ಐಪಿಎಲ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಿಕ್ಸರ್ ಬಾರಿಸಿ ಕ್ರಿಕೆಟಿಗ ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಬಂಧಿಸಿದಂತೆ ಮೆಗಾ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕ್ರಿಕೆಟ್ ಲೋಕದ ಪ್ರತಿಷ್ಠಿತ ಪಂದ್ಯಾವಳಿಗೆ ಭಾರೀ ಫ್ಯಾನ್ ಬೇಸ್ ಇರೋದು ನಮಗೆಲ್ಲಾ ತಿಳಿದಿರುವ ಸಂಗತಿಯೇ.
ಇನ್ನು ಐಪಿಎಲ್‌ಗೆ ಸಾಕಷ್ಟು ಇತಿಹಾಸವಿದೆ. ಈ ಲೀಗ್‌ನಲ್ಲಿ ಅನೇಕ ದಾಖಲೆಗಳು ಸೃಷ್ಟಿಯಾಗಿದ್ದು, ಕೆಲವೊಂದು ಮುರಿಯಲ್ಪಟ್ಟಿವೆ.. ಇನ್ನೂ ಕೆಲವು ಹಾಗೆಯೇ ಇದೆ. ಇಂದು ಈ ವರದಿಯಲ್ಲಿ ಐಪಿಎಲ್‌ನಲ್ಲಿನ ಕೆಲವು ಪ್ರಥಮಗಳ ಬಗ್ಗೆ ತಿಳಿದುಕೊಳ್ಳೋಣ.
ಐಪಿಎಲ್ 2008 ರಲ್ಲಿ ಪ್ರಾರಂಭವಾಯಿತು. ಐಪಿಎಲ್ ಇತಿಹಾಸದಲ್ಲಿ ಮೊದಲ ಎಸೆತವನ್ನು 2008 ರಲ್ಲಿ ಪ್ರವೀಣ್ ಕುಮಾರ್ ಎಸೆದರೆ, ಭಾರತದ ಮಾಜಿ ದಿಗ್ಗಜ ನಾಯಕ ಸೌರವ್ ಗಂಗೂಲಿ ಎದುರಿಸಿದ್ದರು.
ಇನ್ನು ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಐಪಿಎಲ್ ಇತಿಹಾಸದಲ್ಲಿ ಮೊದಲ ವಿಕೆಟ್ ಪಡೆದರು. 2008ರಲ್ಲಿ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಪಾಕಿಸ್ತಾನದ ಸೊಹೈಲ್ ತನ್ವೀರ್ ಪರ್ಪಲ್ ಕ್ಯಾಪ್ ಗೆದ್ದಿದ್ದರು. ಋತುವಿನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಆಟಗಾರನಿಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ.
ಐಪಿಎಲ್ ಇತಿಹಾಸದಲ್ಲಿ ಮೊದಲ ಸಿಕ್ಸರ್ ಬಾರಿಸಿದ್ದು ಮಾಜಿ ಕಿವೀಸ್ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್. ಮೊದಲ ಆರೆಂಜ್ ಕ್ಯಾಪ್ ಗೆದ್ದವರು ಶಾನ್ ಮಾರ್ಷ್. ಋತುವಿನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಮೊದಲ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಯುವ ಶ್ರೀವತ್ಸ್ ಗೋಸ್ವಾಮಿಗೆ ನೀಡಲಾಯಿತು.
ಐಪಿಎಲ್ ಪ್ರಥಮಗಳ ಪಟ್ಟಿ:
ಐಪಿಎಲ್‌ನ ಮೊದಲ ಎಸೆತವನ್ನು ಬೌಲ್ ಮಾಡಿದ ಆಟಗಾರ- ಪ್ರವೀಣ್ ಕುಮಾರ್ ಮೊದಲ ಎಸೆತವನ್ನು ಆಡಿದ ಆಟಗಾರ- ಸೌರವ್ ಗಂಗೂಲಿ ಮೊದಲ ವಿಕೆಟ್- ಜಹೀರ್ ಖಾನ್ ಮೊದಲ ಸಿಕ್ಸರ್- ಬ್ರೆಂಡನ್ ಮೆಕಲಮ್ ಮೊದಲ ಶತಕ- ಬ್ರೆಂಡನ್ ಮೆಕಲಮ್ ಮೊದಲ ಉದಯೋನ್ಮುಖ ಆಟಗಾರ ಪ್ರಶಸ್ತಿ- ಶ್ರೀವತ್ಸ್ ಗೋಸ್ವಾಮಿ ಮೊದಲ ಆರೆಂಜ್ ಕ್ಯಾಪ್- ಶಾನ್ ಮಾರ್ಷ್ ಮೊದಲ ಪರ್ಪಲ್ ಕ್ಯಾಪ್- ಸೊಹೈಲ್ ತನ್ವೀರ್ ಮೊದಲ ಇಂಪ್ಯಾಕ್ಟ್ ಪ್ಲೇಯರ್- ತುಷಾರ್ ದೇಶಪಾಂಡೆ
ಐಪಿಎಲ್ ಇತಿಹಾಸದಲ್ಲಿ ಮೊದಲ ಶತಕವನ್ನು ಐಪಿಎಲ್‌ನ ಎರಡನೇ ಸೀಸನ್‌ನಲ್ಲಿ ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್ ಗಳಿಸಿದರು. 2009ರ ಋತುವಿನಲ್ಲಿ ಶತಕ ಬಾರಿಸಿದ ಇಬ್ಬರು ಆಟಗಾರರಲ್ಲಿ ಮೆಕಲಮ್ ಒಬ್ಬರು.
ಇನ್ನು ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಗೇಲ್, ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ 175 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.