ಫೋನ್ ಬದಲಾಯಿಸಿದರೂ ಕೂಡ ನಿಮ್ಮ ವಾಟ್ಸ್ ಆಪ್ ಚಾಟ್, ಫೋಟೋ ಹಾಗೂ ವಿಡಿಯೋಗಳು ಡಿಲೀಟ್ ಆಗಲ್ಲ, ಈ ವಿಧಾನ ಅನುಸರಿಸಿ

Sun, 22 May 2022-4:16 pm,

WhatsApp ಡೇಟಾವನ್ನು ಸುರಕ್ಷಿತವಾಗಿರಿಸಲು ಸಲಹೆ: ನಿಮ್ಮ WhatsApp ಚಾಟ್‌ಗಳು ಮತ್ತು ಮೀಡಿಯಾ ಫೈಲ್‌ಗಳನ್ನು ಖಾಯಂ ರೂಪದಲ್ಲಿ ಸುರಕ್ಷಿತವಾಗಿರಿಸಲು, ಅವುಗಳನ್ನು Google ಡ್ರೈವ್‌ನಲ್ಲಿ ಬ್ಯಾಕಪ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ, ಫೋನ್ ಬದಲಾಯಿಸಿದ ಸಂದರ್ಭಗಳಲ್ಲಿಯೂ ಕೂಡ ನೀವು ಚಾಟ್‌ಗಳನ್ನು ಮರಳಿ ಪಡೆದುಕೊಳ್ಳಬಹುದು.

WhatsApp ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ: : WhatsApp ಡೇಟಾವನ್ನು ಬ್ಯಾಕಪ್ ಮಾಡಲು, ಮೊದಲು ನಿಮ್ಮ ಫೋನ್‌ನಲ್ಲಿ WhatsApp ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ನಂತರ ಸೆಟ್ಟಿಂಗ್‌ಗಳಿಗೆ ಹೋಗಿ. ಇದರ ನಂತರ ನೀವು 'ಚಾಟ್ಸ್' ಆಯ್ಕೆಯನ್ನು ಗಮನಿಸುವಿರಿ, ಅದರ ಮೇಲೆ ಕ್ಲಿಕ್ ಮಾಡಿ.

ನೀವು ಈಗ ನಿಮ್ಮ WhatsApp ಡೇಟಾವನ್ನು ಬ್ಯಾಕಪ್ ಮಾಡಲು ಸಿದ್ಧರಾಗಿ: 'ಚಾಟ್‌ಗಳಲ್ಲಿ' ನೀವು 'Google ಡ್ರೈವ್‌ಗೆ ಬ್ಯಾಕಪ್' ಆಯ್ಕೆಯೊಂದಿಗೆ 'ಚಾಟ್ ಬ್ಯಾಕಪ್' ಆಯ್ಕೆಯನ್ನು ಗಮನಿಸುವಿರಿ. ಅಲ್ಲಿಗೆ ಹೋಗುವ ಮೂಲಕ, ನೀವು ನಿಮ್ಮ ಡೇಟಾವನ್ನು ಎಷ್ಟು ಬಾರಿ ಬ್ಯಾಕಪ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ದುಕೊಳ್ಳಬೇಕು. 

ಡೇಟಾವನ್ನು ಬ್ಯಾಕಪ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ನೀವು ಡೇಟಾ ಬ್ಯಾಕಪ್ ಮಾಡುವಾಗ, ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತಿರುವಿರಿ ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಒಂದು ನಿಶ್ಚಿತ ಕಾಲಾಂತರದಲ್ಲಿ WhatsApp ಡೇಟಾ ಅನ್ನು Google ಡ್ರೈವ್‌ನಲ್ಲಿ ಉಳಿಸಲಾಗುತ್ತದೆ. ಇದಲ್ಲದೆ, ಬ್ಯಾಕಪ್‌ ಮಾಡಿಕೊಳ್ಳಲು ಮೊಬೈಲ್ ಡೇಟಾ ಬದಲಿಗೆ ವೈಫೈ ಬಳಸಿದರೆ ಮತ್ತಷ್ಟು ಉತ್ತಮ.

WhatsApp ಡೇಟಾವನ್ನು ಬ್ಯಾಕಪ್ ಮಾಡಿ ಮತ್ತು ಸುರಕ್ಷಿತಗೊಳಿಸಿ: ನೀವು Google ಡ್ರೈವ್‌ಗೆ ಬ್ಯಾಕಪ್ ಮಾಡುವ ಡೇಟಾವನ್ನು ಡಬಲ್-ರಕ್ಷಿಸಲು, WhatsApp ನ ಸೆಟ್ಟಿಂಗ್‌ಗಳಿಗೆ ಹೋಗಿ, 'Chats' ನಲ್ಲಿ 'Chats ಬ್ಯಾಕಪ್' ಗೆ ಹೋಗಿ ಮತ್ತು 'End-to-end-encrypted backup' ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಯ್ಕೆಯನ್ನು ಸಕ್ರಿಯಗೊಳಿಸಿ, ನಂತರ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಪಾಸ್ವರ್ಡ್ ಅನ್ನು ರಚಿಸಿಕೊಳ್ಳಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link