ಜನವರಿಗೂ ಮುನ್ನ ವೇತನ ನಿಯಮದಲ್ಲಿ ಬದಲಾವಣೆ! ಸರ್ಕಾರಿ ನೌಕರ ಮೂಲ ವೇತನದಲ್ಲಿ ಆಗುವುದು ದೊಡ್ಡ ಭಾರೀ ಹೆಚ್ಚಳ
ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು 3% ಹೆಚ್ಚಿಸಿದೆ.ಇದಾದ ನಂತರ ಒಟ್ಟು ತುಟ್ಟಿ ಭತ್ಯೆ ಮತ್ತು ತುಟ್ಟಿಪರಿಹಾರ 53% ಕ್ಕೆ ಏರಿತು.
ತುಟ್ಟಿಭತ್ಯೆ 50% ದಾಟಿದಾಗ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆಯೇ ಎನ್ನುವ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಡಿಎಯನ್ನು ಮೂಲ ವೇತನಕ್ಕೆ ಲಿಂಕ್ ಮಾಡಲಾಗುತ್ತದೆಯೇ? ಇದಕ್ಕೆ ಇರುವ ನಿಯಮವೇನು? ನೋಡೋಣ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಮನಸ್ಸಿನಲ್ಲಿ ಈ ಪ್ರಶ್ನೆ ಬರಲು ಕಾರಣವಿದೆ. ಈ ಹಿಂದೆ 2004ರಲ್ಲಿಯೂ ಇದೇ ಪರಿಸ್ಥಿತಿ ಇತ್ತು. ತುಟ್ಟಿಭತ್ಯೆ 50% ಮಿತಿಯನ್ನು ದಾಟಿದ ನಂತರ, ಸರ್ಕಾರ ಅದನ್ನು ಮೂಲ ವೇತನಕ್ಕೆ ಲಿಂಕ್ ಮಾಡಿತ್ತು.
ಈ ಕಾರಣದಿಂದಾಗಿ, ಸರ್ಕಾರವು ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಮರು ಲಿಂಕ್ ಮಾಡಬೇಕೆನ್ನುವುದು ನೌಕರರ ನಿರೀಕ್ಷೆ. ಏಕೆಂದರೆ ತುಟ್ಟಿಭತ್ಯೆ ಮೂಲ ವೇತನಕ್ಕೆ ಲಿಂಕ್ ಆದರೆ ನೌಕರರು ಮತ್ತು ಪಿಂಚಣಿದಾರರಿಗೆ ಹೆಚ್ಚಿನ ಸಂಬಳ ಮತ್ತು ಪಿಂಚಣಿ ಸಿಗುತ್ತದೆ.
ತುಟ್ಟಿಭತ್ಯೆಯನ್ನು ನೌಕರರ ಮೂಲ ವೇತನಕ್ಕೆ ಸೇರಿಸಿದರೆ, ಅದು ಭಾರೀ ವೇತನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ನೌಕರರ ಒಟ್ಟು ವೇತನದಲ್ಲಿ ಶಾಶ್ವತ ಬದಲಾವಣೆಯನ್ನು ತರುತ್ತದೆ.
ಇದಲ್ಲದೆ, ಬದಲಾವಣೆಯು ನೌಕರರ ಪಾವತಿಗಳು, ಬೋನಸ್, ಪಿಂಚಣಿ ಮತ್ತು ಇತರ ಭತ್ಯೆಗಳ ಮೇಲೂ ಪರಿಣಾಮ ಬೀರುತ್ತದೆ. ಏಕೆಂದರೆ ಇವೆಲ್ಲವೂ ಮೂಲ ವೇತನವನ್ನು ಆಧರಿಸಿವೆ. ಇದು ಉದ್ಯೋಗಿಗಳ ಒಟ್ಟು ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುತ್ತದೆ.
ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸರಕಾರ ಈ ವಿಚಾರವಾಗಿ ಗಂಭೀರವಾಗಿ ಚಿಂತಿಸಿ ನೌಕರರ ಹಿತದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಳ್ಳಲು ಮುಂದಾಗಿರುವುದು ಸ್ಪಷ್ಟವಾಗಿದೆ.
ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ನೋಡಲು ಶಿಫಾರಸು ಮಾಡಲಾಗಿದೆ.