ʼಅಂಥಹʼ ಕೆಲಸ ಮಾಡಿ ಅಭಿಷೇಕ್ ಬಚ್ಚನ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಐಶ್ವರ್ಯ..! ಇಲ್ಲಿಂದಲೇ ಶುರುವಾಗಿದ್ದಾ ಬಚ್ಚನ್ ಕುಟುಂಬದಲ್ಲಿ ಮನಸ್ತಾಪ?!

Thu, 29 Aug 2024-5:55 pm,

ಮದುವೆಯ ನಂತರ ಐಶ್ವರ್ಯಾ ಬಿ-ಟೌನ್ ನಿಂದ ದೂರ ಸರಿದಿದ್ದಾರೋ? ಅಥವಾ ಬಿ-ಟೌನ್ ಅವರಿಂದ ದೂರ ಸರಿದಿದೆಯೇ? ಅದಕ್ಕೆ ಉತ್ತರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಒಂದು ಹಂತದಲ್ಲಿ ಅವರು ತನಗೆ ಬಂದ ದೊಡ್ಡ ಚಿತ್ರಗಳ ಆಫರ್‌ಗಳನ್ನು ತಿರಸ್ಕರಿಸಲು ಹಿಂಜರಿಯುತ್ತಾರೆ ಎಂಬುದು ಸ್ಪಷ್ಟವಾಗಿದೆ..  

 ಬಚ್ಚನ್ ಕುಟುಂಬದ ಸೊಸೆ ಆಗಿದ್ದರಿಂದ ಯಾವುದೇ ಇಂಟಿಮೇಟ್‌ ದೃಶ್ಯಗಳಲ್ಲಿ ನಟಿಸದಂತೆ ಐಶ್ವರ್ಯ ಅವರಿಗೆ ಹೇಳಲಾಗಿತ್ತು.. ಆದರೆ ಐಶ್ವರ್ಯಾ ಬಾಲಿವುಡ್‌ಗೆ ಮರಳಲು ಆ ರಿಸ್ಕ್ ತೆಗೆದುಕೊಳ್ಳಬೇಕಾಯಿತು.   

ಹೌದು ನಟಿ ಐಶ್ವರ್ಯ ಅವರಿಗೆ ಏ ದಿಲ್ ಹೈ ಮುಷ್ಕಿಲ್ ಸಿನಿಮಾದ ಆಫರ್‌ ಬಂದಾಗ ಅವರು ಬೇಡವೆನ್ನದೇ ಅದರಲ್ಲಿ ನಟಿಸಲು ನಿರ್ಧರಿಸಿದರು.. ಆದರೆ ಇದು ಬಚ್ಚನ್‌ ಕುಟುಂಬದ ಯಾರೋಬ್ಬರಿಗೂ ಇಷ್ಟವಿರಲಿಲ್ಲ..   

ವಾಸ್ತವವಾಗಿ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಹಲವು ರೋಮ್ಯಾಂಟಿಕ್‌ ಸೀನ್‌ಗಳು ಇದ್ದವು.. ಆದರೆ ಬಚ್ಚನ್‌ ಕುಟುಂಬದ ಆದೇಶವನ್ನು ತಿಳಿದಿದ್ದ ನಟಿ  ಐಶ್ವರ್ಯಾ, ಪತಿ ಅಭಿಷೇಕ್ ಬಚ್ಚನ್‌ಗೆ ಸಿನಿಮಾದ ಇಡೀ ಕಥೆಯನ್ನು ಹೇಳದೇ ಸಿನಿಮಾದಲ್ಲಿ ನಟಿಸಿದ್ದರಂತೆ..   

ಬಳಿಕ ಆ ಸಿನಿಮಾದ ಟ್ರೇಲರ್ ಹೊರಬಂದ ನಂತರ ಬಿರುಗಾಳಿಯಂತೆ ಐಶ್ವರ್ಯ ಅವರ ಬೋಲ್ಡ್‌ ಸೀನ್ ವೈರಲ್ ಆಗಿತ್ತು. ಅಂದಿನಿಂದ, ಕುಟುಂಬದಲ್ಲಿ ಪ್ರಕ್ಷುಬ್ಧತೆ ಪ್ರಾರಂಭವಾಯಿತು. ಐಶ್ವರ್ಯಾಳನ್ನು ಬಿಡುವ ನಿರ್ಧಾರವನ್ನು ಅಭಿಷೇಕ್ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಕೇಳಿಬಂದಿತ್ತು. ನಂತರ ಕುಟುಂಬದ ಬಗ್ಗೆ ಯೋಚಿಸಿ ಎಲ್ಲವನ್ನೂ ನಿಭಾಯಿಸಿದರು ಎನ್ನಲಾಗಿತ್ತು..   

ಇಷ್ಟೇ ಅಲ್ಲ ಅಂದಿನಿಂದಲೇ ಜಯಾ ಬಚ್ಚನ್ ಹಾಗೂ ಐಶ್ವರ್ಯ ಅವರ ಸಂಬಂಧವು ಹದಗೆಡಲು ಪ್ರಾರಂಭಿಸಿತು. ಆದರೆ ಆ ಕ್ಷಣದಲ್ಲಿ ಅಭಿಷೇಕ್ ಬಚ್ಚನ್ ಮೌನ ತಾಳಿದ್ದರು ಎನ್ನಲಾಗಿತ್ತು.. ಏಕೆಂದರೆ ಅವರು ಸಾರ್ವಜನಿಕವಾಗಿ ಎಂದಿಗೂ ಈ ವಿಚಾರವಾಗಿ ಮಾತನಾಡಿರಲಿಲ್ಲ..   

ಇನ್ನು ಮದುವೆ ಬಳಿಕ ಅಭಿಷೇಕ್‌ ಜೊತೆ ಸಿನಿಮಾ ಮಾಡಲು ಈಗ ನನ್ನಿಂದ ಸಾಧ್ಯವಿಲ್ಲ ಎಂದು ಐಶ್ವರ್ಯ ಹಲವು ಬಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.. ಅಭಿಷೇಕ್‌ ಐಶ್ವರ್ಯ ವಿಚ್ಛೇದನ ವದಂತಿ ಹರಡುತ್ತಿರುವುದರಿಂದ ನಟಿ ಮಾಡಿದ ಹಳೆಯ ಕಾಮೆಂಟ್‌ಗಳು ಈಗ ವೈರಲ್‌ ಆಗುತ್ತಿವೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link