ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲಿ ಮತ್ತು ಎಷ್ಟು ಬಾರಿ ಬಳಸಲಾಗಿದೆ ಹೀಗೆ ತಿಳಿದುಕೊಳ್ಳಿ
UIDAI ನ ಅಧಿಕೃತ ವೆಬ್‌ಸೈಟ್ https://resident.uidai.gov.in ನಲ್ಲಿ Aadhar Authentication History ಆಯ್ಕೆಯ ಮೂಲಕ, ನಿಮ್ಮ ಆಧಾರ್ ಕಾರ್ಡ್‌ನ ಕಳೆದ 6 ತಿಂಗಳ ಹಿಸ್ಟರಿಯನ್ನು ಮನೆಯಲ್ಲಿಯೇ ಕುಳಿತು ನೋಡಬಹುದು.
ಇದಕ್ಕಾಗಿ, ಮೊದಲು ನೀವು UIDAI uidai.gov.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ 'My Aadhar’ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಈಗ ಆಧಾರ್ ಸೇವಾ ವಿಭಾಗವು ತೆರೆಯುತ್ತದೆ. ಇದರಲ್ಲಿ ‘Aadhar Authentication History’ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ನೀಡಿರುವ ಕ್ಯಾಪ್ಚಾ ಇಮೇಜ್ ಭರ್ತಿ ಮಾಡಿ. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶದ ರೂಪದಲ್ಲಿ OTP ಬರುತ್ತದೆ.
OTP ಅನ್ನು ಭರ್ತಿ ಮಾಡಿದ ನಂತರ, ನೀವು 2 ಆಯ್ಕೆಗಳನ್ನು ಪಡೆಯುತ್ತೀರಿ. ಇದರಲ್ಲಿ, ಒಂದು Authentication Type’ ಇಲ್ಲಿ ಬಯೋಮೆಟ್ರಿಕ್ ಇತ್ಯಾದಿಗಳ ವಿವರಗಳು ಕಂಡುಬರುತ್ತದೆ. ಎರಡನೇ ಆಯ್ಕೆಯು‘Data range’ ಆಗಿರುತ್ತದೆ. ಇದರ ಅಡಿಯಲ್ಲಿ, ಒಂದು ನಿರ್ದಿಷ್ಟ ದಿನಾಂಕದಿಂದ ಇನ್ನೊಂದು ನಿಗದಿತ ದಿನಾಂಕದ ನಡುವಿನ ಮಾಹಿತಿ ಲಭ್ಯವಿರುತ್ತದೆ.
ಕೊನೆಯಲ್ಲಿ ನಿಗದಿತ ಸಮಯದ ಚೌಕಟ್ಟನ್ನು ಭರ್ತಿ ಮಾಡುವ ಮೂಲಕ ನಿಮ್ಮ ಆಧಾರ್ ಬಳಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು.