Weight Loss: ಈ ಸಮಯದಲ್ಲಿ ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಸೇವಿಸಿದರೆ ಬೆಣ್ಣೆಯಂತೆ ಕರಗುತ್ತೆ ಹೊಟ್ಟೆ

Tue, 05 Mar 2024-1:09 pm,

ಪ್ರಸ್ತುತ ಕಾಲಮಾನದಲ್ಲಿ ಬಹುತೇಕ ಜನರಿಗೆ ತೂಕ ಹೆಚ್ಚಳ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ತೂಕ ಇಳಿಕೆಗಾಗಿ ಆಹಾರ ನಿಯಂತ್ರಣದಿಂದ ಹಿಡಿದು ಜಿಮ್, ವ್ಯಾಯಾಮದವರೆಗೆ ಎಷ್ಟೇ ಪ್ರಯತ್ನಿಸಿದರೂ ತೂಕ ಕಡಿಮೆಯಾಗುವುದೇ ಇಲ್ಲ ಎಂದು ಕೆಲವರು ದೂರುತ್ತಾರೆ. 

ಆರೋಗ್ಯ ತಜ್ಞರ ಪ್ರಕಾರ, ಕೇವಲ ಆರೋಗ್ಯಕರ ಆಹಾರದ ಸೇವನೆಯಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ. ಫಿಟ್ ಆಗಿರಲು ನಿತ್ಯ ಸರಿಯಾದ ಸಮಯದಲ್ಲಿ  ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಸೇವಿಸುವುದು ಕೂಡ ಅವಶ್ಯಕ.  

ಭಾರತದ ಖ್ಯಾತ ಡಯೆಟಿಷಿಯನ್  ಆಯುಷಿ ಯಾದವ್ ಅವರ ಪ್ರಕಾರ, ನಿತ್ಯ ನಾವು ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಸಮಯವನ್ನು ಅನುಸರಿಸಬೇಕು. ಆಗಷ್ಟೇ, ನಾವು ಆರೋಗ್ಯಕರವಾಗಿ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು. 

ಆಯುಷಿ ಯಾದವ್ ಅವರ ಪ್ರಕಾರ, ಆಹಾರ ಸೇವಿಸಿದ ನಂತರ ನಿಮ್ಮ ದೇಹವು ಹೆಚ್ಚು ಕಾಲ ಸಕ್ರಿಯವಾಗಿದ್ದರೆ ಅದೌ ಕ್ಯಾಲೋರಿಗಳನ್ನು ಸುಡಲು ಸಹಕಾರಿ ಆಗಲಿದೆ. ಇಲ್ಲದಿದ್ದರೆ, ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ನಮ್ಮ ಸೊಂಟ ಮತ್ತು ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಹಾಗಾಗಿಯೇ, ಆಹಾರ ಸೇವನೆಯ ಜೊತೆಗೆ ನಾವು ತಿನ್ನುವ ಮತ್ತು ಮಲಗುವ ಸಮಯದ ಬಗ್ಗೆ ಹೆಚ್ಚು ಗಮನವಹಿಸುವುದು ಮುಖ್ಯ. 

ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೇಹವು ಮಲಗುವ ಮೊದಲು ಮೆಲಟೋನಿನ್ ಅನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಹಾಗಾಗಿ, ನಾವು ಆಹಾರವನ್ನು ಸೇವಿಸಿದ ತಕ್ಷಣ ಮಲಗುವುದರಿಂದ ಸ್ವಯಂಚಾಲಿತವಾಗಿ ದೇಹದಲ್ಲಿ ಬೊಜ್ಜು ಸಂಗ್ರಹವಾಗುತ್ತದೆ. 

ಅಧ್ಯಯನಗಳ ಪ್ರಕಾರ , ಬೆಳಗಿನ ಉಪಹಾರವನ್ನು ಬೆಳಿಗ್ಗೆ 7:00 ಕ್ಕೆ, ಮಧ್ಯಾಹ್ನದ ಭೋಜನವನ್ನು ಮಧ್ಯಾಹ್ನ 12:30 ಕ್ಕೆ ಮತ್ತು ರಾತ್ರಿ ಊಟವನ್ನು ಸಂಜೆ 7:00ಗಂಟೆಗೆ ಪೂರ್ಣಗೊಳಿಸುವುದು ಒಳ್ಳೆಯದು. (ಸಮಯದಲ್ಲಿ 15-20) ನಿಮಿಷ ವಿಳಂಬವಾದರೆ ಯಾವುದೇ ಅಡ್ಡಿಯಿಲ್ಲ. ಆದಾಗ್ಯೂ, ಯಾವುದೇ ಸಮಯದಲ್ಲಿ ನೀವು ಆಹಾರ ಸೇವಿಸಿದ ಕನಿಷ್ಠ 2 ಗಂಟೆಗಳ ಬಳಿಕ ನಿದ್ರೆ ಮಾಡುವುದು ಒಳ್ಳೆಯದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link