ಪಡೆಯಬಹುದು. ಅಮೆಜಾನ್‌ನಲ್ಲಿ ಇದರ ಬೆಲೆ ರೂ.830. ಈ ನೀರಿನ ಬಾಟಲಿಯನ್ನು ಶೇ.8ರಷ್ಟಯ ಕೂಪನ್ ರಿಯಾಯಿತಿಯೊಂದಿಗೆ ಖರೀದಿಸಬಹುದು.

ಸೆಲ್ಲೊ ಮೆಸ್ಟ್ರೋ ಸ್ಟೇನ್‌ಲೆಸ್ ಸ್ಟೀಲ್ ವ್ಯಾಕ್ಯೂಸ್ಟೀಲ್ ವಾಟರ್ ಫ್ಲಾಸ್ಕ್: ಸೆಲ್ಲೊ ಫ್ಲಾಸ್ಕ್ 1000ಎಂಎಲ್‌ ಸಾಮರ್ಥ್ಯದೊಂದಿಗೆ ಬರುತ್ತದೆ. ಇನ್ನು ಇದನ್ನು ಸೆಲ್ಲೋ ವೆಬ್‌ಸೈಟ್‌ನಿಂದ ರೂ.1,020 ಗೆ ಖರೀದಿಸಬಹುದು. ಬಹು ಬಣ್ಣಗಳು ಮತ್ತು ವಿಭಿನ್ನ ಸಾಮರ್ಥ್ಯಗಳಲ್ಲಿ ಲಭ್ಯವಿದೆ. ಇದು 24 ಗಂಟೆಗಳವರೆಗೆ ನೀರನ್ನು ತಂಪಾಗಿರಿಸುತ್ತದೆ.

ವಾರ್ಮಿಯೋ ಹೈಡ್ರಾ ಸ್ಟೇನ್‌ಲೆಸ್ ಸ್ಟೀಲ್ ವ್ಯಾಕ್ಯೂಮ್ ಬಾಟಲ್: ಈ ಬಾಟಲ್‌ 1500ಎಂಎಲ್‌ ನೀರನ್ನು ತುಂಬುವ ಸಾಮಾರ್ಥ್ಯ ಹೊಂದಿದೆ. ಈ ಬಾಟಲಿಯಲ್ಲಿ 24 ಗಂಟೆಗಳ ಕಾಲ ನೀರು ತಂಪಾಗಿರುತ್ತದೆ. ಡಬಲ್ ವಾಲ್‌ನೊಂದಿಗೆ ಬರುವ ಈ ಬಾಟಲಿಯನ್ನು ನೀವು ಅಮೆಜಾನ್‌ನಿಂದ 1,299 ರೂ.ಗೆ ಖರೀದಿಸಬಹುದು.  

ಬೊರೊಸಿಲ್ ಗೋಸ್ಪೋರ್ಟ್ ಬ್ಲ್ಯಾಕ್‌: ಪ್ರಸಿದ್ಧ ಕಂಪನಿ ಬೊರೊಸಿಲ್‌ನ ಈ ಬಾಟಲಿಯು ನೋಡಲು ತುಂಬಾ ಸುಂದರವಾಗಿದೆ. ಡಬಲ್ ವಾಲ್ ವ್ಯಾಕ್ಯೂಮ್ ಮತ್ತು ತಾಮ್ರದ ಲೇಪನವನ್ನು ಸಹ ನೀಡಲಾಗುತ್ತಿದೆ. 600ಎಂಎಲ್ ಸಾಮರ್ಥ್ಯದ ಈ ಬಾಟಲಿಯನ್ನು ಬೊರೊಸಿಲ್‌ನ ವೆಬ್ ಸೈಟ್‌ನಿಂದ ರೂ.829ಕ್ಕೆ ಖರೀದಿಸಬಹುದು. ಇದು 18 ಗಂಟೆಗಳವರೆಗೆ ನೀರನ್ನು ತಂಪಾಗಿರಿಸುತ್ತದೆ.

ಮಿಲ್ಟನ್ ಅಟ್ಲಾಂಟಿಸ್ 900 ಥರ್ಮೋಸ್ಟೀಲ್ ವಾಟರ್ ಬಾಟಲ್: ನೀವು ಈ ಮಿಲ್ಟನ್ ಬಾಟಲಿಯನ್ನು ಅಮೆಜಾನ್‌ನಿಂದ ರೂ 864 ಕ್ಕೆ ಖರೀದಿಸಬಹುದು. ಇದು 750 ಮಿಲಿ ಸಾಮರ್ಥ್ಯದೊಂದಿಗೆ ಬರುತ್ತದೆ. ಇದು ಸೋರಿಕೆ ನಿರೋಧಕವಾಗಿದೆ ಮತ್ತು ಹಲವಾರು ಗಂಟೆಗಳ ಕಾಲ ನೀರನ್ನು ತಂಪಾಗಿರಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link