Maxwell-Vini Raman: ಗ್ಲೆನ್ ಮ್ಯಾಕ್ಸ್​ವೆಲ್ ಕೈಹಿಡಿಯುತ್ತಿರುವ ವಿನಿ ರಾಮನ್ ಯಾರು?

Mon, 15 Nov 2021-4:25 pm,

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಕೈಹಿಡಿಯುತ್ತಿರುವುದು ವಿನಿ ರಾಮನ್. ವಿನಿ ರಾಮನ್ ತಮಿಳುನಾಡು ಮೂಲದವರಾಗಿದ್ದರೂ ಹುಟ್ಟಿ ಬೆಳೆದದ್ದೆಲ್ಲಾ ಕಾಂಗರೂ ನಾಡು ಆಸ್ಟ್ರೇಲಿಯಾದಲ್ಲಿ. ವಿಕ್ಟೋರಿಯಾದ ಮೆಂಟನ್ ಗರ್ಲ್ಸ್ ಸೆಕೆಂಡರಿ ಕಾಲೇಜಿನಲ್ಲಿ ಮೆಡಿಕಲ್ ಸೈನ್ಸ್ ಓದಿರುವ ವಿನಿ ಸದ್ಯ ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿನಿ ರಾಮನ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ ವಿವರಗಳ ಪ್ರಕಾರ, ಡಿಸೆಂಬರ್ 2013ರಂದು ಮೆಲ್ಬೋರ್ನ್ ಸ್ಟಾರ್ಸ್ ಈವೆಂಟ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಭಾರತೀಯ ಮೂಲದ ಹುಡುಗಿಯ ಬಗ್ಗೆ ಮೊದಲು ಆಸಕ್ತಿ ತೋರಿದ್ದು ಆಸೀಸ್ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್.

          View this post on Instagram                      

A post shared by VINI (@vini.raman)

 

ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ವಿನಿ ರಾಮನ್ 2017ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ವಿನಿ ಅವರಿಗೆ ಮೊದಲು ‘ಐ ಲವ್ ಯೂ’ ಅಂತಾ ಹೇಳಿದ್ದು ಮ್ಯಾಕ್ಸ್​ವೆಲ್ ಅಂತೆ.  

ಇತ್ತೀಚೆಗಷ್ಟೇ ಭಾರತೀಯ ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಇವರಿಬ್ಬರು ಒಟ್ಟಿಗೆ ದೇಶ ಸುತ್ತಲು, ಪ್ರಯಾಣಿಸಲು ಇಷ್ಟಪಡುತ್ತಾರಂತೆ. ಪ್ಯಾರಿಸ್, ಲಂಡನ್, ಡಬ್ಲಿನ್, ನ್ಯೂಜಿಲೆಂಡ್ ಸೇರಿದಂತೆ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ.

2020ರ ಫೆಬ್ರವರಿ 21ರಂದು ನಿಶ್ಚಿತಾರ್ಥ ಮಾಡಿಕೊಂಡ ನಂತರ ಈ ಜೋಡಿ ಅದೇ ವರ್ಷ ಮದುವೆಯಾಗಲು ನಿರ್ಧರಿಸಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ ಕಾರಣ ಈ ಜೋಡಿ ತಮ್ಮ ಮದುವೆಯ ದಿನಾಂಕವನ್ನು ಮುಂದೂಡಬೇಕಾಯಿತು. ಮುಂದಿನ ವರ್ಷ ಅಂದರೆ 2022ರ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link