Wimbledon 2022: ಯಾವ ಹಾಲಿವುಡ್ ಸಿನಿ ತಾರೆಗೂ ಕಡಿಮೆಯಿಲ್ಲ ಎಲೆನಾ ರೈಬಾಕಿನಾ!
3ನೇ ಶ್ರೇಯಾಂಕದ ಜಬೇರ್ ಅವರು ಮರಿಯಾ ವಿರುದ್ಧ ಒಂದು ಗಂಟೆ ನಲವತ್ಮೂರು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 6-2, 3-6, 6-1 ಅಂತರದಿಂದ ಗೆದ್ದರು.
ಗುರುವಾರದಂದು ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಜರ್ಮನಿಯ ತಟ್ಜಾನಾ ಮರಿಯಾ ವಿರುದ್ಧ ಜಯಗಳಿಸಿದ ನಂತರ ವಿಂಬಲ್ಡನ್ ಫೈನಲ್‌ನಲ್ಲಿ ಟುನೀಶಿಯಾದ ಓನ್ಸ್ ಜಬೇರ್ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದರು.
ಇದರ ಜೊತೆ ಅವರ ಎದುರಾಳಿ ಜಬೇರ್ ಕೂಡ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಮೊದಲ ಟ್ಯುನೀಷಿಯನ್ ಮತ್ತು ಅರಬ್ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
23 ವರ್ಷದ ರೈಬಾಕಿನಾ ಅವರು 2011 ರಲ್ಲಿ 21 ವರ್ಷದ ಪೆಟ್ರಾ ಕ್ವಿಟೋವಾ ಗೆದ್ದ ನಂತರ ಈ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದು ಒಟ್ಟಾರೆಯಾಗಿ ಅವರ ಮೂರನೇ ಟ್ರೋಪಿಯಾಗಿದೆ. ಅವರು ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಪ್ಲೇ-ಆಫ್ ಸೇರಿದಂತೆ ನಾಲ್ಕು ನೇರ ಫೈನಲ್‌ಗಳಲ್ಲಿ ಸೋತಿದ್ದರು.