Karnataka Rain: ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಗುಡುಗು-ಮಿಂಚು ಸಹಿತ ಬಿರುಗಾಳಿ ಆರ್ಭಟ! ಇಲಾಖೆ ಮುನ್ಸೂಚನೆ
ರಾಜ್ಯದ ಹಲವೆಡೆ ಇನ್ನೂ 3 ದಿನಗಳ ಕಾಲ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಮಳೆಯಾಗಲಿರುವ ಜಿಲ್ಲಾವಾರು ವಿವರಗಳನ್ನು ಇಲ್ಲಿ ನೀಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನ ಮಳೆರಾಯ ಅಬ್ಬರಿದ್ದನು. ಇದೀಗ ಮತ್ತೆ ಕಾಲಿಟ್ಟಿದ್ದು, ಅನಾಹುತವನ್ನೇ ಸೃಷ್ಟಿಸಿದ್ದಾನೆ. ನಗರದಲ್ಲಿ ಇಂದು ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ.
ಕಳೆದ ದಿನ ಸಂಜೆ 4ರ ಸಮಯಕ್ಕೇ ಬೆಂಗಳೂರು ಕಗ್ಗತ್ತಲ ಕೂಪದಂತೆ ಕಾಣುತ್ತಿತ್ತು. ಮೋಡ ಕವಿದ ವಾತಾವರಣದಿಂದ ರಾಜ್ಯ ರಾಜಧಾನಿಯ ಜನರು ಭಯಗೊಂಡಿದ್ದು ಮಾತ್ರ ಸುಳ್ಳಲ್ಲ
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ 3 ದಿನಗಳ ಕಾಲ ಮಳೆ ಸುರಿಯಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಮಳೆ ಬಿದ್ದರೂ ಸಹ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ. ಇಂದಿನಿಂದ (ಮೇ 22) ಮಳೆಯ ತೀವ್ರತೆ ಹೆಚ್ಚಲಿದ್ದು, ಮೇ 23ರ ವೇಳೆಗೆ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್’ಗೆ ಇಳಿಯುವ ಸಾಧ್ಯತೆಯಿದೆ.