ತುಳಸಿ ಗಿಡಕ್ಕೆ ಈ ದಿನದಂದು ತಪ್ಪಿಯೂ ನೀರು ಹಾಕಬೇಡಿ.. ಲಕ್ಷ್ಮೀಯ ಕೋಪಕ್ಕೆ ಗುರಿಯಾಗಿ ಸಂಪತ್ತು ನಾಶವಾಗುವುದು!
Tulsi Pooja Niyam: ತುಳಸಿ ಪೂಜೆಯಿಂದ ಲಕ್ಷ್ಮೀಯ ಕೃಪೆಗೆ ಪಾತ್ರರಾಗುತ್ತಾರೆ ಮತ್ತು ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.
ತುಳಸಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ತುಳಸಿ ಪವಿತ್ರ ಸಸ್ಯ. ತುಳಸಿಯನ್ನು ವಿಷ್ಣು ಮತ್ತು ಲಕ್ಷ್ಮಿಯ ವಾಸಸ್ಥಾನವೆಂಬುದು ಅನಾದಿ ಕಾಲದ ನಂಬಿಕೆ. ತುಳಸಿ ಗಿಡವನ್ನು ಮನೆಯ ಮುಂದೆ ನೆಟ್ಟು ಪ್ರತಿನಿತ್ಯ ಪೂಜಿಸಿದರೆ ಲಕ್ಷ್ಮೀದೇವಿಯ ಅನುಗ್ರಹ ಸಿಗುತ್ತದೆ.
ತುಳಸಿ ಪೂಜೆಯನ್ನು ಪ್ರತಿನಿತ್ಯ ಮಾಡುವುದು ವಾಡಿಕೆ. ಆದರೆ ತುಳಸಿ ಪೂಜೆಗೆ ಒಂದಷ್ಟು ನಿಯಮಗಳಿವೆ. ತುಳಸಿಗೆ ನೀರನ್ನು ಅರ್ಪಿಸಲು ಸಹ ಕೆಲವು ನಿಯಮಗಳಿವೆ. ಕೆಲವು ದಿನಗಳಂದು ತುಳಸಿಗೆ ನೀರು ಹಾಕಲೇ ಬಾರದು.
ತುಳಸಿ ಗಿಡಕ್ಕೆ ಭಾನುವಾರ ನೀರನ್ನು ಹಾಕಬೇಡಿ. ಈ ದಿನ ತುಳಸಿ ನೀರಿಲ್ಲದ ಉಪವಾಸವನ್ನು ಆಚರಿಸುತ್ತಾಳೆ. ಇದು ಮನೆಯ ಐಶ್ವರ್ಯಕ್ಕೆ ಧಕ್ಕೆ ತರುತ್ತದೆ. ಭಾನುವಾರ ತುಳಸಿಗೆ ನೀರನ್ನು ಅರ್ಪಿಸುವುದು ಉಪವಾಸವನ್ನು ಮುರಿದಂತೆ ಆಗುತ್ತದೆ.
ಏಕಾದಶಿಯ ದಿನದಂದು ಕೂಡ ತುಳಸಿ ಗಿಡಕ್ಕೆ ನೀರು ಹಾಕಬಾರದು. ಜೊತೆಗೆ ತುಳಸಿ ಎಲೆಗಳನ್ನು ಕೀಳಬಾರದು. ಏಕಾದಶಿಯಂದು ತುಳಸಿ ವಿಷ್ಣುವಿನ ಪೂಜೆಯಲ್ಲಿ ನಿರತಳಾಗಿ ನಿರ್ಜಲ ವ್ರತವನ್ನು ಆಚರಿಸುತ್ತಿರುತ್ತಾಳೆ. ನೀರನ್ನು ಅರ್ಪಿಸಿದರೆ ವ್ರತ ಭಂಗವಾದಂತೆ.
ಏಕಾದಶಿ ಮತ್ತು ಭಾನುವಾರ ಅಪ್ಪಿ ತಪ್ಪಿಯೂ ತುಳಸಿ ಗಿಡಕ್ಕೆ ನೀರು ಹಾಕಬೇಡಿ.
ಇದರಿಂದ ಲಕ್ಷ್ಮೀಯ ಕೋಪಕ್ಕೆ ಗುರಿಯಾಗಿ ಸಂಪತ್ತು ನಾಶವಾಗುವುದು. ಮನೆಯಲ್ಲಿ ಬಡತನ ವಕ್ಕರಿಸುವುದು. ಸುಖ ಸಂತೋಷಗಳು ಹಾಳಾಗುವವು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)