Chandra Grahan 2021: ಎಲ್ಲಿ ಗೋಚರಿಸಲಿದೆ ಚಂದ್ರಗ್ರಹಣ : ತಿಳಿಯಿರಿ ಎಷ್ಟಿರಲಿದೆ ಪ್ರಭಾವ
ಹಿಂದೂ ಕ್ಯಾಲೆಂಡರ್ ಮತ್ತು ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2021 ರ ಮೊದಲ ಚಂದ್ರಗ್ರಹಣವು ಮೇ 26 ರ ಬುಧವಾರ ವೈಶಾಕ ಪೂರ್ಣಿಮಾ ದಿನದಂದು ಸಂಭವಿಸಲಿದೆ. ಭಾರತೀಯ ಸಮಯದ ಪ್ರಕಾರ ಚಂದ್ರ ಗ್ರಹಣವು ಮೇ 26 ರಂದು ಮಧ್ಯಾಹ್ನ 2.17 ಕ್ಕೆಗ್ರಹಣ ಆರಂಭವಾಗಲಿದ್ದು, ಸಂಜೆ 7.19 ಕ್ಕೆ ಗ್ರಹಣಕ್ಕ ಕೊನೆಯಾಗಲಿದೆ.
ಭಾರತದ ಸಮಯದ ಪ್ರಕಾರ, ಈ ಚಂದ್ರ ಗ್ರಹಣ ಹಗಲಿನಲ್ಲಿ ನಡೆಯುತ್ತದೆ. ಆದ್ದರಿಂದ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಚಂದ್ರ ಗ್ರಹಣವು ಇಡೀ ಭಾರತದಲ್ಲಿ ಗೋಚರವಾಗುವುದಿಲ್ಲ. ಹಾಗಾಗಿ ಈ ಗ್ರಹಣದ ಸೂತಕ ಕೂಡಾ ಇರುವುದಿಲ್ಲ. ದೇವಾಲಯದ ಬಾಗಿಲುಗಳನ್ನು ಗ್ರಹಣ ಕಾಲದಲ್ಲಿ ಮುಚ್ಚಲಾಗುವುದಿಲ್ಲ ಮತ್ತು ಶುಭ ಕಾರ್ಯಗಳು ಕೂಡಾ ಎಂದಿನಂತೆ ನಡೆಯುತ್ತವೆ.
ಮೇ 26 ರಂದು ಚಂದ್ರ ಗ್ರಹಣ ಜಪಾನ್, ಸಿಂಗಾಪುರ್, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಬರ್ಮಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಫಿಲಿಪೈನ್ಸ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರ, ಆಸ್ಟ್ರೇಲಿಯಾ ಮತ್ತು ಉತ್ತರ ಯುರೋಪಿನ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಮೇ 26 ರಂದು ಸಂಭವಿಸಲಿರುವ ವರ್ಷದ ಮೊದಲ ಚಂದ್ರಗ್ರಹಣವು ವೃಶ್ಚಿಕ ರಾಶಿಯಲ್ಲಿ ಘಟಿಸಲಿದೆ. ಹಾಗಾಗಿ ಈ ರಾಶಿಯವರ ಮೇಲೆ ಸ್ವಲ್ಪ ಮಟ್ಟಿನ ಪ್ರಭಾವ ಇರಲಿದೆ. ವೃಶ್ಚಿಕ ರಾಶಿಯವರು ಈ ಗ್ರಹಣ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ