ಬಿಗ್ ಬಾಸ್ ಮಾಜಿ ಸ್ಪರ್ಧಿ ನೀತು ವನಜಾಕ್ಷಿ ನಿಜವಾದ ಮಕ್ಕಳು ಯಾರು ಗೊತ್ತಾ? ಅವರೇ ಪರಿಚಯಿಸಿದ್ರು ನೋಡಿ
ಉದ್ಯಮಿ ಹಾಗೂ ಟ್ಯಾಟೂ ಆರ್ಟಿಸ್ಟ್ ಆಗಿರುವ ನೀತು ವನಜಾಕ್ಷಿ ಬಿಗ್ಬಾಸ್ 10ನೇ ಸೀಸನ್ʼನಲ್ಲಿ ಸಖತ್ ಫೇಮಸ್ ಆಗಿದ್ದರು.
ಮಿಸ್ ಇಂಟರ್‌ನ್ಯಾಶನಲ್ ಕಿರೀಟ ತೊಟ್ಟ ಭಾರತದ ಮೊದಲ ಮಂಗಳಮುಖಿ ನೀತು. ಅಂದಹಾಗೆ ಇವರನ್ನು ಒಂದಿಷ್ಟು ಜನ, ಮಮ್ಮಿ ಮಮ್ಮಿ ಎಂದು ಕರೆಯುತ್ತಿದ್ದರು. ಇದನ್ನು ಕೇಳಿದ ಅನೇಕರು, ಅವರಿಗೆ ಮಕ್ಕಳಿದ್ದಾರಾ ಎಂಬ ಪ್ರಶ್ನೆ ಕೇಳುತ್ತಿದ್ದರು. ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.
ನ್ಯೂಸ್ ಫಸ್ಟ್ʼಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ಹೆತ್ತ ತಾಯಿ ಒಬ್ಬರಾದರೆ, ನಮಗೆ ಒಳ್ಳೆಯದನ್ನು ಹೇಳಿಕೊಡುವವರು ಇನ್ನೊಬ್ಬ ತಾಯಿ. ನಮ್ಮ ಸಮುದಾಯದಲ್ಲಿ ಕೆಲವರು ಮನೆ ಬಿಟ್ಟು ಓಡಿ ಬಂದಿರುತ್ತಾರೆ. ಅವರಿಗೆ ಹೇಗೆ ಬದುಕಬೇಕು ಎಂಬುದು ಗೊತ್ತಿರುವುದಿಲ್ಲ. ನಾವೆಲ್ಲಾ ಮೊದಲೇ ನಮ್ಮ ಸಮುದಾಯಕ್ಕೆ ಬಂದಿರುವುದರಿಂದ ನಮ್ಮ ನಂತರ ಬಂದವರಿಗೆ ಅಲ್ಲಿನ ರೀತಿ-ರಿವಾಜುಗಳನ್ನು ಹೇಳಿಕೊಡುತ್ತೇವೆ" ಎಂದಿದ್ದಾರೆ.
ಒಬ್ಬ ತಾಯಿ ಮಾಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ನಮಗೆ ಒಳ್ಳೆಯದನ್ನು ಹೇಳಿಕೊಡುವ ನಮ್ಮ ಗುರುಗಳನ್ನು ನಾವು ಮಮ್ಮಿ ಅಂತಾ ಕರೆಯುವುದು ಎಂದಿದ್ದಾರೆ.
"ನಮ್ಮ ಸಮುದಾಯದಲ್ಲಿ ದೊಡ್ಡವರು-ಚಿಕ್ಕವರು ಅಂತಾ ಏನು ಇರುವುದಿಲ್ಲ. ಯಾರು ಮೊದಲು ಸೇರಿರುತ್ತಾರೋ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ. ಅವರಿಗೆ ಅನುಭವ ಜಾಸ್ತಿ ಇರುವ ಕಾರಣ ಜಾಸ್ತಿ ಮರ್ಯಾದೆ ಕೊಡಬೇಕಾಗುತ್ತದೆ. ಅವರಿಗೆಲ್ಲಾ ಹೋದ ತಕ್ಷಣ ಗೌರವ ಕೊಡುತ್ತೇವೆ"
ಏಕೆಂದರೆ ಅವರು ನಮಗೆ ಒಳ್ಳೆಯದನ್ನು ಹೇಳಿಕೊಡುತ್ತಾರೆ. ನಮಗೆ ತಾಯಿಗೆ ಸಮಾನರಾಗಿರುತ್ತಾರೆ. ಹಾಗೇ ನಾನು ಸಹ ಎಷ್ಟೋ ಜನಕ್ಕೆ ಹೇಳಿಕೊಡುತ್ತೇನೆ. ಅವರು ನನಗೆ ಮಕ್ಕಳಿದ್ದಂತೆ. ಅವರೆಲ್ಲಾ ನನ್ನನ್ನು ಪ್ರೀತಿಯಿಂದ ಮಮ್ಮಿ ಅನ್ನುತ್ತಾರೆ" ಎಂದು ಹೇಳಿದ್ದಾರೆ.