ಮೊದಲ ರಾತ್ರಿ ವಧು-ವರನ ಕೊಠಡಿಯಲ್ಲಿ ಹಾಲು-ಹಣ್ಣು ಏಕೆ ಇಟ್ಟಿರುತ್ತಾರೆ ಗೊತ್ತೆ..? ನೀವು ಅಂದುಕೊಂಡಿದ್ದಲ್ಲ..
ಪ್ರಾಚೀನ ಕಾಲದಿಂದಲೂ, ನಮ್ಮ ಪೂರ್ವಜರು ಅನೇಕ ವಿಷಯಗಳ ಕುರಿತು ನಮಗೆ ತಿಳಿಸಿಕೊಂಡು ಬಂದಿದ್ದಾರೆ.. ಇಂದು ನಾವು ಅವುಗಳನ್ನು ಸಾಂಪ್ರದಾಯಿಕವಾಗಿ ಅನುಸರಿಸುತ್ತೇವೆ. ಆದರೆ ಅನೇಕ ವಿಷಯಗಳ ಹಿಂದಿನ ಸತ್ಯ ನಮಗೆ ತಿಳಿದಿಲ್ಲ. ಉದಾಹರಣೆಗೆ, ಮಹಿಳೆಯರು ಸಂಜೆ ತಮ್ಮ ತಲೆಯನ್ನು ಮುಚ್ಚಿಕೊಳ್ಳಬಾರದು ಎಂಬ ಇತ್ಯಾದಿ.. ಹೇಳಿಕೆಗಳು..
ಏಕೆಂದರೆ ಆ ಸಮಯದಲ್ಲಿ ಹೆಚ್ಚಿನವರ ಮನೆಯಲ್ಲಿ ವಿದ್ಯುತ್ ಇದ್ದಿಲ್ಲ. ಈ ವೇಳೆ ಅಡುಗೆ ಮಾಡಲಾಗುತ್ತದೆ.. ಆಗ ತಲೆಯನ್ನು ಬಾಚಿಕೊಂಡರೆ, ಕೂದಲು ಅನ್ನದಲ್ಲಿ ಬೀಳಬಹುದು ಎಂಬ ಮುಂಜಾಗೃತೆ.. ಇದನ್ನು ತಪ್ಪಿಸಲು ಸಂಜೆ ತಲೆ ಚಚ್ಚಿಕೊಳ್ಳಬೇಡಿ ಎನ್ನುತ್ತಿದ್ದರು ಅಷ್ಟೇ.. ಇದೇ ರೀತಿ ನಮ್ಮಲ್ಲಿ ಅನೇಕ ವಿಚಾರಗಳಿವೆ..
ನಾವು ಅನುಸರಿಸುವ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ಒಂದು ಸತ್ಯವಿದೆ. ಮದುವೆಯಲ್ಲೂ ಇಂತಹ ಹಲವು ಸಂಗತಿಗಳನ್ನು ಕಾಣಬಹುದು. ಪ್ರತಿಯೊಂದು ಧರ್ಮದ ಮದುವೆ ಪದ್ದತಿ ವಿಭಿನ್ನವಾಗಿರುತ್ತದೆ. ಆದರೆ ಮೊದಲ ರಾತ್ರಿ ವಿಚಾರ ಬಂದಾಗ ವಧು-ವರನ ಕೊಠಡಿಯಲ್ಲಿ ಎಲ್ಲಾ ಧರ್ಮದವರೂ ಹಾಲು ಹಣ್ಣು ಇಡುವುದು ಸಾಮಾನ್ಯ ಆಚರಣೆ.
ಈ ಆಚರಣೆಯನ್ನು ಯಾವುದೇ ಧರ್ಮ ಜಾತಿ ಭೇದವಿಲ್ಲದೆ ಎಲ್ಲರೂ ಆಚರಿಸುತ್ತಾರೆ.. ಹನಿಮೂನ್ ದಿನ ನವ ದಂಪತಿಗೆ ಹಾಲು ಹಣ್ಣು ಏಕೆ ಕೊಡುತ್ತಾರೆ ಎಂದು ಹಲವರಿಗೆ ತಿಳಿದಿಲ್ಲ. ಮದುವೆಯ ನಂತರ, ವಧು ತನ್ನ ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗುವುದು ಸಂಪ್ರದಾಯ. ಈ ವೇಳೆ ಮೊದಲ ದಿನವೇ ಅವಳಿಗೆ ಪತಿ ಮನೆ ಹೊಸದು. ಹೀಗಾಗಿ ರಾತ್ರಿ ವೇಳೆ ಹೊಟ್ಟೆ ಹಸಿದರೆ ಆಹಾರಕ್ಕಾಗಿ ಹುಡುಕಾಡಬಾರದು ಅಂತ ಹಣ್ಣು ಹಂಪಲು ಇಡಲಾಗುತ್ತದೆ..
ಪೂರ್ವಜರು ಮಾಡುವ ಸಂಪ್ರದಾಯಗಳ ಹಿಂದೆ ಏನಾದರೂ ಒಂದು ಕಾರಣ ಇದ್ದೇ ಇರುತ್ತದೆ. ಕಾರಣವಿಲ್ಲದೆ ಅವರು ಏನನ್ನೂ ಮಾಡುವುದಿಲ್ಲ. ಅದೇ ರೀತಿ ಮದುವೆಯಾದ ನಂತರ ವಧು-ವರರಿಗೆ ಹಾಲು, ಹಣ್ಣು ನೀಡಲಾಗುತ್ತದೆ. ಒಂದು ವೇಳೆ ನಿಮಗೆ ಹೆಚ್ಚಿನ ಮಾಹಿತಿ ಗೊತ್ತಿದ್ದರೆ ಕಾಮೆಂಟ್ ಮಾಡಿ..