ತೂಕ ಇಳಿಕೆಯಿಂದ ಬಿಪಿ ಕಂಟ್ರೋಲ್ ಮಾಡುವವರೆಗೂ ಆರೋಗ್ಯಕ್ಕೆ ವರದಾನವಿದ್ದಂತೆ, ಮಜ್ಜಿಗೆ...
ಊಟವಾದ ನಂತರ ಮಜ್ಜಿಗೆ ಕುಡಿದರೆ ಆಹಾರ ಪೂರ್ಣ ಎಂಬಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲ, ಆರೋಗ್ಯದ ಪ್ರಯೋಜನಗಳಿಗಾಗಿಯೂ ಊಟದ ಬಳಿಕ ಮಜ್ಜಿಗೆಯನ್ನು ಕುಡಿಯಲೇಬೇಕು ಎನ್ನಲಾಗುತ್ತದೆ.
ಮಜ್ಜಿಗೆಯಲ್ಲಿ ಪ್ರೋಬಯೊಟಿಕ್ ಗಳು ಸಮೃದ್ಧವಾಗಿರುವುದರಿಂದ ಇದು ಕರುಳಿನ ಬ್ಯಾಕ್ಟೀರಿಯಾ ಬೆಳವಣಿಗೆ ಉತ್ತೇಜಿಸಿ ನೈಸರ್ಗಿಕ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ.
ಮಜ್ಜಿಗೆಯು ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಅನ್ನು ಪೂರೈಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಕಡಿದ ಮಜ್ಜಿಗೆಯಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ಇದು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಲಾಭದಾಯಕವಾಗಿದೆ.
ಭೋಜನದ ಬಳಿಕ ಕುಡಿಯುವುದರಿಂದ ಇದು ದೇಹದಿಂದ ಬೇಡದ ಹಾನಿಕಾರಕ ವಸ್ತುಗಳನ್ನು ಹೊರಹಾಕಿ ದೇಹವನ್ನು ನಿರ್ವಿಷಗಳಿಸಲು ಸಹಕಾರಿ ಆಗಲಿದೆ.
ಮಜ್ಜಿಗೆಯಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾದ ಜೈವಿಕ ಸಕ್ರಿಯ ಪ್ರೊಟೀನ್ ಗಳಿರುವುದರಿಂದ ಇದು ಬಿಪಿ ಸಮಸ್ಯೆ ಇರುವವರಿಗೆ ವರದಾನಕ್ಕಿಂತ ಕಡಿಮೆಯಿಲ್ಲ.
ಭೋಜನದ ಬಳಿಕ ಮಜ್ಜಿಗೆ ಕುಡಿಯುವುದರಿಂದ ಗ್ಯಾಸ್ಟ್ರಿಕ್, ಅಸಿಡಿಟಿಯಂತಹ ಆಮ್ಲೀಯತೆ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.