ʻಲಕ್ಕಿʼ ಸಿನಿಮಾ ಬಳಿಕ ಯಶ್ ಜೊತೆ ರಮ್ಯಾ ನಟಿಸದಿರಲು ಇದೇನಾ ಕಾರಣ?
ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಇಬ್ಬರೂ ಕನ್ನಡ ಚಿತ್ರರಂಗದ ಫೇಮಸ್ ತಾರೆಯರು. ಪ್ರತಿಭಾನ್ವಿತ ಕಲಾವಿದರು. ಯಶ್ ಮತ್ತು ರಮ್ಯಾ ಜೋಡಿ ಒಂದು ಕಾಲದಲ್ಲಿ ಸಖತ್ ಸದ್ದು ಮಾಡಿತ್ತು.
ಬಘೀರ ನಿರ್ದೇಶಕ ಡಾ.ಸೂರಿ ಆಕ್ಷನ್ ಕಟ್ ಹೇಳಿದ್ದ ಚಿತ್ರದಲ್ಲಿ ರಮ್ಯಾ ಮತ್ತು ಯಶ್ ಒಟ್ಟಿಗೆ ನಟಿಸಿದ್ದರು. ರಮ್ಯಾ ಮತ್ತು ಯಶ್ ಕೆಮೆಸ್ಟ್ರಿ ಸಿನಿಪ್ರಿಯರ ಮನಗೆದ್ದಿತ್ತು.
ಈ ಸಿನಿಮಾ ಹೆಸರೇ ಲಕ್ಕಿ. ರಮ್ಯಾ ಹಾಗೂ ಯಶ್ ಅವರ ಲಕ್ಕಿ ಸಿನಿಮಾ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ರಮ್ಯಾ ಹಾಗೂ ಯಶ್ ಜೋಡಿಯನ್ನು ತೆರೆ ಮೇಲೆ ಜನರು ಇಷ್ಟಪಟ್ಟರು.
ಯಶ್ ಮತ್ತು ರಮ್ಯಾ ಲಕ್ಕಿ ಸಿನಿಮಾ ಬಳಿಕ ಒಟ್ಟಿಗೆ ನಟಿಸಲೇ ಇಲ್ಲ. ರಮ್ಯಾ ಹಾಗೂ ಯಶ್ ಅವರನ್ನು ಮತ್ತೊಮ್ಮೆ ತೆರೆ ಮೇಲೆ ನೋಡಬೇಕೆಂಬ ಅವರ ಅಭಿಮಾನಿಗಳ ಕನಸು ನನಸಾಗಲೇ ಇಲ್ಲ.
ಲಕ್ಕಿ ಸಿನಿಮಾ ನಂತರ ರಮ್ಯಾ ಹಾಗೂ ಯಶ್ ಯಾಕೆ ಒಟ್ಟಿಗೆ ಬೇರೆ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಲಿಲ್ಲ ಎಂಬ ಪ್ರಶ್ನೆಗೆ ಈಗಲೂ ಸರಿಯಾದ ಉತ್ತರವಿಲ್ಲ.
ಕೆಲವು ವರದಿಗಳ ಪ್ರಕಾರ, ಇಬ್ಬರ ನಡುವೆ ಮನಸ್ತಾಪವಾಗಿತ್ತಂತೆ. ಆದರೆ ಈ ಬಗ್ಗೆ ಯಾವುದೇ ನಿಖರ ಮಾಹಿತಿ ಹೊರಬಿದ್ದಿಲ್ಲ.
ಅದೇನೆ ಇರಲಿ ಯಶ್ ಮತ್ತು ರಮ್ಯಾ ಅವರನ್ನ ಮತ್ತೊಮ್ಮೆ ತೆರೆ ಮೇಲೆ ಒಟ್ಟಿಗೆ ನೋಡಬೇಕೆಂಬ ಬಯಕೆ ಸಿನಿ ಪ್ರೇಕ್ಷಕರದ್ದಾಗಿದೆ.