Waterproof Smartphone: ಸ್ಟೈಲಿಶ್ ವಿನ್ಯಾಸದ ಜಲನಿರೋಧಕ ಸ್ಮಾರ್ಟ್‌ಫೋನ್, 16 ದಿನ ಬ್ಯಾಟರಿ ಬಾಳಿಕೆ

Wed, 20 Jul 2022-8:49 am,

AGM H5 Pro rugged ಸ್ಮಾರ್ಟ್‌ಫೋನ್ 109dBವರೆಗಿನ ಶಬ್ದ ಮಟ್ಟ ಹೊಂದಿರುವ ಸ್ಮಾರ್ಟ್‌ಫೋನ್‌ನಲ್ಲಿಯೇ ಅತಿಹೆಚ್ಚು ಧ್ವನಿವರ್ಧಕಗಳೊಂದಿಗೆ ಬರುತ್ತದೆ. ಇದರರ್ಥ ಹೊರಗೆ ಸಂಗೀತವನ್ನು ಆನಂದಿಸಲು ನೀವು ಪ್ರತ್ಯೇಕ ಸ್ಪೀಕರ್ ಒಯ್ಯುವ ಅಗತ್ಯವಿಲ್ಲ ಮತ್ತು ನೀವು ಈ ಫೋನ್ ಅನ್ನು ಭದ್ರತಾ ಸೈರನ್/SOS ಆಗಿಯೂ ಬಳಸಬಹುದು.

ಈ ಫೋನ್ ತೀವ್ರ ಮತ್ತು ಕಠಿಣ  ವಾತಾವರಣದಲ್ಲಿಯೂ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು IP68/IP69K/MIL-STD-810H ಪ್ರಮಾಣೀಕರಣದೊಂದಿಗೆ ಬರುತ್ತದೆ. ಇದು ಜಲನಿರೋಧಕ, ಧೂಳು ನಿರೋಧಕ ಮತ್ತು shockproof ಸಹ ಆಗಿದೆ.

AGM H5 Pro ಸ್ಮಾರ್ಟ್‍ಫೋನ್‍ MediaTek Helio G85 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 8GB RAM ಮತ್ತು 128GB ಸ್ಟೋರೇಜ್‍ನೊಂದಿಗೆ ಬರುತ್ತದೆ. Outdoor ಮತ್ತು Night Photographyಗಾಗಿ ನೀವು 48MP ಮುಖ್ಯ ಸೆನ್ಸಾರ್, 20MP Night Vision ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮರಾ ಸೆಟಪ್ ಇದೆ. ಕ್ಯಾಮೆರಾ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಇತರ ಸಾಮಾನ್ಯ ಫೋನ್‌ಗಳಿಗಿಂತ ಇದು ಭಿನ್ನವಾಗಿದೆ. AGM H5 Pro 20MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಇದು ನಿಮಗೆ ಉತ್ತಮ ಗುಣಮಟ್ಟದ ಸೆಲ್ಫಿಗಳನ್ನು ನೀಡುತ್ತದೆ.

AGM H5 Pro ಸ್ಮಾರ್ಟ್‍ಫೋನ್‍ 6.52-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಬೃಹತ್ 7000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಇದು ನಿಮಗೆ 400ಗಂಟೆಗಳ ಸ್ಟ್ಯಾಂಡ್‌ಬೈ, 150 ಗಂಟೆಗಳ ತಡೆರಹಿತ ಸಂಗೀತ ಮತ್ತು 32 ಗಂಟೆಗಳ ವಿಡಿಯೋ ವೀಕ್ಷಣೆ ಕೆಪ್ಯಾಸಿಟಿ ಹೊಂದಿದೆ. ಇತರ ವೈಶಿಷ್ಟ್ಯಗಳಲ್ಲಿ NFC ಬೆಂಬಲ, GPS, ಚಾರ್ಜಿಂಗ್ ಡಾಕ್, Android 12OS ಇತ್ಯಾದಿಗಳನ್ನು ಹೊಂದಿದೆ.

AGM H5 Pro ಆಗಸ್ಟ್‌ನಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಆದಾಗ್ಯೂ, ನೀವು ಅಧಿಕೃತ ವೆಬ್‌ಸೈಟ್‌ನಲ್ಲಿ  25,570 ರೂ.(319 ಅಮೆರಿಕನ್ ಡಾಲರ್)ರಿಯಾಯಿತಿ ದರದಲ್ಲಿ Pre-Order ಮಾಡಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link