Silver Ring: ಚಿನ್ನ ಅಲ್ಲ, ಬೆಳ್ಳಿ ಉಂಗುರ ಧಾರಣೆಯಿಂದ ಜಾತಕದಲ್ಲಿ ಗ್ರಹ ಬಲ, ಜೀವನದಲ್ಲಿ ಸುಖ-ಸಮೃದ್ಧಿ ವೃದ್ಧಿ

Fri, 19 Jul 2024-7:28 am,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐಷಾರಾಮಿ ಜೀವನಕಾರಕ ಶುಕ್ರನನ್ನು ಕೈ ಹೆಬ್ಬೆರಳಿಗೆ ಅಂಶವೆಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಅಶುಭ ಸ್ಥಾನದಲ್ಲಿದ್ದರೆ ಬೆಳ್ಳಿ ಉಂಗುರ ಧರಿಸುವುದರಿಂದ ಶುಕ್ರ ಬಲಗೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. 

ಬೆಳ್ಳಿ ಉಂಗುರವು ವ್ಯಕ್ತಿಯ ಅದೃಷ್ಟವನ್ನು ಬದಲಾಯಿಸುತ್ತದೆ. ಆದರೂ, ಕೈಗೆ ಬೆಳ್ಳಿ ಉಂಗುರ ಧಾರಣೆ ಮಾಡುವ ಮೊದಲು ಕೆಲವು ನಿಯಮಗಳನ್ನು ತೆಗೆದುಕೊಳ್ಳಬೇಕು. 

ಬೆಳ್ಳಿ ಉಂಗುರವನ್ನು ಯಾವಾಗಲೂ ಹೆಬ್ಬೆರಳಿನಲ್ಲಿ ಧರಿಸಬೇಕು. ಈ ಉಂಗುರವು ಕೀಲುಗಳಿಲ್ಲದೆ ಇರಬೇಕು. ಹುಡುಗಿಯರು ತಮ್ಮ ಎಡಗೈಯಲ್ಲಿ ಮತ್ತು ಹುಡುಗರು ತಮ್ಮ ಬಲಗೈಯಲ್ಲಿ ಬೆಳ್ಳಿ ಉಂಗುರ ಮಾಡುವುದು ಶ್ರೇಷ್ಠ. 

ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರ, ಶುಕ್ರ, ಶನಿ, ಸೂರ್ಯ, ರಾಹು ಮತ್ತು ಬುಧ ದೋಷವಿದ್ದಾಗ ಜ್ಯೋತಿಷ್ಯರನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಬೆಳ್ಳಿ ಉಂಗುರವನ್ನು ಧಾರಣೆ ಮಾಡಬಹುದು. 

ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ದುರ್ಬಲನಿದ್ದಾಗ ಬೆಳ್ಳಿ ಉಂಗುರ ಧಾರ್ನಎ ಮಾಡುವುದರಿಂದ ಜೀವನದಲ್ಲಿ ಸುಖ-ಸಂಪತ್ತು ವೃದ್ಧಿಯಾಗುತ್ತದೆ. ಸೌಕರ್ಯಗಳು ಹೆಚ್ಚಾಗುತ್ತವೆ. 

ಕೈಯಲ್ಲಿ ಬೆಳ್ಳಿ ಉಂಗುರ ಧರಿಸುವುದರಿಂದ ಬುಧ ದೋಷವೂ ನಿವಾರಣೆಯಾಗುತ್ತದೆ. ಇದರಿಂದ ವ್ಯಕ್ತಿಯು ಉದ್ಯೋಗ ರಂಗದಲ್ಲಿ ಭಾರೀ ಯಶಸ್ಸನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link