Weight Loss Routine: ಬೆಲ್ಲಿ ಫ್ಯಾಟ್ ಕರಗಿಸಲು ಸಂಜೆ ವೇಳೆ ಈ ಅಭ್ಯಾಸ ರೂಢಿಸಿಕೊಳ್ಳಿ
ಎಷ್ಟು ಕಷ್ಟ ಪಟ್ಟರೂ , ಕಠಿಣ ಆಹಾರ ಕ್ರಮ ಅನುಸರಿಸಿದರೂ ತೂಕ ಕಡಿಮೆಯೇ ಆಗುತ್ತಿಲ್ಲ ಎಂದು ಯೋಚಿಸುತ್ತಿದ್ದೀರಾ? ನೀವು ಬೇಸಿಗೆಯಲ್ಲಿ ಸಂಜೆ ವೇಳೆ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಸಂಜೆ ವೇಳೆ ಯಾವ ಅಭ್ಯಾಸಗಳಿಂದ ತೂಕ ಇಳಿಕೆಯಾಗುತ್ತದೆ. ಹೊಟ್ಟೆ ಸುತ್ತಲಿನ ಕೊಬ್ಬನ್ನು, ಬೆಲ್ಲಿ ಫ್ಯಾಟ್ ಅನ್ನು ಕರಗಿಸಲು ಸಂಜೆ ಹೊತ್ತು ಏನು ಮಾಡಬೇಕು ಎಂದು ತಿಳಿಯೋಣ...
ಸಂಜೆ ವೇಳೆ ನೀವು ಸ್ನಾಕ್ಸ್ ತಿನ್ನುವ ಅಭ್ಯಾಸ ಹೊಂದಿದ್ದರೇ ಇಂದೇ ಇದಕ್ಕೆ ಕಡಿವಾಣ ಹಾಕಿ. ಒಂದೊಮ್ಮೆ ನಿಮಗೆ ಹಸಿವಾಗುತ್ತಿದ್ದರೆ ಒಂದೆರಡು ತುಂಡು ಹಣ್ಣು/ತರಕಾರಿ ಅಥವಾ ಒಂದೆರಡು ಡೇಟ್ಸ್ ಅನ್ನು ತಿನ್ನಬಹುದು.
ದೈನಂದಿನ ಕೆಲಸದ ಒತ್ತಡದ ನಡುವೆ ವಾಕ್/ವ್ಯಾಯಾಮ ಮಾಡುವುದನ್ನು ಮರೆಯಬಾರದು. ಸಂಜೆ ಕನಿಷ್ಠ ಅರ್ಧಗಂಟೆಯಾದರೂ ವಾಕ್ ಮಾಡುವುದು, ಲಘು ವ್ಯಾಯಾಮ ಮಾಡುವುದರಿಂದ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು.
ಸಂಜೆ ವೇಳೆ ತಂಪಾದ ಗಾಳಿಯಲ್ಲಿ 10-15 ನಿಮಿಷಗಳ ಧ್ಯಾನ ಮಾಡುವುದರಿಂದ ಇದು ಮನಸ್ಸನ್ನು ಶಾಂತಗೊಳಿಸುವುದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿ ಆಗಿದೆ. ಕೆಲವರು ಒತ್ತಡದಿಂದಾಗಿಯೂ ದಪ್ಪಗಾಗುತ್ತಾರೆ. ಅಂತಹವರಿಗೆ ಈ ಅಭ್ಯಾಸ ತುಂಬಾ ಪ್ರಯೋಜನಕಾರಿ ಆಗಿದೆ.
ಸಂಜೆ ವೇಳೆ ಚಾಟ್ಸ್ ಸೇವಿಸುವುದಕ್ಕಿಂತ ಆರೋಗ್ಯಕರ ಪೌಷ್ಟಿಕ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸುವುದನ್ನು ಪರಿಗಣಿಸಿ. ಸಂಸ್ಕರಿಸಿದ ಅಥವಾ ತ್ವರಿತ ಆಹಾರ ಆಯ್ಕೆಗಳ ಮೇಲೆ ಅವಲಂಬನೆಯನ್ನು ತಪ್ಪಿಸಿ. ಇದೂ ಕೂಡ ನಿಮ್ಮ ತೂಕದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಊಟ ಮಾಡುವಾಗ ನೀವು ಏನು ತಿನ್ನುತ್ತೀರಿ ಎಂಬುದನ್ನು ಆನಂದಿಸಿ ತಿನ್ನುವುದನ್ನು ರೂಢಿಸಿಕೊಳ್ಳಿ. ಈ ಸಮಯದಲ್ಲಿ ಯಾವುದೇ ಗ್ಯಾಜೆಟ್ಸ್ ನೋಡುವುದನ್ನು ತಪ್ಪಿಸಿ.
ತೂಕ ಇಳಿಸಿಕೊಳ್ಳುವ ಭರದಲ್ಲಿ ತಿನ್ನುವುದನ್ನೇ ತಪ್ಪಿಸಬೇಡಿ. ಬದಲಿಗೆ ಸಂಜೆ 7ಗಂಟೆಗೆ ರಾತ್ರಿ ಭೋಜನವನ್ನು ಮುಗಿಸಿ. ಸಾಧ್ಯವಾದಷ್ಟು ಸಂಜೆ 7ಗಂಟೆ ನಂತರ ಏನನ್ನೂ ತಿನ್ನದೇ ಇರುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಮಹತ್ವದ ಪರಿಣಾಮ ಬೀರುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.