WhatsApp Privacy Policy: ಮೇ 15ರವರೆಗೆ ಗೌಪ್ಯತಾ ನೀತಿ ಒಪ್ಪಿಕೊಳ್ಳುವ ಷರತ್ತಿನಿಂದ ಹಿಂದಕ್ಕೆ ಸರಿದ ವಾಟ್ಸ್ ಆಪ್

Fri, 07 May 2021-9:39 pm,

1.ಕಳೆದ ಹಲವು ತಿಂಗಳಿನಿಂದ ವಾಟ್ಸ್ ಆಪ್ ತನ್ನ ಈ ಗೌಪ್ಯತಾ ನೀತಿಯ ಕಾರಣ ವಿವಾದಕ್ಕೆ ಸಿಲುಕಿತ್ತು. ತಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್‌ನ  ಸೇವೆ ಸ್ಥಗಿತಗೊಳಿಸಲಾಗುತ್ತಿದೆ ಮತ್ತು ತಮ್ಮ ಡೇಟಾ ಸುರಕ್ಷತೆಯ ಬಗ್ಗೆ ಬಹಳಷ್ಟು ಬಳಕೆದಾರರು ಚಿಂತಿತರಾಗಿದ್ದರು. ಇದರೊಂದಿಗೆ, ವಾಟ್ಸಾಪ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪಾಲಿಸಿಯನ್ನು ಇನ್ನೂ ಅನುಮೋದಿಸದ ಬಳಕೆದಾರರಿಗೆ ಕಂಪನಿಯು ಕೆಲವು ವಾರಗಳವರೆಗೆ ಜ್ಞಾಪನೆಗಳನ್ನು ಕಳುಹಿಸುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಲಾಗಿದೆ.

2.ಇದಕ್ಕೂ ಮೊದಲು ಕಂಪನಿಯು ತನ್ನ ಗೌಪ್ಯತೆ ನೀತಿಯಲ್ಲಿ ಮೊದಲ ಬಾರಿಗೆ ಬದಲಾವಣೆ ಮಾಡಿ, ಬಳಕೆದಾರರ ಡೇಟಾವನ್ನು ವಾಟ್ಸಾಪ್ ಒಡೆತನದ ಕಂಪನಿಯಾದ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಲಾಗುವುದು ಎಂದು ತಿಳಿಸಿತ್ತು. ಇದರೊಂದಿಗೆ, ಕಂಪನಿಯು ಪಾಲಿಸಿಯನ್ನು ಸ್ವೀಕರಿಸುವುದರ ಜೊತೆಗೆ ಕೆಲ ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತಿನ ಪ್ರಕಾರ ಬಳಕೆದಾರರು ನೀಡಿದ ಗಡುವಿನ ಒಳಗೆ ಒಂದು ವೇಳೆ ಪಾಲಸಿಯನ್ನು ಒಪ್ಪಿಕೊಳ್ಳದೆ ಹೋದಲ್ಲಿ ಅಂತಹ ಬಳಕೆದಾರರ ಖಾತೆಯನ್ನು ಸ್ಥಗಿತಗೊಳಿಸಲಾಗುವುದು ಎಂದಿತ್ತು. ಇದಾದ ಬಳಿಕ ಭಾರತದಲ್ಲಿ ಬಳಕೆದಾರರು ಹಾಗೂ ಸರ್ಕಾರ ವಾಟ್ಸ್ ಆಪ್ ನ ಈ ನೀತಿಗೆ ಭಾರಿ ಆಕ್ರೋಶ  ವ್ಯಕ್ತಪಡಿಸಿದ್ದರು.

3. ಇದಾದ ಬಳಿಕ ಯಾವುದೇ ಶುಲ್ಕವಿಲ್ಲದೆ ಸಂದೇಶ ಹಾಗೂ ಕರೆ ಸೇವೆ ಒದಗಿಸುತ್ತಿರುವ ಈ ಕಂಪನಿಯ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಸುದ್ದಿ ಸಂಸ್ಥೆ PTIಗೆ  ವಾಟ್ಸ್ ಆಪ್ ವಕ್ತಾರರೊಬ್ಬರು ಹಸ್ತಾಂತರಿಸಿರುವ ಹೇಳಿಕೆಯ ಪ್ರಕಾರ, ಹೊಸ ನೀತಿಗೆ ಸಂಬಂಧಿಸಿದ ಅಪ್ಡೇಟ್ ಅನ್ನು ಬಳಕೆದಾರರು ಸ್ವೀಕರಿಸದೆ ಹೋದರು ಕೂಡ ಮೇ 15ರ ಬಳಿಕ ಯಾರೊಬ್ಬರ ಖಾತೆಯನ್ನು ಡಿಲೀಟ್ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇ-ಮೇಲ್ ಮೂಲಕ ಕೇಳಲಾಗಿರುವ ಪ್ರಶ್ನೆಯೊಂದಕ್ಕೆ ಶುಕ್ರವಾರ ಉತ್ತರ ನೀಡಿರುವ ಅವರು, ಈ ಅಪ್ಡೇಟ್ ನಿಂದ ಮೇ 15ರ ಬಳಿಕವೂ ಕೂಡ ಯಾವುದೇ ಖಾತೆಯನ್ನು ಡಿಲೀಟ್ ಮಾಡಲಾಗುವುದಿಲ್ಲ ಹಾಗೂ ಭಾರತದಲ್ಲಿ ಯಾವುದೇ ಬಳಕೆದಾರರ ವಾಟ್ಸ್ ಆಪ್ ಸೇವೆ ಸ್ಥಗಿತಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

4.ಇದಕ್ಕೆ ಸಂಬಂಧಿಸಿದಂತೆ ಮುಂಬರುವ ಕೆಲ ವಾರಗಳಲ್ಲಿ ನಾವು ಬಳಕೆದಾರರಿಗೆ ಇನ್ನಷ್ಟು ಮಾಹಿತಿ ಒದಗಿಸಲಿದ್ದೇವೆ. Terms of service (WhatsApp Terms And Condition) ಅಪ್ಡೇಟ್ (WhatsApp Update) ಅನ್ನು ಕಳುಹಿಸಲಾಗಿರುವ ಬಹುತೇಕ ಬಳಕೆದಾರರು ಅದನ್ನು ಒಪ್ಪಿಕೊಂಡಿದ್ದಾರೆ. ಕೆಲ ಬಳಕೆದಾರರ ಬಳಿ ಇನ್ನೂ ಈ ಅಪ್ಡೇಟ್ ತಲುಪಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಕಂಪನಿ ಯಾವ ಕಾರಣಕ್ಕಾಗಿ ಈ ನಿಲುವನ್ನು ತೆಗೆದುಕೊಂಡಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಜೊತೆಗೆ ಷರತ್ತನ್ನು ಒಪ್ಪಿಕೊಂಡ ಬಳಕೆದಾರರ ಅಂಕಿ-ಅಂಶಗಳನ್ನು ಕೂಡ ಅವರು ಹಂಚಿಕೊಂಡಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link