WhatsAppನ ಈ ನಿಯಮಗಳನ್ನು ಎಂದಿಗೂ ಉಲ್ಲಂಘಿಸಬೇಡಿ, ಖಾತೆ ಸ್ಥಗಿತಗೊಳ್ಳುತ್ತದೆ

Sun, 27 Feb 2022-1:25 pm,

1. ಬೇರೆ ಬಳಕೆದಾರರನ್ನು ಅವಮಾನಿಸುವುದು (Whats App Latest News) - WhatsApp ಬಳಸುವಾಗ, ನಿಮ್ಮ ಸಂದೇಶಗಳು ಅಥವಾ ಕರೆಗಳ ಮೂಲಕ ನೀವು ಇತರ ಬಳಕೆದಾರರಿಗೆ ಕಿರುಕುಳ ನೀಡಿದರೆ ಅಥವಾ ಅವಮಾನಿಸಿದರೆ, ನಂತರ WhatsApp ನಿಮ್ಮ ಖಾತೆಯನ್ನು ಸ್ಥಗಿತಗೊಳಿಸುತ್ತದೆ. ಬಳಕೆದಾರರು ಈ ಕುರಿತು  WhatsApp ಗೆ ದೂರು ನೀಡಬಹುದು. WhatsApp ತನ್ನ ಸ್ವಯಂಚಾಲಿತ ವ್ಯವಸ್ಥೆಯಿಂದ ಕೆಟ್ಟ ನಡವಳಿಕೆ ಮತ್ತು ಅನುಚಿತ ವರ್ತನೆಯನ್ನು ಸಹ ಪತ್ತೆ ಮಾಡುತ್ತದೆ ಎಂದು ನಾವು ನಿಮಗೆ ಹೇಳೋಣ.

2. ಅಪಾಯಕಾರಿ ಕೋಡ್ ಅಥವಾ ವೈರಸ್ ಹರಡಬೇಡಿ (WhatsApp Latest Update) - WhatsApp ಹಲವು ಉತ್ತಮ ಗೌಪ್ಯತೆ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ, ವೈರಸ್ ಅಥವಾ ಅಪಾಯಕಾರಿ ಕೋಡ್ ಅನ್ನು ಹೊಂದಿರುವ ಫೈಲ್ ಅನ್ನು ಯಾವುದೇ ಬಳಕೆದಾರರು ಪ್ರಸಾರ ಮಾಡುವುದನ್ನು ಅಪ್ಲಿಕೇಶನ್ ತಡೆಯುತ್ತದೆ ಮತ್ತು ನಂತರ ಬಳಕೆದಾರರ ಖಾತೆಯನ್ನು ಸ್ಥಗಿತಗೊಳಿಸುತ್ತದೆ. 

3. ಬೇರೆ ಬಳಕೆದಾರರ ಬೇಹುಗಾರಿಕೆ ಬೇಡ (Latest WhatsApp News) - WhatsApp ತನ್ನ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿರಿಸಲು ವಿಶೇಷ ಗಮನ ಹರಿಸುತ್ತದೆ. ನೀವು ಬಳಕೆದಾರರ ಡೇಟಾ ಅಥವಾ ಮಾಹಿತಿಯನ್ನು ತಪ್ಪಾದ ರೀತಿಯಲ್ಲಿ ಸಂಗ್ರಹಿಸಲು ಅಥವಾ ಹಂಚಿಕೊಳ್ಳಲು ಪ್ರಯತ್ನಿಸಿದರೆ, ನಂತರ WhatsApp ನಿಮ್ಮ ಖಾತೆಯನ್ನು ನಿಷೇಧಿಸುತ್ತದೆ.

ಸುಳ್ ಸುದ್ದಿ ಹರಡಬೇಡಿ - ಇಂದಿನ ಕಾಲದಲ್ಲಿ, WhatsApp ಅನೇಕ ತಪ್ಪು ಮತ್ತು ಸುಳ್ಳು ಸಂಗತಿಗಳು ಮತ್ತು ಸುದ್ದಿಗಳ ಹರಡುವ ಭದ್ರಕೋಟೆಯಾಗಿದೆ. ಆದ್ದರಿಂದ, ಉದ್ದೇಶಪೂರ್ವಕವಾಗಿ ತಪ್ಪು ಮತ್ತು ಸುಳ್ಳು ಸುದ್ದಿಗಳನ್ನು ಹರಡುವುದು WhatsApp ಬಳಕೆಯ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಖಾತೆಯನ್ನು ನಿಷೇಧಿಸುವ ಎಲ್ಲಾ ಹಕ್ಕು WhatsApp ಗೆ ಇದೆ.

5. ಪದೇ ಪದೇ ಫೋನ್ ನಂಬರ್ ಬದಲಾಯಿಸಬೇಡಿ -ನೀವು WhatsApp ಬಳಕೆದಾರರಾಗಿದ್ದರೆ, ಅಪ್ಲಿಕೇಶನ್ ತನ್ನ ಎಲ್ಲಾ ಬಳಕೆದಾರರ ಫೋನ್ ಸಂಖ್ಯೆಯನ್ನು ಪರಿಶೀಲಿಸುತ್ತದೆ ಎಂಬುದು ನಿಮಗೆ ತಿಳಿದಿರಬೇಕು, ಆದ್ದರಿಂದ ಸಂಖ್ಯೆಯನ್ನು ಆಗಾಗ್ಗೆ ಬದಲಾಯಿಸುವುದರಿಂದ ಪರಿಶೀಲನೆ ಪ್ರಕ್ರಿಯೆಯಲ್ಲಿ ಅಡಚಣೆ ಎದುರಾಗುತ್ತದೆ ಮತ್ತು ನಿಮ್ಮ ಖಾತೆಯನ್ನು ಹ್ಯಾಕಿಂಗ್ ಅನುಮಾನದ ಆಧಾರದ ಮೇಲೆ ವಾಟ್ಸ್ ಆಪ್ ನಿಷೇಧಿಸುವ ಸಾಧ್ಯತೆ ಇದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link