India tour of West Indies 2023: ಚೇತೇಶ್ವರ ಪೂಜಾರ ಬದಲಿಗೆ ಟಾಪ್ 5 ಆಟಗಾರರು

Sun, 25 Jun 2023-2:57 pm,

21ರ ಹರೆಯದ ಯಶಸ್ವಿ ಜೈಸ್ವಾಲ್ ಟೆಸ್ಟ್ ಮಾದರಿಯಲ್ಲಿ ಪೂಜಾರ ಸ್ಥಾನ ತುಂಬಬಲ್ಲ ಸೂಕ್ತ ಆಟಗಾರ. 2023ರ ಐಪಿಎಲ್ ಟೂರ್ನಿಯಲ್ಲಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸ್ಟ್ಯಾಂಡ್‌ಬೈ ಆಟಗಾರನಾಗಿ ಜೈಸ್ವಾಲ್ ಭಾರತದ ತಂಡದೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು.

ರುತುರಾಜ್ ಗಾಯಕವಾಡ ಕೂಡ ಪೂಜಾರ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ. 26 ವರ್ಷ ವಯಸ್ಸಿನ ರುತುರಾಜ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ODI ಕ್ಯಾಪ್ ತೊಟ್ಟಿದ್ದರು. ದೇಶೀಯ ಮಟ್ಟದಲ್ಲಿ 28 ಪ್ರಥಮ ದರ್ಜೆ ಪಂದ್ಯಗಳಲ್ಲಿ 6 ಶತಕ ಗಳಿಸಿರುವ ಅವರು 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರ.

ಅಜಿಂಕ್ಯ ರಹಾನೆ ಇತ್ತೀಚಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಎರಡೂ ಇನ್ನಿಂಗ್ಸ್‍ಗಳಲ್ಲಿ ಕ್ರಮವಾಗಿ 89 ಮತ್ತು 46 ರನ್ ಗಳಿಸುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇವರು ಸಹ ಪೂಜಾರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರನಾಗಿದ್ದಾರೆ.

ಶುಭಮನ್ ಗಿಲ್ ಪ್ರತಿಭೆಯ ಬಗ್ಗೆ ಯಾವುದೇ ರೀತಿಯ ಸಂದೇಹವಿಲ್ಲ. ಈ ಕ್ಲಾಸಿ ಬಲಗೈ ಆಟಗಾರ 16 ಟೆಸ್ಟ್‌ಗಳಲ್ಲಿ 2 ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. 32.89 ಸರಾಸರಿಯಲ್ಲಿ ರನ್ ಗಳಿಸಿರುವ ಅವರು ಟೆಸ್ಟ್ ಮಟ್ಟದಲ್ಲಿ ಆರಂಭಿಕರಾಗಿ ಪ್ರತಿಭೆ ತೋರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.  

2016ರಲ್ಲಿ ನಾಯಕರಾಗಿದ್ದಾಗ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ನಂ.3ರ ಕ್ರಮಾಂಕದಲ್ಲಿ ಆಡಿದ್ದರು. ಇವರು ಕೂಡ ಇದೀಗ ಪೂಜಾರ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಆಟಗಾರರಾಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link