BBK10: ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ, ಶೋ ಮುಗಿಯುತ್ತಿದ್ದಂತೆ ಮದುವೆ ಆಗ್ತಾರಾ ಈ ಜೋಡಿ!?
ಬಿಗ್ ಬಾಸ್ ವೀಕ್ಷಕರ ಗಮನಸೆಳೆದಿರುವ ಈ ಇಬ್ಬರು ಸ್ಪರ್ಧಿಗಳು ಶೋ ಮುಗಿಯುತ್ತಿದ್ದಂತೆ ಮದುವೆ ಆಗ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಮಧ್ಯೆ ಸ್ನೇಹಕ್ಕಿಂತ ಮಿಗಿಲಾದ ಒಂದು ಬಾಂಧವ್ಯ ಕಾಣುತ್ತಿದೆ.
ನಮ್ರತಾಗೂ ಕಾರ್ತಿಕ್ ಅಂದರೆ ಇಷ್ಟ ಅನಿಸುತ್ತಿದೆ. ಇದೇ ಕಾರಣಕ್ಕಿರಬಹುದೇನೋ, ಒಮ್ಮೆ ನಮ್ರತಾ ಅವರು ಕಾರ್ತಿಕ್ ಬಳಿ ಹೋಗಿ ಇನ್ಡೈರೆಕ್ಟ್ ಆಗಿ ಈ ಬಗ್ಗೆ ಮಾತನಾಡಿದ್ದರು.
ಕಾರ್ತಿಕ್ ಫ್ಲರ್ಟ್ ಮಾಡುತ್ತಿದ್ದಾರೆ ಎಂದು ತಿಳಿದ ನಮ್ರತಾ, ನೀವೇನಾರು ಹೇಳಿ ಐ ಲೈಕ್ ಯು ಎಂದಿದ್ದರು. ನಾನು ಮದುವೆ ಆಗು ಅಂತಾ ಕೂರ್ತಿನಿ ಆಗ್ತೀರಾ? ಎಂದು ಪ್ರಶ್ನಿಸಿದ್ದರು.
ಕಾರ್ತಿಕ್ ಮತ್ತು ನಮ್ರತಾ ರನ್ನು ಬಿಗ್ ಬಾಸ್ ವೀಕ್ಷಕರು ಸಹ ಇಷ್ಟ ಪಡು ಆರಂಭಿಸಿದ್ದಾರೆ. ಈ ಸುಂದರ ಸ್ನೇಹ ಪ್ರೇಮವಾಗಿ ಚಿಗುರೊಡೆದು ಮದುವೆಯ ಹಂತ ತಲುಪುತ್ತಾ ಕಾದು ನೋಡಬೇಕಿದೆ.