ಮುತ್ತುಗಳನ್ನು ಧರಿಸಿದರೆ ಈ ರಾಶಿಗಳಿಗೆ ಅದೃಷ್ಟ, ಅಪಾರ ಸಂಪತ್ತಿನ ಒಡೆಯರಾಗುತ್ತೀರಿ!
ದುಂಡಗಿನ ಆಕಾರದ ಮುತ್ತುಗಳನ್ನು ಧರಿಸುವುದು ಹೆಚ್ಚು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಈ ಮುತ್ತು ಧರಿಸಿದವರನ್ನು ಪಂಡಿತರನ್ನಾಗಿ ಮಾಡುತ್ತದೆ. ಇದು ಧರಿಸುವವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಮುತ್ತಿನ ಆಕಾರವು ಒಂದು ಬದಿಯಲ್ಲಿ ಉಬ್ಬಿದ್ದು ಮತ್ತು ಇನ್ನೊಂದು ಬದಿಯಲ್ಲಿ ಚಪ್ಪಟೆಯಾಗಿದ್ದರೆ, ಅದು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಅದರ ಬಣ್ಣ ಆಕಾಶ ನೀಲಿ ಆಗಿದ್ದರಂತೂ ಇನ್ನೂ ಒಳ್ಳೆಯದು. ಈ ಮುತ್ತು ಧರಿಸಿದವರ ಸಂಪತ್ತು ವೃದ್ಧಿಯಾಗುತ್ತದೆ.
ಮುತ್ತು ಉದ್ದವಾಗಿದ್ದರೆ ಮತ್ತು ಉಂಗುರದ ಆಕಾರ ಅಥವಾ ಅರ್ಧಚಂದ್ರಾಕಾರ ಹೊಂದಿದ್ದರೆ, ಅದು ಧರಿಸಿದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುವುದು.
ಧನು ರಾಶಿ : ಮುತ್ತುಗಳನ್ನು ಧರಿಸುವುದು ಈ ರಾಶಿಯವರಿಗೆ ಒಳ್ಳೆಯದು. ಇದರಿಂದ ಭಾಗ್ಯದ ಬಾಗಿಲು ತೆರೆಯಲಿದೆ. ಅಪಾರ ಹಣ ಸಂಪತ್ತು ನಿಮ್ಮದಾಗುವುದು.
ತುಲಾ ರಾಶಿ : ಈ ಜನರು ಅದೃಷ್ಟಕ್ಕಾಗಿ ಮುತ್ತನ್ನು ಧರಿಸಬೇಕು. ಮುತ್ತಿನಿಂದ ಜೀವನದ ಎಲ್ಲ ಸಮಸ್ಯೆಗಳು ದೂರವಾಗುವವು.
ಸಿಂಹ ರಾಶಿ : ಈ ರಾಸಿಯ ಜನರು ಆರ್ಥಿಕ ಲಾಭಕ್ಕಾಗಿ ಮುತ್ತು ಧರಿಸಬೇಕು. ಜೀವನದಲ್ಲಿ ಸುಖ ಶಾಂತಿ ನೆಲೆಸುವುದು. ಧನಲಾಭ ಆಗುವುದು.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವೃಷಭ, ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಗೆ ಸೇರಿದವರು ಮುತ್ತುಗಳನ್ನು ಧರಿಸಬಾರದು.
ಬೆಳ್ಳಿಯ ಉಂಗುರದಲ್ಲಿ ಮುತ್ತುಗಳನ್ನು ಧರಿಸುವುದು ಮಂಗಳಕರ. ಶುಕ್ಲ ಪಕ್ಷದ ಸೋಮವಾರ ರಾತ್ರಿ ಚಿಕ್ಕ ಬೆರಳಿಗೆ ಮುತ್ತಿನ ಉಂಗುರ ಧರಿಸಬೇಕು.ಇದಲ್ಲದೇ ಹುಣ್ಣಿಮೆಯಂದು ಕೂಡ ಧರಿಸಬಹುದು.
(Disclaimer: ಇಲ್ಲಿ ನೀಡಲಾದ ಮಾಹಿತಿಯು ಊಹಾಪೋಹ, ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)