ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!
ಬಿಳಿ ಕೂದಲನ್ನು ಕಪ್ಪಾಗಿಸಲು ಕಲರ್ ಅಥವಾ ಹೇರ್ ಡೈ ಬಳಸುತ್ತಾರೆ. ಆದರೆ ಇದು ಕೂದಲು ಹಾಗೂ ನೆತ್ತಿಯನ್ನು ಹಾಳು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ನೈಸರ್ಗಿಕ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು. ಇವುಗಳು ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ. ಜೊತೆಗೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಒಂದು ರುಪಾಯಿಯೂ ಖರ್ಚಿಲ್ಲದೆ, ಈ ನೈಸರ್ಗಿಕ ಬಣ್ಣಗಳನ್ನು ತಲೆಗೆ ಹಚ್ಚಬಹುದು. ಇವುಗಳಲ್ಲಿರುವ ಪೋಷಕಾಂಶಗಳು ಕೂದಲು ಶಾಶ್ವತವಾಗಿ ಕಪ್ಪಾಗಿರುವಂತೆ ನೋಡಿಕೊಳ್ಳುತ್ತದೆ.
ಕರಿಬೇವಿನ ಎಲೆ: ಕರಿಬೇವಿನ ಎಲೆಯಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆ. ಕೂದಲಿನ ಬುಡವನ್ನು ಸರಿಪಡಿಸುವುದರ ಜೊತೆಗೆ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ. ಕೂದಲು ಉದುರುವುದನ್ನು ಸಹ ತಡೆಯುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಿ ಹೊಳೆಯುವಂತೆ ಮಾಡುತ್ತದೆ. ಇದರ ಎಣ್ಣೆಯನ್ನು ತಯಾರಿಸಲು ತೆಂಗಿನ ಎಣ್ಣೆಯನ್ನು ತೆಗೆದುಕೊಂಡು 20 ರಿಂದ 25 ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಈಗ ಈ ಎಣ್ಣೆಯನ್ನು ಫಿಲ್ಟರ್ ಮಾಡಿ. ಎಣ್ಣೆ ಹಚ್ಚಿ ಮರುದಿನ ತಲೆ ಕೂದಲನ್ನು ತೊಳೆಯಿರಿ.
ಇಂಡಿಗೋ ಪುಡಿ: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪು ಮಾಡಲು, ಗೋರಂಟಿ ಜೊತೆಗೆ ಇಂಡಿಗೋ ಪೌಡರ್ ಮಿಶ್ರಣ ಮಾಡಿ. ಅದರಲ್ಲಿ ಸ್ವಲ್ಪ ನೀರು ಬೆರೆಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಇದರಿಂದ ಕೂದಲು ತುಂಬಾ ಕಪ್ಪಾಗಿ ಹೊಳೆಯುತ್ತದೆ.
ಕಪ್ಪು ಚಹಾದ ಎಲೆ: ಬಿಳಿ ಕೂದಲನ್ನು ಕಪ್ಪು ಮಾಡಲು ಬ್ಲ್ಯಾಕ್ ಟೀ ತುಂಬಾ ಪರಿಣಾಮಕಾರಿ. ಕಪ್ಪು ಚಹಾವನ್ನು ನೀರಿನಲ್ಲಿ ಬೇಯಿಸಿ. ಎರಡು ಗಂಟೆಗಳ ಕಾಲ ಅದನ್ನು ಪಕ್ಕಕ್ಕೆ ಇರಿಸಿ. ಈಗ ನೀರಿನಿಂದ ಚಹಾ ಎಲೆಗಳನ್ನು ತೆಗೆದು ಅವುಗಳನ್ನು ಪುಡಿಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಇದರ ನಂತರ ಕೂದಲನ್ನು ತೊಳೆಯಿರಿ. ಹೀಗೆ ಮಾಡಿದರೆ ಕೂದಲು ಕಪ್ಪಾಗುವುದರ ಜೊಯೆಗೆ ಹೊಳೆಯಲಾರಂಭಿಸುತ್ತದೆ.
(ಸೂಚನೆ: ನಮ್ಮ ಲೇಖನವು ಕೇವಲ ಮಾಹಿತಿಯನ್ನು ಒದಗಿಸಲು ಮಾತ್ರ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ನ್ಯೂಸ್ ಕನ್ನಡ ಖಚಿತಪಡಿಸುವುದಿಲ್ಲ.)