11ನೇ ಸೀಸನ್ ನಡೀತಿದೆ... ಆದ್ರೆ ಬಿಗ್ ಬಾಸ್ ಮನೆಯಲ್ಲಿ ನಡೆದ ಮೊದಲ ಜಗಳ ಯಾವುದು ಗೊತ್ತಾ? ಯಾರ ಮಧ್ಯೆ ನಡೆದಿತ್ತು ನೆನಪಿದ್ಯಾ?
ಕನ್ನಡ ಬಿಗ್‌ಬಾಸ್ 10 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿ, ಸದ್ಯ 11ನೇ ಸೀಸನ್ ಅನ್ನು ಮುನ್ನಡೆಸುತ್ತಿದೆ.
ಅಂದಹಾಗೆ ನಾವಿಂದು ಈ ವರದಿಯಲ್ಲಿ, ಬಿಗ್ ಬಾಸ್ ಮನೆಯಲ್ಲಿ ನಡೆದ ಮೊದಲ ಜಗಳ ಯಾವುದು? ಯಾರ ಮಧ್ಯೆ ನಡೆದಿತ್ತು ಎಂಬ ವಿಚಾರದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
'ಬಿಗ್ ಬಾಸ್ ಕನ್ನಡ ಸೀಸನ್ 1' ಆರಂಭವಾಗಿದ್ದು 2013ರಲ್ಲಿ. ಅಂದು ಈ ಸೀಸನ್‌ನಲ್ಲಿ ಕನ್ನಡ ಪ್ರಖ್ಯಾತ ನಟ-ನಟಿಯರೂ ಸೇರಿದಂತೆ ಅನೇಕ ಪ್ರಭಾವಿಗಳು ಕಾಣಿಸಿಕೊಂಡಿದ್ದರು.
ಸಂಜನಾ ಗಲ್ರಾನಿ, ಶ್ವೇತಾ ಪಂಡಿತ್, ರಿಷಿ ಕುಮಾರ್ ಸ್ವಾಮೀಜಿ, ಜಯಲಕ್ಷ್ಮೀ , ಚಂದ್ರಿಕಾ, ತಿಲಕ್, ವಿಜಯ್ ರಾಘವೇಂದ್ರ, ಅರುಣ್ ಸಾಗರ್, ವಿನಾಯಕ್ ಜೋಶಿ, ರಿಷಿಕಾ ಸಿಂಗ್, ರೋಹನ್ ಗೌಡ, ನಿಖಿತಾ ತುಕ್ರಾಲ್, ಅನುಶ್ರೀ, ದಿವಂಗತಿ ನಿರೂಪಕಿ ಅಪರ್ಣಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಈ ಸೀಸನ್‌ನಲ್ಲಿ ವಿಜೇತರಾಗಿ ನಟ ವಿಜಯ ರಾಘವೇಂದ್ರ ಹೊರಹೊಮ್ಮಿದ್ದರೆ, ಅರುಣ್ ಸಾಗರ್ ರನ್ನರ್ ಅಪ್ ಆಗಿದ್ದರು.
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 1ರಲ್ಲಿ ವಿಜಯ ರಾಘವೇಂದ್ರ ಮತ್ತು ರಿಷಿಕಾ ಸಿಂಗ್ ನಡುವೆ ತೀವ್ರವಾಗಿಯೇ ಕಿತ್ತಾಟವಾಗಿತ್ತು, ಇದುವೇ ಬಿಗ್‌ಬಾಸ್‌ನಲ್ಲಿ ನಡೆದ ಮೊದಲ ಜಗಳ ಎಂದು ಹೇಳಲಾಗುತ್ತಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.