Whale Vomit: ವಜ್ರ-ಬಂಗಾರದಷ್ಟೇ ಬೆಲೆಬಾಳುವ ಈ ತಿಮಿಂಗಲ ವಾಂತಿಗೆ ಕೋಟಿಗಟ್ಟಲೇ ಬೆಲೆ ಏಕೆ?
ತಿಮಿಂಗಿಲವು ಭೂಮಿಯ ಮೇಲಿನ ಅದ್ಭುತ ಜೀವಿಯಾಗಿದೆ. ಇದನ್ನು ತೇಲುವ ಚಿನ್ನ ಎಂತಲೂ ಕರೆಯಲಾಗುತ್ತದೆ. ಇದರ ವಾಂತಿ ತುಂಬಾ ದುಬಾರಿಯಾಗಿದೆ. ಇದಕ್ಕೆ ಕಾರಣವಿದೆ.
ಅಂಬರ್ಗ್ರಿಸ್ ಅಥವಾ ವಾಂತಿ ಇದು ತಿಮಿಂಗಿಲದ ಕರುಳಿನಿಂದ ಹೊರಬರುವ ತ್ಯಾಜ್ಯ ವಸ್ತು. ತಿಮಿಂಗಿಲವು ಸಮುದ್ರದಲ್ಲಿ ಅನೇಕ ರೀತಿಯ ವಸ್ತುಗಳನ್ನು ತಿನ್ನುತ್ತದೆ. ಅವುಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದಾಗ ವಾಂತಿಯ ರೂಪದಲ್ಲಿ ಹೊರಹಾಕುತ್ತದೆ.
ತಿಮಿಂಗಿಲದ ವಾಂತಿ ಕಪ್ಪು ಅಥವಾ ಬೂದು ಬಣ್ಣವನ್ನು ಹೊಂದಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಇದು ಮೇಣದಿಂದ ಮಾಡಿದ ಕಲ್ಲಿನಂತಹ ವಸ್ತುವಾಗಿದೆ. ಜೀರ್ಣಕ್ರಿಯೆಯಿಂದ ರೂಪುಗೊಂಡ ಅಂಬರ್ಗ್ರಿಸ್ ತಿಮಿಂಗಿಲದ ಕರುಳಿನಿಂದ ಹೊರಬರುತ್ತದೆ. ಇದರ ದುರ್ವಾಸನೆಯು ತುಂಬಾ ಪ್ರಬಲವಾಗಿರುತ್ತದೆ.
ತಿಮಿಂಗಿಲದ ಈ ವಾಂತಿಯನ್ನು ಅನೇಕ ರೀತಿ ಬಳಸಲಾಗುತ್ತದೆ. ವಾಸ್ತವವಾಗಿ ಬಹುರಾಷ್ಟ್ರೀಯ ಕಂಪನಿಗಳು ಸುಗಂಧ ದ್ರವ್ಯ ತಯಾರಿಸಲು ಇದನ್ನು ಬಳಕೆ ಮಾಡಲಾಗುತ್ತದೆ. ಇದು ನಿಮ್ಮ ದೇಹಕ್ಕೆ ಸುವಾಸನೆ ನೀಡುವ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.
ತಿಮಿಂಗಲ ವಾಂತಿಯಿಂದ ಸುಗಂಧ ದ್ರವ್ಯವು ದೀರ್ಘಕಾಲದವರೆಗೆ ಇರುತ್ತದೆ. ಈ ಕಾರಣದಿಂದ ಕಂಪನಿಗಳು ಭಾರೀ ಮೊತ್ತ ನೀಡಿ ಇದನ್ನು ಖರೀದಿಸುತ್ತವೆ. ಇದನ್ನು ಔಷಧವಾಗಿಯೂ ಬಳಸುತ್ತಾರೆ.
ಅಷ್ಟೇ ಅಲ್ಲ ಸೆಕ್ಸ್‌ಗೆ ಸಂಬಂಧಿಸಿದ ಸಮಸ್ಯೆಗಳ ಚಿಕಿತ್ಸೆಯಲ್ಲಿ ತಿಮಿಂಗಲ ವಾಂತಿಯು ಉಪಯುಕ್ತವಾಗಿದೆ. ಇದೇ ಕಾರಣಕ್ಕೆ ಇದರ ಬೆಲೆ ಕೋಟಿ ಲೆಕ್ಕದಲ್ಲಿದೆ.