ದೀಪಾವಳಿ ದಿನ ದೀಪಕ್ಕೆ ಇದೇ ಎಣ್ಣೆಯನ್ನು ಬಳಸಿದರೆ ಮನೆಯಲ್ಲಿ ಶಾಶ್ವತವಾಗಿ ನೆಲೆಯಾಗುತ್ತಾಳೆ ಲಕ್ಷ್ಮೀ !ಕಷ್ಟ ದಾರಿದ್ರ್ಯ ಮತ್ತೆಂದೂ ಮರಳದಂತೆ ಹೊರಟು ಹೋಗುವುದು !
ದೀಪಾವಳಿ ಅಂದರೆ ದೀಪಗಳ ಹಬ್ಬ. ಮನೆ ತುಂಬಾ ದೀಪಗಳನ್ನು ಇಡುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.
ದೀಪಾವಳಿ ದೀಪಕ್ಕೆ ದೀಪ ಬೆಳಗುವ ಪದ್ದತಿಗೂ ನಿಯಮವಿದೆ. ಹೇಗೆ ಬೇಕೋ ಹಾಗೆ ದೀಪ ಬೆಳಗುವುದಲ್ಲ. ಕ್ರಮಬದ್ದವಾಗಿ ದೀಪ ಬೆಳಗಿದರೆ ಮಾತ್ರ ಲಕ್ಷ್ಮೀ ದೇವಿ ಮನೆ ಪ್ರವೇಶಿಸುತ್ತಾಳೆ.
ದೀಪಾವಳಿ ದಿನ ದೀಪಕ್ಕೆ ಯಾವ ಎಣ್ಣೆ ಬಳಸಬೇಕು ಎನ್ನುವುದು ಬಹಳ ಮುಖ್ಯ. ಈ ಎಣ್ಣೆಯನ್ನು ಬಳಸಿ ದೀಪ ಹಚ್ಚಿದರೆ ಲಕ್ಷ್ಮೀ, ಕುಬೇರ ಇಬ್ಬರೂ ಪ್ರಸನ್ನ ರಾಗುತ್ತಾರೆ.
ದೀಪಕ್ಕೆ ಯಾವಾಗಲೂ ತುಪ್ಪ ಮತ್ತು ಎಳ್ಳೆಣ್ಣೆಯನ್ನು ಮಾತ್ರ ಬಳಸಬೇಕು. ಬೇರೆ ಯಾವುದೇ ಎಣ್ಣೆಯನ್ನು ದೀಪಕ್ಕೆ ಬಳಸುವಂತಿಲ್ಲ.
ತುಪ್ಪದಿಂದ ಹಚ್ಚಿದ ದೀಪ ಸಾತ್ವಿಕವೆಂದೂ, ಎಳ್ಳೆಣ್ಣೆಯ ದೀಪವು ರಾಜಸವೆಂದೂ, ಕರೆಯಲಾಗುತ್ತದೆ.ಹಾಗಂತ ತುಪ್ಪ ಮತ್ತು ಎಳ್ಳೆಣ್ಣೆಯನ್ನು ಮಿಶ್ರಣ ಮಾಡಿ ಬಳಸುವಂತಿಲ್ಲ.ಹೀಗೆ ಮಾಡಿದರೆ ನರಕಪ್ರಾಪ್ತಿಯಾಗುತ್ತದೆ. .
ತುಪ್ಪ ಮತ್ತು ಎಳ್ಳೆಣ್ಣೆ ಬಹಳ ಶ್ರೇಷ್ಠವಾದುದು. ದೇವರ ಬಲಭಾಗದಲ್ಲಿ ತುಪ್ಪದ ದೀಪ ಹಚ್ಚಬೇಕು. ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಸ್ಥಾಪಿಸಬೇಕು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE MEDIA ಈ ಮಾಹಿತಿಗೆ ಜವಾಬ್ದಾರನಾಗಿರುವುದಿಲ್ಲ.